ಶಬರಿಮಲೈಗೆ ತೆರಳಿದ ಅಯ್ಯಪ್ಪ ಮಾಲಾಧಾರಿಗಳು

ayyapa
ಚಿಕ್ಕಮಗಳೂರು ಶ್ರೀ ವಲ್ಲಭಭಾಯಿ ಗಣಪತಿ ದೇವಾಲಯದಲ್ಲಿ ಮಣಿಕಂಠ ಗ್ರೂಪ್‌ಯಿಂದ ಶ್ರೀ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಇರುಮುಡಿ ಕಟ್ಟಿಕೊಂಡು ಶಬರಿಮಲೈ ಯಾತ್ರೆಗೆ ತೆರಳಿದರು. ಶಶಿ, ಸೋಮ, ಮಧು, ಲೋಹಿತ್, ತ್ಯಾಗರಾಜ್ ಇತರರಿದ್ದರು.
Published on

ಚಿಕ್ಕಮಗಳೂರು: ನಗರದ ಶ್ರೀ ವಲ್ಲಭಭಾಯಿ ಗಣಪತಿ ದೇವಾಲಯದಲ್ಲಿ ಮಣಿಕಂಠ ಗ್ರೂಪ್‌ನಿಂದ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಎರಡನೇ ವರ್ಷದ ಇರುಮುಡಿ ಕಟ್ಟಿಕೊಂಡು ಶನಿವಾರ ಶಬರಿಮಲೈ ಯಾತ್ರೆ ಕೈಗೊಂಡರು. ಈ ವೇಳೆ ಮಾತನಾಡಿದ ಗುರುಸ್ವಾಮಿ ರಂಗನಾಥ್, 15 ಮಂದಿ ಅಯ್ಯಪ್ಪ ಮಾಲಾಧಾರಿಗಳು ವ್ರತಾಚರಣೆ ಮುಗಿಸಿ ಭಕ್ತಿಯಿಂದ ಶ್ರೀ ಅಯ್ಯಪ್ಪಸ್ವಾಮಿ ಜ್ಯೋತಿ ದರ್ಶನಕ್ಕಾಗಿ ತೆರಳುತ್ತಿದ್ದೇವೆ. ಅಯ್ಯಪ್ಪ ದರ್ಶನದ ಭಾಗ್ಯವೇ ನಮಗೆ ಹೆಮ್ಮೆಯಾಗಿದೆ ಎಂದರು. ವ್ರತಾಚಾರಣೆಗಳು ಮನುಷ್ಯನ ಮನಸ್ಸನ್ನು ಹಿಡಿತದಲ್ಲಿಡಲು ಹಾಗೂ ಸನ್ಮಾರ್ಗದತ್ತ ಕೊಂಡೊಯ್ಯಲು ಸಹಕಾರಿ. ಎಲ್ಲರೂ ಜೀವನದಲ್ಲಿ ಒಮ್ಮೆಯಾದರೂ ಶಬರಿಮಲೈ ಯಾತ್ರೆ ಕೈಗೊಂಡು ಪುನೀತರಾಗಬೇಕು ಎಂದು ತಿಳಿಸಿದರು. ಮಾಲಾಧಾರಿಗಳಾದ ಶಶಿ, ಸೋಮ, ಮಧು, ಲೋಹಿತ್, ತ್ಯಾಗರಾಜ್, ಮಂಜು, ಕಾರ್ತಿಕ್, ಪವನ್, ಜಗದೀಶ್, ಮಹೇಶ್, ಮನು, ಚಂದನ್ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net