

ಮುಂಬೈ: ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಟನೆಯ 'ಬಡೆ ಮಿಯಾ ಜೋಟೆ ಮಿಯಾ' ಸಿನಿಮಾದ ಎರಡನೇ ದಿನದ ಗಳಿಕೆ ಒಂದಂಕಿಗೆ ಇಳಿದಿದೆ. ಈ ಚಿತ್ರದ ಒಟ್ಟಾರೆ ಗಳಿಕೆ 100 ಕೋಟಿ ರೂಪಾಯಿ ಆಗೋದು ಅನುಮಾನ ಎನ್ನಲಾಗುತ್ತಿದೆ.
ಮೊದಲ ದಿನ ಬಡೇ ಮಿಯಾ ಚೋಟೆ ಮಿಯಾ' ಸಿನಿಮಾ 15.65 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ ಅಂದರೆ ಶುಕ್ರವಾರ (ಏಪ್ರಿಲ್ 12) ಕೇವಲ 7 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಒಟ್ಟಾರೆ 22.65 ಕೋಟಿ ರೂಪಾಯಿ ಗಳಿಕೆ ಆಗಿದೆ.
ಇನ್ನು ಏಪ್ರಿಲ್ 13 ಹಾಗೂ ಏಪ್ರಿಲ್ 14 ವಾರಾಂತ್ಯ ಇರುವುದರಿಂದ ಸಿನಿಮಾ ದೊಡ್ಡ ಮೊತ್ತ ಕಲೆಕ್ಷನ್ ಮಾಡಿದರೂ ಸೋಮವಾರದಿಂದ ಕಲೆಕ್ಷನ್ ಕಡಿಮೆ ಆಗಲಿದೆ.
ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಪೃಥ್ವಿರಾಜ್ ಸುಕುಮಾರನ್ 'ಬಡೇ ಮಿಯಾ ಚೋಟೆ ಮಿಯಾ' ಸಿನಿಮಾದಲ್ಲಿ ನಟಿಸಿದ್ದಾರೆ. ಇಷ್ಟು ದೊಡ್ಡ ಪಾತ್ರವರ್ಗ ಇದ್ದ ಹೊರತಾಗಿಯೂ ಸಿನಿಮಾ ಗಳಿಕೆಯಲ್ಲಿ ಕಿಮ್ಮತ್ತು ಕಳೆದುಕೊಂಡಿದೆ.