

ನವದೆಹಲಿ: ಮರಿ ಜಿರಾಫೆಯೊಂದು ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋ ತುಣಕು ಸದ್ಯ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತೀಯ ಅರಣ್ಯ ಅಧಿಕಾರಿ ಸುಸಂತಾ ನಂದ ಅವರು ಮರಿ ಜಿರಾಫೆ ಓಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಿ ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಓಡಲು ಜನಿಸಿರುವ ಜಿರಾಫೆ ಎಂಬ ಶೀರ್ಷಿಕೆ ಬರೆದಿದ್ದಾರೆ. ಈ ವಿಡಿಯೋ 18 ಸೆಕೆಂಡ್ಗಳ ದೃಶ್ಯ ಹೊಂದಿದೆ.
ಮಕ್ಕಳು ಮನೆಯಲ್ಲಿ ತಮ್ಮ ಹೆತ್ತವರ ಸುತ್ತ ಓಡಾಡುವಂತೆ ಈ ಜಿರಾಫೆ ಕಾಡಿನಲ್ಲಿ ಓಡಾಡುತ್ತಿದೆ. ಜಿರಾಫೆ 2 ಸುತ್ತು ಓಡುತ್ತದೆ. ಜಿರಾಫೆ ಜತೆ ಕಾಡಿನಲ್ಲಿ ಇತರ ಪ್ರಾಣಿ, ಪಕ್ಷಿಗಳು ಇರುವುದನ್ನು ಕಾಣಬಹುದಾಗಿದೆ.
ಫೇಸ್ಬುಕ್ನಲ್ಲಿ ಈ ವಿಡಿಯೋ ವೀಕ್ಷಿಸಿದ ಅನೇಕ ಬಳಕೆದಾರರು ಸುಂದರವಾದ ಪರಿಸರ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)