ಬಜಾಜ್​ ಫ್ರೀಡಂ 125 ರಾಜ್ಯಗಳಲ್ಲಿ ಲಭ್ಯ; 2 ಕೆ.ಜಿ. ಸಿಎನ್​ಜಿ, 2 ಲೀ. ಪೆಟ್ರೋಲ್​ ಸಾಮರ್ಥ್ಯ

Bike
Published on

ಬೆಂಗಳೂರು: ಬಜಾಜ್​ ಆಟೋ ಲಿಮಿಟೆಡ್​ ವಿಶ್ವದ ಪ್ರಥಮ 'ಸಿಎನ್​ಜಿ ಮೋಟಾರ್​ ಸೈಕಲ್​ ಫ್ರೀಡಂ 125' ಅನ್ನು ಕಳೆದ ಮಾರುಕಟ್ಟೆಗೆ ಪರಿಚಯಿಸಿದೆ. ಬಿಡುಗಡೆಯಾದ ಮೊದಲ ವಾರದಲ್ಲಿ 30 ಸಾವಿರಕ್ಕೂ ಹೆಚ್ಚು ವಿಚಾರಣೆಗಳು ದಾಖಲಾಗಿವೆ. ಇದು ದೇಶಾದ್ಯಂತ ಬಿಡುಗಡೆಗೊಳಿಸುವ ಯೋಜನೆಗೆ ಇನ್ನಷ್ಟು ಹುರುಪು ನೀಡಿದೆ ಎಂದು ಬಜಾಜ್​ ಆಟೋ ಲಿ. ತಿಳಿಸಿದೆ.

ಪೆಟ್ರೋಲ್​ ಮೋಟಾರ್​ ಸೈಕಲ್​ಗಳಿಗೆ ಹೋಲಿಸಿದರೆ ಬಜಾಜ್​ ಫ್ರೀಡಂ 125 ಗ್ರಾಹಕರಿಗೆ ಶೇ.50 ಕಡಿಮೆ ಕಾರ್ಯಾಚರಣೆ ವೆಚ್ಚ ನೀಡುತ್ತದೆ. ಇದರಲ್ಲಿರುವ ಸುಧಾರಿತ ಸುರತೆ ವೈಶಿಷ್ಟ್ಯಗಳಲ್ಲಿ ಟ್ರೆಲ್ಲಿಸ್​ ಫ್ರೇಮ್​ನಲ್ಲಿ ಇಂಟಿಗ್ರೇಟೆಡ್​ ಸಿಎನ್​ಜಿ ಟ್ಯಾಂಕ್​ ಸೇರಿದೆ. 2 ಕೆ.ಜಿ. ಸಿಎನ್​ಜಿ ಭರ್ತಿ ಮಾಡಿದರೆ 200 ಕಿ.ಮೀ. ಕ್ರಮಿಸಬಹುದಾಗಿದೆ. ಹೆಚ್ಚುವರಿಯಾಗಿ 2 ಲೀ. ಸಾಮರ್ಥ್ಯದ ಪೆಟ್ರೋಲ್​ ಟ್ಯಾಂಕ್​ ಇದ್ದು, 330 ಕಿ.ಮೀ. ದೂರ ಪ್ರಯಾಣಿಸಬಹುದಾಗಿದೆ.

ಬಜಾಜ್​ ಫ್ರೀಡಂ 125ನಲ್ಲಿ ಇದೇ ಮೊದಲ ಬಾರಿಗೆ ಉದ್ದನೆಯ ಕ್ವಿಲ್ಟೆಡ್​ ಸೀಟ್​, ಎಲ್​ಇಡಿ ಹೆಡ್​ ಲ್ಯಾಂಪ್​, ಡಿಜಿಟಲ್​ ಸ್ಪೀಡೋಮೀಟರ್​ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ ಇದೆ. ಸಿಎನ್​ಜಿ ಟ್ಯಾಂಕ್​ ಮತ್ತು ಕಿಟ್​ ಅನ್ನು ಕ್ರಮಬದ್ಧವಾಗಿ ಅಳವಡಿಸಲಾಗಿದ್ದು, ಸುರತೆ ವಿಷಯದಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗಿದೆ.

ಬಜಾಜ್​ ಫ್ರೀಡಮ್​ 125ನಲ್ಲಿ ಎಬೋನಿ ಬ್ಲ್ಯಾಕ್, ಕ್ಯಾರಿಬಿಯನ್​ ಬ್ಲ್ಯೂ, ಸೈಬರ್​ ವೈಟ್​, ರೇಸಿಂಗ್​ ರೆಡ್​ ಮತ್ತು ಪ್ಯೂಟರ್​ ಗ್ರೇ ಬಣ್ಣದಲ್ಲಿ ಲಭ್ಯವಿದೆ. ಮೂರು ಶ್ರೇಣಿಯಲ್ಲಿ ಲಭ್ಯವಿದ್ದು, ಬೆಂಗಳೂರು ಎಕ್ಸ್​ ಶೋರೂಮ್​ ಆರಂಭಿಕ ದರ 94,995 ರೂ. ಆಗಿದೆ.

ಭಾರತೀಯರಿಗೆ ಬಜಾಜ್​ ಫ್ರೀಡಂ 125 ಒದಗಿಸುವುದಕ್ಕೆ ಬದ್ಧವಾಗಿದ್ದು, ಇದು ಪರಿಸರದ ಮೇಲೆ ಸಾರಿಗೆಯಿಂದಾಗುವ ಮಾಲಿನ್ಯವನ್ನು ನಿಯಂತ್ರಿಸುತ್ತದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. 77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಮೋಟಾರ್​ ಸೈಕಲ್​ನ ಲಭ್ಯತೆಯನ್ನು ಕರ್ನಾಟಕ ಸೇರಿ 77 ನಗರಗಳಿಗೆ ವಿಸ್ತರಿಸುತ್ತಿದ್ದೇವೆ.

-ಸಾರಂಗ್​ ಕಾನಡೆ, ಬಜಾಜ್​ ಆಟೋ ಲಿ. ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net