ಜ್ವರದಿಂದ ಇಬ್ಬರು ಅಸಹಜ ಸಾವು, ನಿಫಾ ವೈರಸ್​​​ ಬಗ್ಗೆ ಕೇರಳ ಆರೋಗ್ಯ ಇಲಾಖೆ ಎಚ್ಚರಿಕೆ

bb
Published on

ಕೋಝಿಕ್ಕೋಡ್​​: ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಜ್ವರಕ್ಕೆ ಸಂಬಂಧಿಸಿದ ಎರಡು ಅಸ್ವಾಭಾವಿಕ ಸಾವುಗಳು ದಾಖಲಾದ ನಂತರ ಕೇರಳದ ಆರೋಗ್ಯ ಇಲಾಖೆ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಎಚ್ಚರಿಕೆ ನೀಡಿದೆ.


ಇಬ್ಬರದ್ದು ಅಸಹಜ ಸಾವಾಗಿದ್ದು, ನಿಫಾ ವೈರಸ್​ನಿಂದ ಸಾವು ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಮೃತರ ಪೈಕಿ ಒಬ್ಬರ ಸಂಬಂಧಿಕರು ಐಸಿಯುನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ನಿಟ್ಟಿನಲ್ಲಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.


ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನಿಫಾ ವೈರಸ್​​ ಸೋಂಕು ಪ್ರಾಣಿಗಳಿಂದ ಜನರಿಗೆ ಹರಡುವ ಕಾಯಿಲೆಯಾಗಿದೆ ಮತ್ತು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ಜನರಲ್ಲಿ ಇದು ಲಕ್ಷಣ ರಹಿತ (ಸಬ್​​ಕ್ಲಿನಿಕಲ್​) ಸೋಂಕಿನಿಂದ ತೀವ್ರವಾದ ಉಸಿರಾಟದ ಕಾಯಿಲೆ ಮತ್ತು ಮಾರಣಾಂತಿಕ ಕಾಯಿಲೆಗಳನ್ನು ಉಂಟು ಮಾಡುತ್ತದೆ.


ಈ ಹಿಂದೆ 2018ರಲ್ಲಿ ಕೋಯಿಕ್ಕೋಡ್​ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ನಿಫಾ ಏಕಾಏಕಿ ಹಬ್ಬಿತ್ತು ನಂತರ 2021ರಲ್ಲಿ ಕೂಡ ಪ್ರಕರಣಗಳು ವರದಿಯಾಗಿತ್ತು. ನಿಫಾ ವೈರಸ್ ಕುರಿತು ಮಾಹಿತಿ ನಿಫಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.


ನಿಫಾ ವೈರಸ್​​, ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. (ಬಾವಲಿಗಳು ಕಚ್ಚಿದ ಹಣ್ಣನ್ನು ತಿನ್ನುವುದರಿಂದ ಹರಡುತ್ತದೆ) ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಬಾವಲಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net