More

    ಪರಸ್ತ್ರೀಗೆ ಕಿಸ್​ ಕೊಟ್ಟಿದ್ದಕ್ಕೆ ಪತಿಗೆ ಪಂಚ್​ ಕೊಟ್ಟ ಪತ್ನಿ: ರಿತೀಶ್ ಕಿಸ್​, ಜೆನಿಲಿಯಾ ಜಲಸ್; ನನಗಿಂತ ಪ್ರೀತಿ ಝಿಂಟಾ ಹೆಚ್ಚಾದ್ಲಾ.. ಡಿಶೂಂ ಡಿಶೂಂ!

    ನವದೆಹಲಿ: ಹೆಂಡತಿ ಜತೆಗಿರುವಾಗಲೇ ಗಂಡ ಹೊರಗೆಲ್ಲಾದರೂ ಪರಸ್ತ್ರೀ ಜತೆ ಸ್ವಲ್ಪ ಸಲಿಗೆಯಿಂದ ವರ್ತಿಸಿದರೆ, ‘ಮನೆಗ್​ ಬನ್ನಿ ಇದೆ ನಿಮಗೆ..’ ಎಂಬಂತೆ ಹೆಂಡತಿ ಅಲ್ಲೇ ಒಂದು ವಾರ್ನಿಂಗ್ ಲುಕ್ ಕೊಟ್ಟುಬಿಡುತ್ತಾಳೆ. ಮಾತ್ರವಲ್ಲ, ಮನೆಗೆ ಹೋದಮೇಲೆ ಫುಲ್ ತರಾಟೆಗೆ ತೆಗೆದುಕೊಂಡರೂ ಅಚ್ಚರಿ ಏನಲ್ಲ. ಇಂಥದ್ದೇ ಒಂದು ಸನ್ನಿವೇಶದಲ್ಲಿ ಫ್ಯಾಮಿಲಿ ಮಿಡಲ್ ಕ್ಲಾಸ್, ಹೈಕ್ಲಾಸ್ ಯಾವುದೇ ಆಗಿದ್ದರೂ ಹೆಂಡತಿ ಹೆಂಡತಿಯೇ ಎಂಬುದನ್ನು ಈ ತಾರಾಜೋಡಿ ಸಾಬೀತು ಪಡಿಸಿದೆ.

    ಹೌದು.. ಬಾಲಿವುಡ್​ನ ನಟ ರಿತೀಶ್​ ದೇಶ್​ಮುಖ್​ ಹಾಗೂ ಅವರ ಪತ್ನಿ ಜೆನಿಲಿಯಾ ಇಬ್ಬರೂ ಜೊತೆಯಾಗಿ ಆಗಾಗ ಸೋಷಿಯಲ್ ಮೀಡಿಯಾ ಮೂಲಕ ತಮಾಷೆಯಾಗಿ ಕಾಣಿಸಿಕೊಳ್ಳುವುದು ಸಿನಿಪ್ರಿಯರಿಗೆ ಹೊಸದೇನಲ್ಲ. ಆದರೆ ಈ ಸಲ ಗಂಭೀರವಾದ ವಿಷಯ ಕುರಿತು ತಮಾಷೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಿಕೊಂಡು ಮತ್ತಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದಕ್ಕೆ ರಿತೀಶ್ ದೇಶ್​ಮುಖ್​- ಜೆನಿಲಿಯಾ ದಂಪತಿ ಹೋಗಿದ್ದು, ಅಲ್ಲಿ ರಿತೀಶ್ ಹಾಗೂ ನಟಿ ಪ್ರೀತಿ ಝಿಂಟಾ ಭೇಟಿಯಾಗಿದ್ದು, ಇಬ್ಬರ ಉಭಯಕುಶಲೋಪರಿಯೂ ನಡೆದಿತ್ತು. ಈ ವೇಳೆ ಪ್ರೀತಿ ಝಿಂಟಾ ಕೈಗಳಿಗೆ ರಿತೀಶ್​ ಮುತ್ತು ಕೊಟ್ಟು, ಅಪ್ಪಿಕೊಂಡು ಆತ್ಮೀಯತೆಯಿಂದ ನಡೆದುಕೊಂಡಿದ್ದೂ ಆಗಿತ್ತು. ಆದರೆ ಇದೇ ಸಂದರ್ಭದಲ್ಲಿ ಪ್ರೀತಿ ಝಿಂಟಾ ಹಿಂದೆಯೇ ಇದ್ದ ಜೆನಿಲಿಯಾ ಎಕ್ಸ್​ಪ್ರೆಷನ್​ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು, ಟಿಪಿಕಲ್ ಹೆಂಡತಿ ಹೇಗಿರುತ್ತಾಳೆ ಎಂಬುದನ್ನು ಅನಾವರಣಗೊಳಿಸಿತ್ತು.

    ಇದೇ ವಿಡಿಯೋ ತುಣುಕಿನ ಕೊನೆಯಲ್ಲಿ ಜೆನಿಲಿಯಾ ರಿತೀಶ್​ಗೆ ಪಂಚ್​ ಮಾಡಿದಂತೆ ಹಾಗೂ ರಿತೇಶ್​ ತಪ್ಪಾಯಿತು ಎಂದು ಕೋರಿದಂತೆ ಅಭಿನಯಿಸಿರುವ ದೃಶ್ಯವನ್ನೂ ಎಡಿಟ್ ಮಾಡಿ ಸೇರಿಸಿ ಜೆನಿಲಿಯಾ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ‘ಮನೆಗೆ ಹೋದ್ಮೇಲೆ ಏನಾಯ್ತು ಅಂತ ತಿಳ್ಕೋಬೇಕಾ?’ ಎಂಬ ಕ್ಯಾಪ್ಷನ್​ನೊಂದಿಗೆ ಈ ವಿಡಿಯೋವನ್ನು ಜೆನಿಲಿಯಾ ಹಂಚಿಕೊಂಡಿದ್ದಾರೆ. ಆ ಮೂಲಕ ಸಾಮಾನ್ಯವಾಗಿ ಗಂಭೀರವಾಗಬಹುದಾದ ಸನ್ನಿವೇಶವನ್ನು ತಮಾಷೆಯಾಗಿ ತೆಗೆದುಕೊಂಡು ‘ಆದರ್ಶ ದಂಪತಿ’ ಎನಿಸಿಕೊಂಡಿದ್ದಾರೆ.

     

    View this post on Instagram

     

    A post shared by Genelia Deshmukh (@geneliad)

    ಅರಸೀಕೆರೆ ಹೆಂಗಸರು ನನ್ನ ಮುಖ ಕಂಡ ಕೂಡಲೇ ಬೈತಾರೆ: ಶಾಸಕ ಶಿವಲಿಂಗೇಗೌಡ ಅಳಲು

    ವಿಧಾನಸಭೆಯಲ್ಲಿ ಹಾಸ್ಯದ ಹೊಳೆ ಹರಿಸಿದ ಸಿದ್ದು ಬಟ್ಟೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts