

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ನಶೆಮುಕ್ತ ಭಾರತಕ್ಕಾಗಿ ಘೋಷವಾಕ್ಯದಡಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶಿವಮೊಗ್ಗ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಯುವ ರನ್ ಮ್ಯಾರಥಾನ್‌ಗೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಜೈ ಹೋ ಹಾಡಿಗೆ ಬಿ.ವೈ.ವಿಜಯೇಂದ್ರ ಹೆಜ್ಜೆ ಹಾಕಿದರು.
ನಗರದ ಶಿವಮೂರ್ತಿ ವೃತ್ತದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಿದ ಬಳಿಕ ವಿಜಯೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ನಟ ಗೌರಿಶಂಕರ್, ನಟಿ ಕಾರುಣ್ಯಾ ರಾಮ್, ರಾಷ್ಟ್ರೀಯ ಅಥ್ಲೆಟಿಕ್ ಸೌಮ್ಯಾ ಸಾವಂತ್ ಮತ್ತು ಚೆಸ್ ಆಟಗಾರ ಜಿ.ಎ.ಸ್ಟಾೃನ್ಲಿ ಮತ್ತಿತರರು ಹೆಜ್ಜೆ ಹಾಕಿದರು.