ಬರಲಿದೆ ಬ್ಯಾಡ್ ಬ್ಯಾಂಕ್!; ರಾಷ್ಟ್ರೀಯ ಆಸ್ತಿ ಪುನಾರಚನೆ ಕಂಪನಿ

Bad Bank
Published on
  • ಕಳೆದ ವರ್ಷದ ಬಜೆಟ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ.
  • ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ವಸೂಲಾಗದ ಸಾಲ, ಅನುತ್ಪಾದಕ ಆಸ್ತಿ ಸಮಸ್ಯೆ ನೀಗಿಸಲು ಸರ್ಕಾರದ ಯತ್ನ
  • ರಾಷ್ಟ್ರೀಯ ಆಸ್ತಿ ಪುನಾರಚನೆ ಕಂಪನಿ (ಎನ್​ಎಆರ್​ಸಿಎಲ್) ಎಂದು ನಾಮಕರಣ

ಪ್ರಕ್ರಿಯೆ ಹೇಗೆ?

  • 15:85ರ ಅನುಪಾತದಲ್ಲಿ ಬ್ಯಾಂಕ್​ಗಳಿಂದ ಎನ್​ಎಆರ್​ಸಿಎಲ್ ಅನುತ್ಪಾದಕ ಆಸ್ತಿಗಳನ್ನು ಖರೀದಿ ಮಾಡಲಿದೆ.
  • ಒಟ್ಟು ಮೊತ್ತದ ಶೇ. 15ನ್ನು ಮೊದಲ ಹಂತದಲ್ಲಿ ಪಾವತಿ ಮಾಡಲಿದೆ. ಉಳಿದ ಶೇ. 85ಕ್ಕೆ ಸರ್ಕಾರವೇ ಖಾತ್ರಿ ನೀಡಲಿದೆ
  • ಸರ್ಕಾರದ ಖಾತ್ರಿ 5 ವರ್ಷಗಳ ವರೆಗೆ ಊರ್ಜಿತವಾಗಿರುತ್ತದೆ.

ಏನು ಕೆಲಸ?

  • ಗುರುತಿಸಲಾಗಿರುವ ಅನುತ್ಪಾದಕ ಆಸ್ತಿ (ಎನ್​ಪಿಎ) ಬ್ಯಾಡ್ ಬ್ಯಾಂಕ್​ಗೆ ಹಸ್ತಾಂತರ
  • ಆಸ್ತಿಗಳನ್ನು ಎನ್​ಎಆರ್​ಸಿಎಲ್ ನಿರ್ವಹಣೆ ಮಾಡಲಿದೆ
  • ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ಅಧಿಕಾರಿಗಳು ಇದರ ನೇತೃತ್ವ ವಹಿಸಲಿದ್ದಾರೆ
  • ಹಂತ ಹಂತವಾಗಿ ಆಸ್ತಿ ಪುನಾರಚನೆ, ವಸೂಲಿ ಇನ್ನಿತರ ಪ್ರಕ್ರಿಯೆಗಳು ನಡೆಯಲಿವೆ
  • ಮೊದಲ ಹಂತದಲ್ಲಿ 38 ಖಾತೆಗಳನ್ನು ಎನ್​ಎಆರ್​ಸಿಎಲ್​ಗೆ ಹಸ್ತಾಂತರಿಸಲು ನಿರ್ಧರಿಸಲಾಗಿದ್ದು, ಇದರ ಮೊತ್ತ 82,845 ಕೋಟಿ ರೂ. ಆಗಿದೆ
  • ಮುಂದಿನ ಮಾರ್ಚ್ 31ರೊಳಗೆ ಸುಮಾರು 50 ಸಾವಿರ ಕೋಟಿ ರೂ. ಮೊತ್ತದ 15 ಖಾತೆಗಳನ್ನು ಹಸ್ತಾಂತರ ಮಾಡಲಾಗುತ್ತದೆ.

ಕರೊನಾ ಬಳಿಕ ಎನ್​ಪಿಎ ಇಳಿಕೆ: 2020ರಲ್ಲಿ ದೇಶದ ಬ್ಯಾಂಕ್​ಗಳಲ್ಲಿ 8.40 ಲಕ್ಷ ಕೋಟಿ ರೂ. ಇದ್ದ ಎನ್​ಪಿಎ 2012ರಲ್ಲಿ 7.80 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net