

ನವದೆಹಲಿ: ಮರಿ ಘೇಂಡಾಮೃಗವೊಂದು ಮೇಕೆಯನ್ನು ಅಣಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ನೇಹಕ್ಕೆ ಯಾವುದೇ ಯಾವುದೇ ಜಾತಿ, ಧರ್ಮ ಅಥವಾ ಭಾಷೆಯ ಅಡೆತಡೆಗಳಿಲ್ಲ ಎಂಬುದನ್ನು ಈ ವಿಡಿಯೋ ನಿರೂಪಿಸಿದೆ.
14 ಸೆಕೆಂಡ್ ಉದ್ದದ ವಿಡಿಯೋ ತುಣಕನ್ನು ಫ್ಯಾಸಿನೇಟಿಂಗ್ (Fascinating) ಹೆಸರಿನ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ಮೇಕೆ ಜಿಗಿಯುವುದನ್ನು ನೋಡಿದ ಘೇಂಡಾಮೃಗದ ಮರಿ ಅದರಂತೆ ತಾನೂ ಜಿಗಿಯಲು ಯತ್ನಿಸುತ್ತದೆ. ಆದರೆ, ಮೇಕೆಗಿಂತ ಘೇಂಡಾಮೃಗ ಗಾತ್ರದಲ್ಲಿ ದಪ್ಪವಾಗಿರುವುದಿಂದ ಮೇಕೆಯಂತೆ ಮಾಡುವುದ ತುಸು ಕಷ್ಟವಾಯಿತು.
ಅಂದಹಾಗೆ ಮೇಕೆ ಮತ್ತು ಘೇಂಡಾಮೃಗದ ಮರಿ ಸ್ನೇಹಿತರು. ಈ ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈವೆರೆಗೂ 2.3 ಮಿಲಿಯನ್ಗೂ ಅಧಿಕ ವೀಕ್ಷಣೆಯನ್ನು ವಿಡಿಯೋ ಪಡೆದುಕೊಂಡಿದೆ. 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದು, 400 ಕ್ಕೂ ಹೆಚ್ಚು ನೆಟ್ಟಿಗರು ಕಾಮೆಂಟ್ಗಳ ಸುರಿಮಳೆಗೈದಿದ್ದಾರೆ. ಈ ವಿಡಿಯೋ ನೋಡಿ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)