PHOTOS: ರಾಣಾ ದಗ್ಗುಬಾಟಿ- ಮಿಹಿಕಾ ಮದುವೆಗೆ ಶುರುವಾಗಿದೆ ತಯಾರಿ

RANA-WEDDING-DAY-759
Published on

ಮೇ ತಿಂಗಳಲ್ಲಿ ಸರಳ ನಿಶ್ಚಿತಾರ್ಥ ಮಾಡಿಕೊಂಡಿದ್ದ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್, ಇಂದು ದಾಂಪತ್ಯಕ್ಕೆ ಕಾಲಿರಿಸಲಿದ್ದಾರೆ. ಅದಕ್ಕೂ ಮುನ್ನ ಗುರುವಾರ ಅರಿಶಿನ ಶಾಸ್ತ್ರದ ಕಾರ್ಯ ಮುಗಿದಿದ್ದು, ಮಿಹಿಕಾ ಮತ್ತು ರಾಣಾ ಇಬ್ಬರ ಅರಿಶಿಣದ ಫೋಟೋಗಳು ವೈರಲ್​ ಆಗಿದ್ದವು. ಇದೀಗ ಮದುವೆಗೆ ಈ ಜೋಡಿ ತಯಾರಾಗಿದ್ದು, ಹೈದರಾಬಾದ್​ನಲ್ಲಿರುವ ರಾಮಾನಾಯ್ಡು ಸ್ಟುಡಿಯೋದಲ್ಲಿ ಮದುವೆ ಕೆಲಸಗಳು ಜೋರಾಗಿವೆ. ಕೇವಲ 30 ಜನರಿಗಷ್ಟೇ ಮದುವೆಗೆ ಆಹ್ವಾನಿಸಲಾಗಿದ್ದು, ಸರಳವಾಗಿ ವಿವಾಹ ಕಾರ್ಯ ನೆರವೇರಲಿದೆ. ಇದೀಗ ವಿವಾಹ ಪೂರ್ವದ ಒಂದಷ್ಟು ಫೋಟೋಗಳು ಇಲ್ಲಿವೆ.. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net