ಅಭಿವೃದ್ಧಿ ಏನೆಂದು ತಿಳಿಸಿ ಮತಯಾಚಿಸಲಿ: ಮಾಜಿ ಶಾಸಕ ಬಾಲಕೃಷ್ಣಗೆ ಎ.ಮಂಜುನಾಥ್ ಸವಾಲ್,ಜೆಡಿಎಸ್ ಕಿರುಹೊತ್ತಗೆ ಬಿಡುಗಡೆ

22 bidadi photo 1
Published on

ಬಿಡದಿ: ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಕಳೆದ 10 ವರ್ಷಗಳಿಂದ ಮಾಡಲಾಗದ ಅಭಿವೃದ್ಧಿಯನ್ನು 4 ವರ್ಷಗಳಲ್ಲಿ ಮಾಡಿದ್ದೇನೆ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.

ಪಟ್ಟಣ ನಿವಾಸದಲ್ಲಿ ಬುಧವಾರ ಪುರಸಭಾ ಚುನಾವಣೆ ಅಂಗವಾಗಿ ಜೆಡಿಎಸ್‌ನಿಂದ ಹೊರತರಲಾದ ‘ಸಾಧನೆಯ ಹಾದಿಯಲ್ಲಿ’ ಕಿರುಹೊತ್ತಗೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಲ್ಕು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿಯನ್ನು ಕಿರುಹೊತ್ತಗೆ ರೂಪದಲ್ಲಿ ಹೊರತರಲಾಗಿದೆ. ಈ ಮೂಲಕ 23 ವಾರ್ಡ್‌ಗಳ ಮತದಾರರಿಗೆ ಅಭಿವೃದ್ಧಿ ಬಗ್ಗೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.

ವಾಜಿ ಶಾಸಕರು ಚರ್ಚೆಗೆ ಬರಲಿ ಎಂದು ಭಾಷಣ ವಾಡುತ್ತಿದ್ದಾರೆ. 10 ವರ್ಷಗಳ ಕಾಲ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಮತಯಾಚಿಸಲಿ ಎಂದ ಅವರು, ಅಭ್ಯರ್ಥಿಗಳ ವೈಯಕ್ತಿಕ ಜೀವನಗಳ ಬಗ್ಗೆ ಮಾತನಾಡುವುದನ್ನು ಬಿಡಿ ಎಂದರು.

ಸಂಸದ ಡಿ.ಕೆ.ಸುರೇಶ್ ಅವರ ಗೆಲುವಿನಲ್ಲಿ ಜೆಡಿಎಸ್ ಮುಖಂಡರ ಪಾತ್ರವಿದೆ. ಸಂಸದರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರೆ ಸಾಲದು. ಸಂಸದರ ನಿಧಿಯ ಕೊಡುಗೆ ಏನು ಎಂದು ಪ್ರಶ್ನಿಸಿದ ಪುರಸಭೆ ವಾಜಿ ಸದಸ್ಯ ಬಿ.ಎಂ.ರಮೇಶ್‌ಕುವಾರ್, ಶಾಸಕ ಎ.ಮಂಜುನಾಥ್ ಅವರನ್ನು ಹಿಂದೆ ಸರಿಸುವ ಷಡ್ಯಂತ್ರ ಫಲಿಸದು ಎಂದರು.

ಜಿಪಂ ಮಾಜಿ ಸದಸ್ಯ ಎಚ್.ಎಲ್.ಚಂದ್ರು, ತಾಪಂ ವಾಜಿ ಅಧ್ಯಕ್ಷೆ ಲಕ್ಷ್ಮೀಮಂಜುನಾಥ್, ಶೇಷಪ್ಪ, ಆರ್‌ಎಸ್‌ಎಸ್‌ಬಿಎನ್ ವಾಜಿ ಅಧ್ಯಕ್ಷ ನರಸಿಂಹಯ್ಯ, ಪುರಸಭೆ ವಾಜಿ ಸದಸ್ಯ ಕುವಾರ್, ಗ್ರಾಪಂ ವಾಜಿ ಸದಸ್ಯರಾದ ಎಚ್.ಎಸ್.ಯೋಗಾನಂದ, ಮುನಿತಿಮ್ಮಯ್ಯ, ಮುಖಂಡರಾದ ಸೋಮೇಗೌಡ, ಸಿದ್ದರಾಜು, ವಾಲಿ ರಮೇಶ್, ಲಕ್ಷ್ಮಣ್, ಗೋಪಾಲ್, ಮಹೇಶ್ ಸೇರಿ 23 ವಾರ್ಡ್‌ಗಳ ಜೆಡಿಎಸ್ ಅಭ್ಯರ್ಥಿಗಳು ಇದ್ದರು.

ಪಿಎ, ಚಾಲಕರಿಗೆ ನಿವೇಶನ ಹಂಚಿದ್ದು ಯಾರು?: ಶಾಸಕರಾಗಿದ್ದಾಗ ವೃಷಭಾವತಿ ಪುರದಲ್ಲಿ ಪಿಎಗಳಿಗೆ, ಕಾರು ಚಾಲಕರಿಗೆ, ಕೆಂಗೇರಿಯಲ್ಲಿ ವಾಸವಿದ್ದವರಿಗೆ ನಿವೇಶನ ಹಂಚಿಕೆ ಮಾಡಿದ್ದು ನಾನಲ್ಲ. ಕಾಂಗ್ರೆಸ್‌ನಿಂದ ಎಂಪಿ, ಎಂಎಲ್ಸಿಗಳು ಈ ಭಾಗದಲ್ಲಿ ಇದ್ದರೂ ಅಭಿವೃದ್ಧಿ ಏಕೆ ಮಾಡಲಿಲ್ಲ. ಮೇಡನಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ವಾಡಿ ಶ್ರೀಮತಿಯವರ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಡುವವರಿಂದ ರಾಜಕೀಯ ಕಲಿಯಬೇಕಿಲ್ಲ ಎಂದು ಶಾಸಕ ಎ.ಮಂಜುನಾಥ್ ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net