ಸಾಮಾಜಿಕ ಚಿಂತನೆಯಿಂದ ಕಾವ್ಯ ರಚನೆ ಸಾಧ್ಯ; ಡಾ. ಆರ್.ಎಂ. ಕುಬೇರಪ್ಪ

11-RNR-03
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 48;
Published on

ರಾಣೆಬೆನ್ನೂರ: ಸಾಹಿತ್ಯಿಕ ವಾತಾವರಣ ಕಲಿಕೆಗೆ ಸ್ಫೂರ್ತಿ ನೀಡುತ್ತದೆ. ಸತತಾಭ್ಯಾಸ, ನಿರಂತರ ಪರಿಶ್ರಮ, ಸಾಮಾಜಿಕ ಚಿಂತನೆ ಇದ್ದರೆ ಕಾವ್ಯ ರಚನೆಯಾಗುತ್ತದೆ ಎಂದು ಬಿಎಜೆಎಸ್‌ಎಸ್ ಕಾಲೇಜ್‌ನ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಹೇಳಿದರು.
ನಗರದ ಬಿ.ಎ.ಜೆ.ಎಸ್.ಎಸ್ ಬಿ.ಇಡಿ ಕಾಲೇಜ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಹಿತ್ಯ ಸೌರಭ ಹಾಗೂ ಸಾಹಿತ್ಯಿಕ ಕೃತಿಗಳ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜ್‌ನ ಪ್ರಾಚಾರ್ಯ ಡಾ. ಎಂ.ಎಂ. ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು.
ಎಚ್.ಎ. ಭಿಕ್ಷಾವರ್ತಿಮಠ, ಡಾ. ಹೊನ್ನಪ್ಪ ಹೊನ್ನಕ್ಕಳವರ, ಕೆ.ಕೆ. ಹಾವಿನಾಳ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಭಾಗ್ಯ ದೇವಗಿರಿಮಠ ಪ್ರಾರ್ಥಿಸಿದರು. ಎ. ಶಂಕರನಾಯ್ಕ ಸ್ವಾಗತಿಸಿದರು. ಡಾ. ಎಚ್.ಐ. ಬ್ಯಾಡಗಿ ನಿರೂಪಿಸಿದರು. ಪರಶುರಾಮ ಪವಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net