

ಶಿವಮೊಗ್ಗ: ಸರ್ಕಾರಿ ನೌಕರರ ಭವನದಲ್ಲಿ ಮೈಸೂರು ಬ್ಯಾಂಕ್ ನಿವೃತ್ತ ನೌಕರರ ಸಂಘದಿಂದ ಜ.16ರ ಬೆಳಗ್ಗೆ 10.30ಕ್ಕೆ ಬ್ಯಾಂಕ್‌ನ ನಿವೃತ್ತ ನೌಕರರಿಗೆ, ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ.ಶ್ರೀನಿವಾಸ್ ರಾವ್ ಹೇಳಿದರು.
ಬ್ಯಾಂಕ್ ನಿವೃತ್ತ ನೌಕರರಿಗೆ ನ್ಯಾಯಯುತ ಸೌಲಭ್ಯ ಒದಗಿಸಲು ಹಾಗೂ ಅವರ ಜೀವನಕ್ಕೆ ಪೂರಕವಾದ ಅಂಶಗಳನ್ನು ಒದಗಿಸುವ ಸಂಬಂಧ ಸಂಘವು ಕೆಲಸ ಮಾಡುತ್ತಿದೆ. ವೈದ್ಯಕೀಯ ತಪಾಸಣೆ, ಆರೋಗ್ಯದ ಬಗ್ಗೆ ಉಪನ್ಯಾಸ, ಸಾಂಸ್ಕೃತಿಕ , ಸಂಗೀತ ಕಾರ್ಯಕ್ರಮಗಳ ಆಯೋಜಿಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
100 ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ ಮೈಸೂರು ಬ್ಯಾಂಕ್ ಎಂದೇ ಪ್ರಸಿದ್ಧಿಯಾಗಿದ್ದ ಬ್ಯಾಂಕ್, 2017ರಲ್ಲಿ ಎಸ್‌ಬಿಐನಲ್ಲಿ ವಿಲೀನಗೊಂಡ ಸಂಸ್ಥೆ ನೆನಪನ್ನು ಹಸಿರಾಗಿಡುವಲ್ಲಿ ನಮ್ಮ ಸಂಘಟನೆ ಶ್ರಮಿಸುತ್ತಿದೆ. ನಿವೃತ್ತ ನೌಕರರಿಗೆ ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡಲಾಗುತ್ತಿದೆ ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮೈಸೂರು ಬ್ಯಾಂಕ್ ನೌಕರರ ಸಂಘಟನೆ ಕೇಂದ್ರ ಕಚೇರಿ ಪ್ರಧಾನ ಕಾರ್ಯದರ್ಶಿ ಸಿ.ಎನ್.ಪ್ರಸಾದ್ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಪ್ರಮುಖರಾದ ಎಚ್.ಎಂ.ಶ್ರೀನಿವಾಸ್ ಪುರಾಣಿಕ್, ಎಸ್.ಶಿವಮೂರ್ತಿ, ಆನಂದಮೂರ್ತಿ, ಎಚ್.ಎಸ್.ಮಂಜುನಾಥ್, ಕೆ.ಜಿ.ಕೃಷ್ಣಾನಂದ, ಗುರುಮೂರ್ತಿ ಜೋಯಿಸ್, ಎಂ.ಪಿ.ವೀರಭದ್ರಪ್ಪ, ಲಕ್ಷ್ಮಣ ಶೆಟ್ಟಿ ಮತ್ತು ಗುರುರಾಜ್ ಸುದ್ದಿಗೋಷ್ಠಿಯಲ್ಲಿದ್ದರು.