ಬಾಕ್ಸ್​ ಆಫೀಸ್​ನಲ್ಲಿ ಮುಗ್ಗರಿಸಿತಾ ಕೀರ್ತಿ​ ಚಿತ್ರ? ಬಂಡವಾಳ ಎತ್ತುವುದೇ 'ಬೇಬಿ ಜಾನ್' ಮುಂದಿರುವ ಸವಾಲು | Baby John

ವಿಜಯವಾಣಿ (11)
Published on

Baby John: ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಆಂಟೋನಿ ಜತೆಗೆ ಸಪ್ತಪದಿ ತುಳಿದ 'ಮಹಾನಟಿ' ಕೀರ್ತಿ ಸುರೇಶ್​, ಮದುವೆಯ ಸಂಭ್ರಮದಲ್ಲಿಯೇ ಬಾಲಿವುಡ್​ ನಟ ವರುಣ್ ಧವನ್ ಅವರೊಂದಿಗೆ ನಟಿಸಿದ ಬಹುನಿರೀಕ್ಷಿತ 'ಬೇಬಿ ಜಾನ್'​ ಚಿತ್ರವು ರಿಲೀಸ್ ಕಂಡಿದ್ದು, ನಟಿಗೆ ಡಬಲ್ ಧಮಾಕ ನೀಡಿದೆ. ಭರ್ಜರಿ ಓಪನಿಂಗ್ ಕಂಡಿದ್ದೇ ಆದರೂ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುವಲ್ಲಿ ಮಾತ್ರ ಮುಗ್ಗರಿಸಿರುವುದು ಸದ್ಯ ಚಿತ್ರತಂಡಕ್ಕೆ ಭಾರೀ ಸಂಕಷ್ಟ ತಂದೊಡ್ಡಿದೆ.

ನಿರ್ದೇಶಕ ಕಲೀಸ್​ ನಿರ್ದೇಶಿಸಿದ ಬೇಬಿ ಜಾನ್​ ಚಿತ್ರದಲ್ಲಿ ಕೀರ್ತಿ ಸುರೇಶ್​ ಮತ್ತು ವರುಣ್ ಧವನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಸ್​ಮಸ್​ ದಿನದಂದೇ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಚಿತ್ರ, ಕಳೆದ ಮೂರು ದಿನಗಳಿಂದ ಬಾಕ್ಸ್ ಆಫೀಸ್​ನಲ್ಲಿ ನಿರೀಕ್ಷಿಸಿದ ಗಳಿಕೆಯನ್ನು ಕಾಣದಿರುವುದು ಬಾಲಿವುಡ್​ ಮಂದಿಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಸಾಲು ಸಾಲು ರಜೆಗಳಿದ್ದರೂ ಸಹ ಪ್ರೇಕ್ಷಕರು ಚಿತ್ರಮಂದಿರದತ್ತ ತಿರುಗಿ ನೋಡದೆ ಇರುವುದು ಸದ್ಯ ಬೇಬಿ ಜಾನ್​ ನಿರ್ಮಾಪಕರನ್ನು ಅಚ್ಚರಿಗೆ ದೂಡಿದೆ.

ಮೊದಲ ದಿನದ ಗಳಿಕೆಯಿಂದ ಇಂದು 4ನೇ ದಿನಕ್ಕೆ ಕಾಲಿಟ್ಟಿರುವ ಬೇಬಿ ಜಾನ್ ಚಿತ್ರವು ಮೂರನೇ ದಿನದ ಅಂತ್ಯಕ್ಕೆ ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಕೇವಲ 23.90* ಕೋಟಿ ರೂ. ಗಳಿಸಿದೆ. 160 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಈ ಸಿನಿಮಾ ಪ್ರಸ್ತುತ ಹೂಡಿರುವ ಬಂಡವಾಳವನ್ನು ಎತ್ತುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಚಿತ್ರವು ಮುಂದಿನ ದಿನಗಳಲ್ಲಿ 570% ಹೆಚ್ಚು ಗಳಿಕೆ ನೋಡುವ ಅಗತ್ಯತೆ ಹೆಚ್ಚಿದೆ.

ಭಾರತದಲ್ಲಿ ಕಲೆಕ್ಷನ್​ ವಿವರ

ದಿನ 1: 11.25 ಕೋಟಿ ರೂ.

ದಿನ 2: 4.75 ಕೋಟಿ ರೂ.

ದಿನ 3: 3.65 ಕೋಟಿ ರೂ.,(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net