

ಬೆಂಗಳೂರು: ಕವಿ ಬಿ.ಆರ್. ಲಕ್ಷಣ ರಾವ್ ಅವರು ತಮ್ಮ 75ನೇ ಜನ್ಮದಿನದ ಸಂಭ್ರಮವನ್ನು ವಿಜಯವಾಣಿ-ದಿಗ್ವಿಜಯ ನ್ಯೂಸ್ ಕ್ಲಬ್ನಲ್ಲಿ ಹಂಚಿಕೊಳ್ಳುತ್ತಿದ್ದು, ತಮ್ಮ ಅನುಭವ-ಅನಿಸಿಕೆಗಳನ್ನು ಹೇಳಿಕೊಳ್ಳುತ್ತ ತಮ್ಮ ಅಭಿಮಾನಿಗಳ ಅನುಭಾವಕ್ಕೂ ಸ್ಪಂದಿಸಲಾರಂಭಿಸಿದ್ದಾರೆ.
ಇದೀಗವಷ್ಟೇ ವಿಜಯವಾಣಿ ಕ್ಲಬ್ನಲ್ಲಿ ಮಾತು ಆರಂಭಿಸಿರುವ ಅವರು ತಂದೆ-ಮಗನ ಸಂಬಂಧದ ಕುರಿತು ಹೇಳಿಕೊಂಡಿದ್ದಾರೆ. ಸಂಗೀತ ನನಗೆ ತಂದೆಯಿಂದ ಬಂದ ಬಳುವಳಿ. ಅವರು ಒಳ್ಳೆಯ ಗಾಯಕರೂ ಆಗಿದ್ದರು. ಹೀಗಾಗಿ ನನಗೂ ಒಳ್ಳೆಯ ಶಾರೀರ ಬಂದಿದೆ ಎಂದ ಅವರು ತಂದೆ ಜತೆ ಸಾಕಷ್ಟು ಜಗಳ ಆಡುತ್ತಿದ್ದೆ ಎಂಬುದನ್ನೂ ಹೇಳಿಕೊಂಡಿದ್ದಾರೆ.
ಆದರೆ ತಂದೆ ಎಂದರೆ ಏನು ಎಂಬುದು ತುಂಬಾ ಚೆನ್ನಾಗಿ ಅರ್ಥವಾಗಿದ್ದು ನನಗೆ ನಾನು ತಂದೆ ಆದಾಗಲೇ. ನನ್ನ ತಂದೆಯನ್ನು ಇನ್ನೂ ಸ್ವಲ್ಪ ಪ್ರೀತಿಯಿಂದ ನೋಡಬೇಕಿತ್ತೇನೋ ಅಂತ ಒಂದು ಅಪರಾಧಿ ಭಾವ ಈಗ ಕಾಡುತ್ತಿದೆ ಎಂದ ಅವರು, ಬಹುಶಃ ಎಲ್ಲರಲ್ಲೂ ಈ ಥರ ಒಂದು ಭಾವ ಇರುತ್ತದೆ ಅನಿಸುತ್ತದೆ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ನಾವು ತಂದೆಯಾದಾಗಲೇ ನಮಗೆ ತಂದೆ ಎಂದರೆ ಏನು ಅಂತ ಚೆನ್ನಾಗಿ ಅರ್ಥವಾಗುವುದು ಎಂಬ ಅನಿಸಿಕೆ ಹೇಳಿಕೊಂಡಿದ್ದಾರೆ.