

ಬೆಂಗಳೂರು: ಬಜಾಜ್ ಆಟೋ ತನ್ನ ಬಹುನಿರೀತ ಪಲ್ಸರ್ ಎನ್ 250 ಬೈಕ್ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಲವು ನವೀಕರಣ ಹೊಂದಿದ್ದು, ಗ್ಲೋಸಿ ರೇಸಿಂಗ್ ರೆಡ್, ಬ್ರೂಕ್ಲಿನ್ ಬ್ಲಾಕ್ ಹಾಗೂ ಪರ್ಲ್ ಮೆಟಾಲಿಕ್ ವೈಟ್ ಸೇರಿ ಒಟ್ಟು ಮೂರು ಬಣ್ಣದಲ್ಲಿ ಬೈಕ್ ಲಭ್ಯವಿದೆ ಎಂದು ಬಜಾಜ್ ತಿಳಿಸಿದೆ.
ಪಲ್ಸರ್ ಎನ್ 250 ಬೈಕ್ನಲ್ಲಿ ಡಿಜಿಟಲ್ ವ್ಯವಸ್ಥೆಯಿದ್ದು, ಬ್ಲೂಟೂತ್ ಸಂಪರ್ಕ ಹೊಂದಿದೆ. ಫೋನ್ ಕರೆ ಹಾಗೂ ಎಸ್ಎಂಎಸ್ ಅರ್ಲಟ್, ರ್ಟನ್&ಬೈ&ರ್ಟನ್ ನ್ಯಾವಿಗೇಷನ್, ಸ್ಪೀಡೋಮೀಟರ್, ಓಡೋಮೀಟರ್, ಇಂಧನ ಮಟ್ಟ, ಮೈಲೇಜ್ ಸೇರಿದಂತೆ ಸಾಕಷ್ಟು ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದಾಗಿದೆ. ಈ ಬೈಕ್ ಹೆಚ್ಚುವರಿಯಾಗಿ ಟ್ರಾನ್ ಕಂಟ್ರೋಲ್ ಹೊಂದಿದೆ. ಈ ವೈಶಿಷ್ಟ್ಯ ಹೊಂದಿರುವ ಮೊದಲ ಪಲ್ಸರ್ ಮಾದರಿ ಇದಾಗಿದೆ. 249 ಸಿಸಿ ಹೊಂದಿದ್ದು, ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ನಿಂದ ಶಕ್ತಿ ಪಡೆಯುತ್ತದೆ. ಈ ಎಂಜಿನ್ 24.1 ಬಿಎಚ್ಪಿ ಶಕ್ತಿ ಹಾಗೂ 21.5 ಎನ್ಎಂ ಟಾರ್ಕ್ ಅನ್ನು ಹೊರಹಾಕುತ್ತದೆ.
ಬೈಕ್ನ ವಿನ್ಯಾಸ ಬಹುತೇಕ ಹಿಂದಿನ ಮಾದರಿಯಂತೆ ಇದ್ದರೂ ಒಂದಷ್ಟು ನವೀಕರಿಸಿದ ಗ್ರಾಫಿಕ್ಸ್ ಒಳಗೊಂಡಿದೆ. ಜತೆಗೆ ಯುಎಸ್ಬಿ ಚಾರ್ಜಿಂಗ್ ಸ್ಲಾಟ್, ಎಲ್ಇಡಿ ಪೊಜೆಕ್ಟರ್ ಹೆಡ್ಲ್ಯಾಂಪ್, ಎಲ್ಇಡಿ ಡಿಆರ್ಎಲ್ ಹಾಗೂ ಹಿಂಭಾಗದಲ್ಲಿ ಎಲ್ಇಡಿ ಯುನಿಟ್ ಹೊಂದಿದೆ.
ಹಾರ್ಡ್ವೇರ್ ವಿಭಾಗದಲ್ಲಿ ಸಾಕಷ್ಟು ಬದಲಾವಣೆ ಅಳವಡಿಸಿಕೊಂಡಿದ್ದು, ಈಗಾಗಲೇ ಇರುವ ಮಾದರಿಯಲ್ಲಿರುವ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಗಳ ಬದಲಾಗಿ ಹೊಸ ಎನ್ 250 ಷಾಂಪೇನ್ ಗೋಲ್ಡ್ ಯುಎಸ್ಡಿ ಫೋರ್ಕ್ಗಳನ್ನು ಪಡೆದುಕೊಂಡಿದೆ. ಹಿಂಭಾಗದಲ್ಲಿ ಮೊನೊಶಾಕ್ ಯುನಿಟ್ ಅನ್ನು ಈ ಬೈಕ್ ಕೂಡಾ ಮುಂದುವರಿಸಿದೆ. ಈ ಬೈಕ್ ಡ್ಯುಯಲ್&ಚಾನೆಲ್ ಎಬಿಎಸ್ ಜತೆಗೆ 300 ಎಂಎಂ ಮುಂಭಾಗ ಹಾಗೂ 230 ಎಂಎಂ ಹಿಂಭಾಗದ ಪೆಟಲ್ ಡಿಸ್ಕ್ ಬ್ರೇಕ್ಗಳನ್ನು ಹೊಂದಿದೆ.
ಪಲ್ಸರ್ ಎನ್250 'ರೋಡ್, ರೇನ್, ಆ್ರೋಡ್' ಎಂಬ ಎಬಿಎಸ್ ರೈಡ್ ಮೋಡ್ಗಳನ್ನು ಹೊಂದಿದೆ. ಇವು ಪ್ರಿಸಿಶನ್ ರೈಡ್ನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ರೈಡರ್ನ ನಿಯಂತ್ರಣ ಹೆಚ್ಚಳಕ್ಕೆ ಪ್ರತಿ ರೈಡ್ ಮೋಡ್ನಲ್ಲಿ ಎಬಿಎಸ್ ಅನ್ನು ನೀಡಲಾಗಿದೆ. ಜತೆಗೆ ಟ್ರಾಕ್ಸನ್ ಕಂಟ್ರೋನ್ ಹೊಂದಿದೆ. ಇದು ಜಾರುವ ಸ್ಥಳಗಳಲ್ಲಿ ಹಾಗೂ ಹಾರ್ಡ್ ಅಕ್ಸಲರೇಶನ್ ಸಮಯದಲ್ಲಿ ಹಿಂಬದಿ ಚಕ್ರವನ್ನು ನಿಯಂತ್ರಿಸುತ್ತದೆ.
'ಎನ್' ಸರಣಿಯು ಪಲ್ಸರ್ ಬೈಕ್ ವಿಭಾಗದಲ್ಲಿ ಅತ್ಯಂತ ಯಶಸ್ವಿ ಶ್ರೇಣಿಯಾಗಿದೆ. ಸುಧಾರಿತ ವೈಶಿಷ್ಟ$್ಯ ಹಾಗೂ ತಂತ್ರಜ್ಞಾನ ಹೊಂದಿರುವ ಪಲ್ಸರ್ ಎನ್ 250 ಅತ್ಯುತ್ತಮ ರೈಡಿಂಗ್ ಅನುಭವ ನೀಡುತ್ತದೆ. ಜತೆಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ದೇಶದ ನಂ.1 ಸ್ಪೋರ್ಟ್ಸ್ ಮೋಟಾರ್ ಸೈಕಲ್ ಆಗಿರುವ ಪಲ್ಸರ್ನ್ನು ಇನ್ನಷ್ಟು ಬಲಪಡಿಸುವ ವಿಶ್ವಾಸವಿದೆ.
- ಸಾರಂಗ್ ಕಾನಡೆ, ಅಧ್ಯಕ್ಷ, ಬಜಾಜ್ ಆಟೋ ಮೋಟಾರ್ ಸೈಕಲ್ಸ್