ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಬರೆದ ದಾಖಲೆಗಳೇನು? ಇಲ್ಲಿದೆ ರಾಜಮೌಳಿ ಚಿತ್ರದ ಗಳಿಕೆಯ ಮೆಲುಕು | Baahubali

ವಿಜಯವಾಣಿ (31)
Published on

Baahubali: ಒಂದು ದಶಕದ ಹಿಂದೆ ಭಾರತೀಯ ಚಲನಚಿತ್ರೋದ್ಯಮದ ದಿಕ್ಕನ್ನೇ ಬದಲಿಸಿದ ಟಾಲಿವುಡ್​ ರೆಬೆಲ್​ ಸ್ಟಾರ್​ ಅಭಿನಯದ ‘ಬಾಹುಬಲಿ’ ಬಿಡುಗಡೆಯಾಗಿ ಇಂದಿಗೆ 10 ವರ್ಷಗಳು ಕಳೆದಿವೆ. ಅದ್ಭುತ ದೃಶ್ಯಗಳು, ರೋಮಾಂಚಕ ನಿರೂಪಣೆ ಮತ್ತು ಅದ್ಧೂರಿ ವಿಎಫ್​ಎಕ್ಸ್​ ತಾಂತ್ರಿಕ ಕೆಲಸಗಳ ಮೂಲಕ ಚಿತ್ರ ಸಿನಿಪ್ರಿಯರನ್ನು ಆಕರ್ಷಿಸಿತ್ತು. ಈ ಐತಿಹಾಸಿಕ ಸಂದರ್ಭವನ್ನು ಸಂಭ್ರಮಿಸಲು ಹೊಸ ಸಂಚಲನ ಮೂಡಿಸಿರುವ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ, ಎರಡು ಭಾಗಗಳನ್ನು ಒಗ್ಗೂಡಿಸಿ ಮತ್ತೊಮ್ಮೆ ಚಿತ್ರಮಂದಿರಕ್ಕೆ ಬಾಹುಬಲಿಯನ್ನು ಕರೆತರಲು ತಯಾರಿ ನಡೆಸಿದ್ದಾರೆ.

‘ಬಾಹುಬಲಿ: ದಿ ಎಪಿಕ್’

ಹತ್ತು ವರ್ಷಗಳ ಈ ಪ್ರಯಾಣವನ್ನು ಭಾವನಾತ್ಮಕವಾಗಿ ನೆನೆದ ರಾಜಮೌಳಿ, ತಮ್ಮ ಸಾಮಾಜಿಕ ಜಾಲತಾಣದ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹೊಸ ವಿಷಯವನ್ನು ಸಿನಿಪ್ರಿಯರೊಂದಿಗೆ ಹಂಚಿಕೊಂಡಿದ್ದಾರೆ. ಬಾಹುಬಲಿ 1 ಮತ್ತು 2ರ ಭಾಗಗಳನ್ನು ಒಟ್ಟಿಗೆ ಸೇರಿಸಿ ಒಂದು ಪೂರ್ಣ ಪ್ರಮಾಣದ ಚಿತ್ರವಾಗಿ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ರಾಜಮೌಳಿ ಮುಂದಾಗಿದ್ದಾರೆ. ಆ ಚಿತ್ರವೇ ‘ಬಾಹುಬಲಿ: ದಿ ಎಪಿಕ್’​. ಇದೇ ಅಕ್ಟೋಬರ್​ 31ಕ್ಕೆ ಸಿನಿಮಾ ತೆರೆಗೆ ಬರಲಿದೆ ಎಂದಿದ್ದಾರೆ.

'ಬಾಹುಬಲಿ' ದಾಖಲೆ

ಬಾಹುಬಲಿ: ದಿ ಬಿಗಿನಿಂಗ್ (2015): ಈ ಚಿತ್ರವು ಟಾಲಿವುಡ್​ ಹಿರಿಮೆಯನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು, ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಬರೋಬ್ಬರಿ 650 ಕೋಟಿ ರೂ.ಗಳಿಕೆ ಕಂಡಿತು. ಈ ಮೂಲಕ ಭಾರತೀಯ ಸಿನಿಮಾಗಳ ಪೈಕಿ ಅತಿ ಹೆಚ್ಚಿನ ಲಾಭ ನೋಡಿದ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಮತ್ತು ಹೊಸ ದಾಖಲೆಯನ್ನೇ ನಿರ್ಮಿಸಿತು.

ಇದನ್ನೂ ಓದಿ: 2028ರ ವೇಳೆಗೆ ಬೆಂಗಳೂರು ನಗರ ಪ್ರವಾಹಮುಕ್ತ: 1,600 ಕೋಟಿ ರೂ. ವೆಚ್ಚದ ಯೋಜನೆಗೆ ಟೆಂಡರ್​ಬಾಹುಬಲಿ 2: ದಿ ಕನ್ಕ್ಲೂಷನ್ (2017): ದ್ವಿತೀಯ ಭಾಗವು ಮೊದಲ ಭಾಗದ ನಿರ್ಮಿಸಿದ್ದ ದಾಖಲೆಗಳನ್ನು ಮುರಿದು ಸುಮಾರು 1,800 ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡಿತು. ಭಾರತೀಯ ಸಿನಿಮಾ ಇತಿಹಾಸದಲ್ಲಿ ಬಾಹುಬಲಿ 2 ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳಲ್ಲಿ ಒಂದು ಎಂಬ ಪಟ್ಟಿಗೆ ಸೇರಿತು. ಎರಡು ಭಾಗದ ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಸತ್ಯರಾಜ್ ಮತ್ತು ನಾಸರ್ ಸೇರಿದಂತೆ ಸ್ಟಾರ್ ನಟರೇ ಅಭಿನಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net