ಬಿ.ಎಸ್.ಯಡಿಯೂರಪ್ಪ ಅವರದ್ದು ಹೋರಾಟದ ಜೀವ: ಶ್ರೀ ಡಾ.ಗಂಗಾಧರ ಮಹಾಸ್ವಾಮೀಜಿ

Edited Yeddiyurappa
Published on

ರಾಜಕೀಯದ ಅತ್ಯುನ್ನತ ಹುದ್ದೆ ಅಲಂಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರದ್ದು ಹೋರಾಟದ ಜೀವ. ನಾಡಿನ ರೈತರ, ನೇಕಾರರ, ಹಿಂದುಳಿದ, ದಲಿತರ ಬಗ್ಗೆ ಸದಾ ಕಾಳಜಿ ಹೊಂದಿರುವವರು. ಈ ಹಿಂದೆ ಪ್ರತ್ಯೇಕ ರೈತ ಬಜೆಟ್ ಮಂಡಿಸುವ ಮೂಲಕ ಅನ್ನದಾತರ ಬಗ್ಗೆ ಅವರಿಗಿರುವ ಕಾಳಜಿಯನ್ನು ಎತ್ತಿ ತೋರಿಸಿದ್ದಾರೆ. ಧಾರ್ವಿುಕತೆಯಲ್ಲಿ ನಂಬಿಕೆಯಿಟ್ಟು ಎಲ್ಲರೊಂದಿಗೆ ಸರಳವಾಗಿ ಬೆರೆಯುವ ಯಡಿಯೂರಪ್ಪ ಅವರಿಗೆ ಸದ್ಗುರು ಶ್ರೀ ವಿಶ್ವಾರಾಧ್ಯರು ಹೆಚ್ಚಿನ ಆಯುಷ್ಯ, ಆರೋಗ್ಯ, ಸಂಪತ್ತು ದಯಪಾಲಿಸಲಿ. | ಶ್ರೀ ಡಾ.ಗಂಗಾಧರ ಮಹಾಸ್ವಾಮೀಜಿ ಪೀಠಾಧಿಪತಿ, ವಿಶ್ವಾರಾಧ್ಯ ಸಂಸ್ಥಾನ ಮಠ ಅಬ್ಬೆತುಮಕೂರು (ಯಾದಗಿರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net