ಬಾಹುಬಲಿ ನಾಯಕಿಯನ್ನು ಗರ್ಭಿಣಿಯಾಗಿಸಿ..ಪತ್ನಿಗೆ ವಿಚ್ಛೇದನ ನೀಡಿದನೇ ನಿರ್ಮಾಪಕ..!

director
Published on

ಮುಂಬೈ: ಚಿತ್ರರಂಗದ ಮತ್ತೊಂದು ತಾರಾ ಜೋಡಿ ವಿಚ್ಛೇದನಕ್ಕೆ ಸಿದ್ಧವಾಗುತ್ತಿರುವ ಬಗ್ಗೆ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಏಕೆಂದರೆ ಸಮಂತಾ ರೀತಿಯಲ್ಲೇ ಆ ಹೀರೋಯಿನ್​ ತನ್ನ ಹೆಸರಿನೊಂದಿಗೆ ಇದ್ದ ಪತಿಯ ಹೆಸರನ್ನು ಇನ್​ಸ್ಟಾಗ್ರಾಮ್​ನಿಂದ ತೊಲಗಿಸಿದ್ದಾಳೆ. ಇದೇ ಸಂದರ್ಭದಲ್ಲಿ ಈ ಖ್ಯಾತ ನಟಿಯ ಪತಿ ಬಾಹುಬಲಿಯಲ್ಲಿ ನಟಿಸಿದ್ದ ಸ್ಟಾರ್ ಹೀರೋಯಿನ್ ಅನ್ನು ಗರ್ಭಿಣಿಯಾಗಿಸಿದ್ದು, ಈ ತಾರಾ ಜೋಡಿ ವಿಚ್ಛೇದನಕ್ಕೆ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಹಾಗಾದರೆ ಈ ತಾರಾಜೋಡಿ ಯಾರು? ಗರ್ಭಿಣಿಯಾದ ಬಾಹುಬಲಿಯಲ್ಲಿ ನಟಿಸಿದ್ದ ನಟಿ ಯಾರು ಎಂಬುದರ ವಿವರ ತಿಳಿಯೋಣ..

ಬಾಲಿವುಡ್ ಟಿ-ಸೀರೀಸ್ ನಾಯಕ ಭೂಷಣ್ ಕುಮಾರ್ - ಅವರ ಪತ್ನಿ ಮತ್ತು ನಾಯಕಿ ದಿವ್ಯಾ ಖೋಸ್ಲಾ ಬಾಲಿವುಡ್ ನ ಮುದ್ದಾದ ಜೋಡಿಗಳಲ್ಲಿ ಒಂದು. ಈ ಜೋಡಿಗೆ ಒಳ್ಳೆಯ ಕ್ರೇಜ್ ಇದೆ. ಮದುವೆಯಾಗಿ ಸುಮಾರು 19 ವರ್ಷಗಳಾಗಿವೆ. ಆದರೆ ಕಳೆದ ಕೆಲವು ದಿನಗಳಿಂದ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ. ಅದಕ್ಕೆ ನಾನಾ ಕಾರಣಗಳಿವೆ. ಇದನ್ನು ಕೇಳಿದ ನೆಟಿಜನ್‌ಗಳು ಮತ್ತು ಸಿನಿಪ್ರೇಮಿಗಳು ಶಾಕ್ ಆಗಿದ್ದಾರೆ.

ದಿವ್ಯಾ ಖೋಸ್ಲಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಆಕೆ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಿಂದ ಪತಿ ಭೂಷಣ್ ಕುಮಾರ್ ನಹೆಸರನ್ನು ತೆಗೆದು ಹಾಕಿದ್ದು ಚರ್ಚೆಗೆ ಗ್ರಾಸವಾಗಿದೆ.

ನೋರಾ ಫತೇಹಿ ಗರ್ಭಿಣಿ: ಮತ್ತೊಂದೆಡೆ, ನೆಟ್‌ನಲ್ಲಿ ಫೇಕ್ ರಿವ್ಯೂ ಮಾಡುವ ಚಿತ್ರ ವಿಶ್ಲೇಷಕ ಉಮೈರ್ ಸಂಧು ಮತ್ತೊಂದು ಸೆನ್ಸೇಷನಲ್ ಟ್ವೀಟ್ ಮಾಡಿದ್ದಾರೆ. ಭೂಷಣ್ ಕುಮಾರ್ ಅವರು ಬಾಹುಬಲಿ ಖ್ಯಾತಿಯ ಬಾಲಿವುಡ್ ಬೆಡಗಿ ನೋರಾ ಫತೇಹಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅವರು ಬರೆದಿದ್ದಾರೆ. ಆಕೆ 2021ರಲ್ಲಿ ಗರ್ಭಿಣಿಯಾಗಿದ್ದಳು. ಆದರೆ ಆಕೆ ಗರ್ಭಪಾತ ಮಾಡಿಸಿಕೊಂಡಿದ್ದಳು ಎಂದು ಹೇಳಿದ್ದಾನೆ. ಹಾಗೆಯೇ ನೋರಾ ಫತೇಹಿ ಬಾಲಿವುಡ್ ಸ್ಟಾರ್ ಹೀರೋಯಿನ್ ಗಳಾದ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಗಿಂತ ಶ್ರೀಮಂತೆಯಾಗಿದ್ದು, ಆಕೆ ಬಳಿ ಇರುವುದು ಸೆಕ್ಸ್​ ಮನಿಯಾ ಅಥವಾ ಕಪ್ಪು ಹಣವಾ ಎಂದು ಪ್ರಶ್ನಿಸಿದ್ದಾನೆ. ಸದ್ಯ ಈ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಆದರೆ ನೆಟ್ಟಿಗರು ಆತನನ್ನೇ ಟೀಕಿಸುತ್ತಿದ್ದು, ನೀನು ಯಾವಾಗ ಬದಲಾಗುತ್ತೀಯ ಎಂದು ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ.

ಖಂಡಿಸಿದ ತಂಡ:  ಭೂಷಣ್ ಕುಮಾರ್ ಅವರು ದಿವ್ಯಾ ಖೋಸ್ಲಾಗೆ ವಿಚ್ಛೇದನ ನೀಡಲು ರೆಡಿಯಾಗಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಅವರ ತಂಡ ಪ್ರತಿಕ್ರಿಯಿಸಿದ್ದು, ಸಂದರ್ಶನವೊಂದರಲ್ಲಿ ಇದನ್ನು ಖಂಡಿಸಿದೆ. ದಿವ್ಯಾ ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೆಸರನ್ನು ಬದಲಾಯಿಸಲು ಇನ್ನೊಂದು ಕಾರಣವಿದೆ. ಇದು ವಿಚ್ಛೇದನ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದೆ. ಆಕೆ ಜ್ಯೋತಿಷಿಗಳ ಸಲಹೆಯಂತೆ ಹೆಸರು ಬದಲಾಯಿಸಿಕೊಂಡಿದ್ದಾಳೆ ಎಂದಿದೆ.

ಇನ್ನು ದಿವ್ಯಾ ಖೋಸ್ಲಾ ಟಾಲಿವುಡ್‌ನೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2004 ರಲ್ಲಿ ದಿ. ನಟ ಉದಯ್ ಕಿರಣ್ ಅವರ ಲವ್ ಟುಡೇ ಚಿತ್ರದೊಂದಿಗೆ ಪಾದಾರ್ಪಣೆ ಮಾಡಿದರು. ಆ ನಂತರ ಆಕೆಗೆ ಹಿಂದಿಯಲ್ಲಿ ಸಾಲು ಸಾಲು ಆಫರ್‌ಗಳು ಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net