

Baby John Flop: ಕಳೆದ ವರ್ಷ ಡಿಸೆಂಬರ್ 25ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಸೌತ್ ಬ್ಯೂಟಿ ಕೀರ್ತಿ ಸುರೇಶ್ ಮತ್ತು ಬಾಲಿವುಡ್ ನಟ ವರುಣ್ ಧವನ್ ಮುಖ್ಯಭೂಮಿಕೆಯಲ್ಲಿ ಅಭಿನಯದ ‘ಬೇಬಿ ಜಾನ್’ ಚಿತ್ರವು ಸದ್ಯ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿದೆ. ಮೊದಲ ದಿನದಿಂದ ಇಂದಿನವರೆಗೂ ಪ್ರೇಕ್ಷಕರ ಗಮನಸೆಳೆಯುವಲ್ಲಿ ಹಿಂದುಳಿದಿರುವ ಬೇಬಿ ಜಾನ್, ನಟನಿಗೆ ಮತ್ತೊಂದು ಸೋಲನ್ನು ಉಣಿಸಿರುವುದು ಸದ್ಯ ಅವರ ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ.
ಕ್ರಿಸ್ಮಸ್ ಹಬ್ಬದ ದಿನದಂದೇ 'ಬೇಬಿ ಜಾನ್' ತೆರೆ ಕಾಣಲಿದೆ ಎಂದು ಚಿತ್ರತಂಡ ಅಧಿಕೃತ ದಿನಾಂಕ ಘೋಷಿಸಿದ ಮರು ದಿನದಿಂದಲೇ ಉತ್ತಮ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಚಿತ್ರ ತಯಾರಕರು ಅಂತಿಮವಾಗಿ ಬೇಬಿ ಜಾನ್ ಗೆಲುವು ಕಾಣುವಲ್ಲಿ ವಿಫಲರಾಗಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆಯಿರಲಿ ಹಾಕಿರುವ ಬಂಡವಾಳ ವಾಪಸ್ ಬರುವಷ್ಟು ಆದಾಯ ಬಂದರೆ ಸಾಕು ಎನ್ನುವಂತಾಗಿದೆ ನಿರ್ಮಾಪಕರ ಪಾಡು.
ಈ ವಾರವು ಗಲ್ಲಾಪೆಟ್ಟಿಗೆಯಲ್ಲಿ ಮಂದಗತಿಯ ಕಲೆಕ್ಷನ್ ಕಂಡಿರುವ ವರುಣ್ ಧವನ್ ಚಿತ್ರ, 9ನೇ ದಿನದಂದು ಕೇವಲ 1 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ರಿಲೀಸ್ ಆದ ದಿನದಿಂದ ಇಂದಿನವರೆಗೂ ಚಿತ್ರದ ಒಟ್ಟು ಗಳಿಕೆ ಕೇವಲ 36.40 ಕೋಟಿ ರೂ. ಎನ್ನಲಾಗಿದೆ. ತಮಿಳು ನಟ ದಳಪತಿ ವಿಜಯ್ ಅಭಿನಯದ 2016ರ ಆ್ಯಕ್ಷನ್ ಜಾನರ್ನ 'ಥೇರಿ' ಸಿನಿಮಾದ ಹಿಂದಿ ರಿಮೇಕ್ ಇದಾಗಿದ್ದು, ಚಿತ್ರವನ್ನು ಅಟ್ಲೀ ನಿರ್ದೇಶಿಸಿದ್ದಾರೆ,(ಏಜೆನ್ಸೀಸ್).