ಚೀನಾದ ವುಹಾನ್​ನಿಂದ ರಾಷ್ಟ್ರಕ್ಕೆ ಬಂದ 406 ಮಂದಿಗೆ ಕೊರೊನಾ ವೈರಸ್​ ಸೋಂಕು ಹರಡಿಲ್ಲ: ವೈದ್ಯಕೀಯ ವರದಿಯಲ್ಲಿ ಪತ್ತೆ

coorona feb 16 2020
Published on

ನವದೆಹಲಿ: ಚೀನಾದ ವುಹಾನ್​ನಿಂದ ರಾಷ್ಟ್ರಕ್ಕೆ ಬಂದ 406 ಮಂದಿ ಭಾರತೀಯರಿಗೆ ಕೊರಾನಾ ವೈರಸ್​ ಸೋಂಕು ಹರಡಿಲ್ಲ ಎಂದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ರಾಷ್ಟ್ರಕ್ಕೆ ಚೀನಾದಿಂದ ಬಂದ 406 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಇವರಿಗೆ ಸೋಂಕು ಹರಡಿಲ್ಲ ಎಂದು ವರದಿ ತಿಳಿಸಿದೆ.

ಚೀನಾದಿಂದ ಬಂದ ಇವರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಲಾಗಿತ್ತು. ವೈರಸ್​ ಸೋಂಕು ಹರಡದ ಹಿನ್ನೆಲೆಯಲ್ಲಿ ಇವರನ್ನು ಬಿಡಗಡೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ತಿಳಿಸಿದ್ದಾರೆ.

ಚೀನಾದ ವುಹಾನ್​ ಪ್ರಾಂತ್ಯದಿಂದ ಮರಳಿದ ಕೇರಳ ಮೂವರು ವಿದ್ಯಾರ್ಥಿಗಳಿಗೆ ಮಾತ್ರ ಸೋಂಕು ಹರಡಿರುವುದು ದೃಢಪಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net