ಇನ್ನು 15 ದಿನಗಳೊಳಗೆ ಬಗರ್ ಹುಕುಂ ಸಮಿತಿ ರಚನೆ; ಕಂದಾಯ ಸಚಿವ ಆರ್. ಅಶೋಕ್​ ಭರವಸೆ

Vidhan Soudha 1
Published on

ಬೆಂಗಳೂರು: ಬಗರ್ ಹುಕುಂ ಸಮಿತಿ ರಚನೆಯಾಗದ ವಿಧಾನ ಸಭಾ ಕ್ಷೇತ್ರಗಳಿಗೆ ಇನ್ನು 15 ದಿನಗಳೊಳಗೆ ಸಮಿತಿ ರಚಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿ ಭರವಸೆ ನೀಡಿದರು. ಗುಬ್ಬಿ ಶಾಸಕ ವಾಸು ತಮ್ಮ ಕ್ಷೇತ್ರದಲ್ಲಿ ಬಗರ್ ಹುಕುಂ ಸಮಿತಿ ರಚನೆಯಾಗದ ಪರಿಣಾಮ ರೈತರು ನಿತ್ಯ ತಮ್ಮ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿದ್ದಾರೆ. ಕೂಡಲೇ ಕ್ರಮಕೈಗೊಳ್ಳಿ ಎಂದು ಕೋರಿಕೊಂಡರು.

ಈ ವೇಳೆ ಹಲವು ಶಾಸಕರು ತಮ್ಮ ಕ್ಷೇತ್ರಗಳಲ್ಲೂ ಬಗರ್ ಹುಕುಂ ಸಮಿತಿ ರಚನೆಯಾಗಿಲ್ಲ ಎಂದರಲ್ಲದೇ, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಅರ್ಜಿ ವಿಲೇವಾರಿ ಮಾಡುತ್ತಿದ್ದಾರೆಯೇ ಎಂದು ಕಳವಳ ವ್ಯಕ್ತಪಡಿಸಿದರು. ಬಳಿಕ ಉತ್ತರ ನೀಡಿದ ಸಚಿವರು, ಆದಷ್ಟು ಬೇಗ ಸಮಿತಿ ರಚನೆ ಮಾಡಲಾಗುವುದು ಎಂದರಲ್ಲದೇ, 15 ದಿನಗಳ ಕಾಲಮಿತಿಯನ್ನೂ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net