ಬೆಂಗಳೂರು ಟೆಕ್ ಶೃಂಗ ನ.29 ರಿಂದ ಡಿ.1ರ ವರೆಗೆ ; ಹೊಸ ಆವಿಷ್ಕಾರಗಳ ಅನಾವರಣ, ಅಂತಾರಾಷ್ಟ್ರೀಯ ಪ್ರದರ್ಶನ

Priyank Kharge
Published on

ಬೆಂಗಳೂರು: ‘ಬ್ರೇಕಿಂಗ್ ಬೌಂಡರೀಸ್’ ಥೀಮ್ ನೊಂದಿಗೆ ಬೆಂಗಳೂರು ಟೆಕ್ ಶೃಂಗಸಭೆ-2023 ನವೆಂಬರ್ 29 ರಿಂದ ಮೂರು ದಿನ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಭಾರತ ಸ್‌ಟಾವೇರ್ ಟೆಕ್ನಾಲಜಿ ಪಾರ್ಕ್‌ಗಳು ಈ ಶೃಂಗವನ್ನು ಆಯೋಜಿಸಿವೆ.

ವಿಶ್ವದ 30 ದೇಶಗಳ ಟೆಕ್ ನಾಯಕರು, ಸ್ಟಾರ್ಟ್‌ಅಪ್‌ಗಳು, ಹೂಡಿಕೆದಾರರು ಮತ್ತು ಸಂಶೋಧನಾ ಪ್ರಯೋಗಾಲಯಗಳ ತಜ್ಞರ ಸಮಾಗಮ ಈ ಶೃಂಗದಲ್ಲಿ ಆಗಲಿದೆ ಎಂದು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಂವಾದಗಳು, ಡೀಪ್ ಟೆಕ್, ಸ್ಟಾರ್ಟ್-ಅಪ್‌ಗಳು ಮತ್ತು ಬಯೋಟೆಕ್, ಅಂತರಾಷ್ಟ್ರೀಯ ಪ್ರದರ್ಶನ, ಜಾಗತಿಕ ಆವಿಷ್ಕಾರ ಮೈತ್ರಿ, ಭಾರತ-ಅಮೆರಿಕ ಟೆಕ್ ಕಾನ್‌ಕ್ಲೇವ್, ಆರ್ ಅಂಡ್ ಡಿ-ಲ್ಯಾಬ್2-ಮಾರುಕಟ್ಟೆ, ಬಿ2ಬಿ ಸಭೆಗಳನ್ನು ಒಳಗೊಂಡಿದೆ ಎಂದರು.

ಎಸ್.ಟಿ.ಪಿ.ಐ-ಐಟಿ ರಫ್ತು ಪ್ರಶಸ್ತಿಗಳು, ಸ್ಮಾರ್ಟ್ ಬಯೋ ಪ್ರಶಸ್ತಿಗಳು, ವಿಸಿ ಪ್ರಶಸ್ತಿಗಳು, ಎಟಿಎ್ ಪ್ರಶಸ್ತಿಗಳು, ಗ್ರಾಮೀಣ ಐಟಿ ರಸಪ್ರಶ್ನೆ, ಬಯೋ ಕ್ವಿಜಾಂಡ್ ಬಯೋ ಪೋಸ್ಟರ್‌ಗಳು ಸಹ ಶೃಂಗಸಭೆಯ ಭಾಗವಾಗಲಿವೆ. ಈ ಸಮಾವೇಶ ಗಡಿಗಳನ್ನು ಮೀರಿ ಜಾಗತಿಕ ಸಂಪರ್ಕವನ್ನು ಬೆಸೆಯಲಿದೆ. 26ನೇ ಬೆಂಗಳೂರು ಟೆಕ್ ಶೃಂಗಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನ. 29 ರಂದು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಈ ಉದ್ಘಾಟನೆ ಸಮಾರಂಭಕ್ಕೆ ಕಝಾಕಿಸ್ತಾನ್ ರಾಷ್ಟ್ರದ ಡಿಜಿಟಲ್ ಅಭಿವೃದ್ಧಿ, ನಾವೀನ್ಯತೆಗಳು ಮತ್ತು ಏರೋಸ್ಪೇಸ್ ಇಂಡಸ್ಟ್ರಿ ಸಚಿವರಾದ ಬಗ್ದತ್ ಮುಸ್ಸಿನ್ ಹಾಗೂ ಮಾರ್ಕ್ ಪೇಪರ್ಮಾಸ್ಟರ್ ಮತ್ತಿತರ ಗಣ್ಯರು ಸಾಕ್ಷಿಯಾಗಲಿದ್ದಾರೆ ಎಂದು ಹೇಳಿದರು.

ಉತ್ಕೃಷ್ಟ ಕಾರ್ಯಕ್ರಮಗಳ ಆಗರ

ದಂತಕಥೆ, ಪರಂಪರೆ ಮತ್ತು ನಾಯಕತ್ವ (ಲೆಜೆಂಡ್, ಲೆಗಸಿ ಅಂಡ್ ಲೀಡರ್‌ಶಿಪ್) ವಿಭಾಗದಲ್ಲಿ ಉಪಯುಕ್ತ ಮಾತುಕತೆ ಕಾರ್ಯಕ್ರಮ ಸಜ್ಜುಗೊಳಿಸಲಾಗಿದೆ. ಎನ್.ಆರ್.ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗಿನ ಸಂವಾದದಲ್ಲಿ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಭಾಗವಹಿಸಿ, ತಮ್ಮ ದಂತಕಥೆಗಳ ಪಯಣನ್ನು ಅನಾವರಣಗೊಳಿಸುವರು ಎಂದರು.

ಕೇಂದ್ರ ಸರ್ಕಾರದ ಹೆಜ್ಜೆಗಳ ಅನಾವರಣ

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಒಳಗೊಂಡ ಮತ್ತೊಂದು ಆಸಕ್ತಿದಾಯಕ ಫೈರ್‌ಸೈಡ್ ಚಾಟ್ ಹೊಂದಿರುತ್ತದೆ. ಒಳನೋಟವುಳ್ಳ ಈ ಸಂವಾದದಲ್ಲಿ ಇಂಡಿಯಾದಲ್ಲಿ ಸಿಲಿಕಾನ್ ಡಿಸೈನ್ ಇಂಜಿನಿಯರಿಂಗ್‌ನ ಕಂಟ್ರಿ ಹೆಡ್ ಮತ್ತು ಹಿರಿಯ ಉಪಾಧ್ಯಕ್ಷ ಜಯ ಜಗದೀಶ್ ಭಾಗವಹಿಸಿ, ಭಾರತ ಸರ್ಕಾರದ ಉಪಕ್ರಮಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ವಿಶಿಷ್ಟ ದೃಷ್ಟಿಕೋನದ ಮಾಹಿತಿಯನ್ನು ನೀಡಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು. ಸುಸ್ಥಿರತೆಗಾಗಿ ತಂತ್ರಜ್ಞಾನ ಅಭಿವೃದ್ಧಿ

ಐಟಿಇ ಮತ್ತು ಡೀಪ್ ಟೆಕ್ ಟ್ರ್ಯಾಕ್ ಜಿಸಿಸಿಗಳಿಗೆ ಅವಕಾಶಗಳು, ಕೃತಕ ಬುದ್ಧಿಮತ್ತೆ, ಸುಸ್ಥಿರತೆಗಾಗಿ ತಂತ್ರಜ್ಞಾನ, ಭವಿಷ್ಯದ ಚಲನಶೀಲತೆ, ಸೈಬರ್ ಸುರಕ್ಷತೆ ಮತ್ತು ಸೈಬರ್‌ವಾರ್‌ೇರ್, 5ಜಿ ಅಳವಡಿಕೆ ಮತ್ತು ಭವಿಷ್ಯದ ವೈರ್‌ಲೆಸ್ ತಂತ್ರಜ್ಞಾನಗಳು, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳಂತಹ ಕೆಲವು ಆಸಕ್ತಿದಾಯಕ ಸೆಷನ್‌ಗಳನ್ನು ಟೆಕ್ ಸಮಿಟ್ ಹೊಂದಿದೆ.

ಜೈವಿಕ ತಂತ್ರಜ್ಞಾನದ ಚರ್ಚೆ

ಬಯೋಟೆಕ್ ವಿಭಾಗವೂ ಮೌಲ್ಯಯುತ ಚರ್ಚೆ, ಸಂವಾದಗಳಿಂದ ಕೂಡಿರುತ್ತದೆ. ಕಾರ್ಬನ್ ಮುಕ್ತ ಭವಿಷ್ಯಕ್ಕಾಗಿ ಜೈವಿಕ ತಂತ್ರಜ್ಞಾನ, ಸಂಶ್ಲೇಷಿತ ಜೀವಶಾಸ್ತ್ರ, ಸುಸ್ಥಿರ ಆಹಾರ ಮತ್ತು ಕೃಷಿ-ವ್ಯವಸ್ಥೆಗಳು, ಭವಿಷ್ಯದ ಕಾಯಿಲೆಗಳನ್ನು ತಡೆಗಟ್ಟುವುದು ಮತ್ತು ಸಾಂಕ್ರಾಮಿಕ ರೋಗಗಳನ್ನು ದೂರ ಇಡುವುದು, ಬಯೋಟೆಕ್‌ನಲ್ಲಿ ಹೂಡಿಕೆ, ಕೌಶಲ್ಯ ಅಭಿವೃದ್ಧಿ, ನೀತಿ ಮತ್ತು ನಿಯಮಗಳಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಅವಧಿಗಳನ್ನು ಹೊಂದಿರುತ್ತದೆ.

ದೊಡ್ಡ ನಿಯೋಗಗಳ ಪಾಲ್ಗೊಳ್ಳುವಿಕೆ

ಸ್ಟಾರ್ಟ್ ಅಪ್ ಕ್ಷೇತ್ರದ ಸಂವಾದ ಹಾಗೂ ಚರ್ಚೆಗಳೂ ಉಪಯುಕ್ತತೆಯ ಹಾದಿಯಲ್ಲಿವೆ. ಟ್ರ್ಯಾಕ್ ಡಿಜಿಟಲ್, ಪಬ್ಲಿಕ್ ಗೂಡ್ಸ್ , ಐಡಿಯಾ ಟು ಐಪಿಒ, ಎಮರ್ಜಿಂಗ್ ಟೆಕ್, ಫಿನ್‌ಟೆಕ್, ಅಗ್ರಿಟೆಕ್ 4.0, ಭಾರತ್ ಆಪರ್ಚುನಿಟಿ ಮತ್ತು ಸ್ಟಾರ್ಟ್‌ಅಪ್ ಇಂಡಿಯಾದಂತಹ ಸೆಷನ್‌ಗಳನ್ನು ಒಳಗೊಂಡಿದೆ. ಜಾಗತಿಕ ಆವಿಷ್ಕಾರ ಮೈತ್ರಿ ಪಾಲುದಾರ ರಾಷ್ಟ್ರಗಳ ದೊಡ್ಡ ನಿಯೋಗಗಳು ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಯಾವ, ಯಾವ ದೇಶ ಭಾಗಿ:

ಆಸ್ಟ್ರೇಲಿಯಾ, ಫಿನ್‌ಲ್ಯಾಂಡ್, ನೆದರ್‌ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಡೆನ್ಮಾರ್ಕ್ ಸೇರಿದಂತೆ ಪಾಲುದಾರ ರಾಷ್ಟ್ರಗಳನ್ನು ಒಳಗೊಂಡ ಸುಮಾರು ರಾಷ್ಟ್ರಗಳಾದ ಸ್ವೀಡನ್, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಇಸ್ರೇಲ್, ಪೋಲೆಂಡ್, ಆಸ್ಟ್ರಿಯಾ, ಜರ್ಮನಿ ಮತ್ತು ಎನ್.ಆರ್.ಡಬ್ಲ್ಯು, ಜಪಾನ್, ಸ್ವಿಟ್ಜರ್ಲೆಂಡ್, ಲಿಥುವೇನಿಯಾ ಮತ್ತು ಇಯು ಇನ್ನೂ ಹಲವು ದೇಶಗಳ ಸಚಿವರ ನೇತೃತ್ವದ ನಿಯೋಗಗಳು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಭವಿಷ್ಯದ ಆವಿಷ್ಕಾರಗಳನ್ನು ಸಕ್ರಿಯಗೊಳಿಸಲು ಹಾಗೂ ಚಿಂತನೆಯ ವಿನಿಮಯವನ್ನು ಸಕ್ರಿಯಗೊಳಿಸಲು ಮತ್ತು ವಾಣಿಜ್ಯ ಸ್ಥಳ, ಇ-ಕಾಮರ್ಸ್, ಸಪ್ಲೈ ಚೈನ್ ಮತ್ತು ಲಾಜಿಸ್ಟಿಕ್ಸ್, ಹೆಲ್ತ್‌ಟೆಕ್, ಎವಿಜಿಸಿ ಮತ್ತು ಮುಂತಾದವುಗಳ ಮೇಲೆ ಶೃಂಗ ಕೇಂದ್ರೀಕರಿಸಲಿದೆ.

ಯುಎಸ್‌ಎ ಟೆಕ್ ಕಾನ್‌ಕ್ಲೇವ್ ಉದ್ಘಾಟನೆ:

ನ. 29ರಂದು ಮಧ್ಯಾಹ್ನ 3ಕ್ಕೆ ಯುಎಸ್ ಕೌನ್ಸಿಲ್ ಜನರಲ್ ಕ್ರಿಸ್ಟೋಫರ್ ಹೊಡ್ಜಸ್, ಯುಎಸ್ ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಎಸ್‌ಐಬಿಸಿ) ವ್ಯವಸ್ಥಾಪಕ ನಿರ್ದೇಶಕ ಅಲೆಕ್ಸಾಂಡರ್ ಸ್ಲೇಟರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಭಾರತ-ಯುಎಸ್‌ಎ ಟೆಕ್ ಕಾನ್‌ಕ್ಲೇವ್ ಉದ್ಘಾಟಿಸಲಿದ್ದಾರೆ.

ಚಂದ್ರಯಾನ ಮಾದರಿ ಪ್ರದರ್ಶನ ವಿನೂತನ

ಬೆಂಗಳೂರು ಟೆಕ್ ಶೃಂಗಸಭೆಯ ಪ್ರಮುಖ ಅಂಶವೆಂದರೆ ಚಂದ್ರಯಾನ-3 ಇಸ್ರೋ-ಇಂಡಸ್ಟ್ರಿ ಪೆವಿಲಿಯನ್, ಇದು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಮಹತ್ವದ ಉಪಸ್ಥಿತಿಯನ್ನು ಸಂಕೇತಿಸುತ್ತದೆ. ಮೊದಲ ಬಾರಿಗೆ ಚಂದ್ರಯಾನ-3 ಲ್ಯಾಂಡರ್‌ನ 1:1 ಪ್ರಮಾಣದ ಮಾದರಿಯನ್ನು ಪ್ರದರ್ಶಿಸಲಾಗುತ್ತದೆ.

ಹಸಿರು ಬಿಟಿಎಸ್

ಬೆಂಗಳೂರು ಟೆಕ್ ಶೃಂಗಸಭೆಯು ಮುಂಬರುವ ವರ್ಷಗಳಲ್ಲಿ ಪರಿಸರ ಹಾನಿಯಾಗದಂತೆ ನಿವ್ವಳ ಶೂನ್ಯವನ್ನು ಸಾಧಿಸುವತ್ತ ಮಹತ್ವದ ದಾಪುಗಾಲು ಹಾಕಿದೆ. ಈ ಮಹತ್ವಾಕಾಂಕ್ಷೆಯ ಗುರಿಯು ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಲು ಸಂಗ್ರಹಣೆಯಲ್ಲಿ ಪರಿಸರ ಪ್ರಜ್ಞೆಯ ಅಭ್ಯಾಸಗಳನ್ನು ಸಂಯೋಜಿಸುವುದು ಮತ್ತು ವಿವಿಧ ಮಧ್ಯಸ್ಥಗಾರರಿಗೆ ಸುಸ್ಥಿರತೆ ಸಲಹೆಯನ್ನು ನೀಡುವುದನ್ನು ಒಳಗೊಂಡಿರುತ್ತದೆ.

ವೈವಿಧ್ಯಪೂರ್ಣ ವಸ್ತುಪ್ರದರ್ಶನ

ಟೆಕ್ ಮಾರುಕಟ್ಟೆ ಸ್ಥಳವು ಕಂಟ್ರಿ ಪೆವಿಲಿಯನ್‌ಗಳು, ಐಟಿ ಮತ್ತು ಬಯೋಟೆಕ್ ಮೇಜರ್‌ಗಳು, ಯುನಿಕಾನ್ಸ್, ಸ್ಟಾರ್ಟ್-ಅಪ್‌ಗಳು, ಆರ್ ಅಂಡ್ ಡಿ ಲ್ಯಾಬ್‌ಗಳು, ಶೈಕ್ಷಣಿಕ ಸಂಸ್ಥೆಗಳನ್ನು ಒಳಗೊಂಡಿರುತ್ತದೆ. ಕೈಂಡ್ರಿಲ್, ಇನ್ಫೋಸಿಸ್, ಬಾಷ್, ಮೈಕ್ರೋಸ್‌ಟಾ ಸ್ಟಾರ್ಟ್‌ಅಪ್, ಕ್ಯಾಶ್‌ಫ್ರೀ, ಬಿಲ್ಡರ್ ಎಐ, ಬಯೋಕಾನ್ ಮತ್ತು ಇನ್ನೂ ಹೆಚ್ಚಿನ ದೈತ್ಯ ಉದ್ಯಮಗಳು ಸಹಯೋಗಕ್ಕಾಗಿ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುತ್ತದೆ.

400 ಹೆಚ್ಚು ಭಾಷಣಕಾರರು ಭಾಗಿ!

ಶೃಂಗಸಭೆಯು 75 ಸೆಷನ್‌ಗಳು, 400ಕ್ಕೂ ಹೆಚ್ಚು ಭಾಷಣಕಾರರು, 350ಕ್ಕೂ ಮಿಗಿಲು ಸ್ಟಾರ್ಟ್‌ಅಪ್‌ಗಳು, 600ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 20,000ಕ್ಕಿಂತಲೂ ಹೆಚ್ಚು ವ್ಯಾಪಾರಿಗಳು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net