

ನವದೆಹಲಿ: ಕೇಂದ್ರ ಸಚಿವರು ಒಬ್ಬೊಬ್ಬರಾಗಿ ಕೊವಿಡ್-19 ಸೋಂಕಿಗೆ ಒಳಗಾಗುತ್ತಿದ್ದಾರೆ.
ಇದೀಗ ಆಯುಷ್ ಇಲಾಖೆ ಸಚಿವ ಶ್ರೀಪಾದ್ ನಾಯ್ಕ್ ಅವರಲ್ಲಿಯೂ ಕರೊನಾ ದೃಢಪಟ್ಟಿದೆ. ಕೊವಿಡ್-19 ಸೋಂಕು ತಗುಲಿದ ಐದನೇ ಕೇಂದ್ರ ಸಚಿವರು ಇವರು.
ಟ್ವೀಟ್ ಮೂಲಕ ತಿಳಿಸಿದ ಶ್ರೀಪಾದ್ ನಾಯ್ಕ್ ಅವರು, ನನಗೆ ಯಾವುದೇ ಲಕ್ಷಣಗಳೂ ಇಲ್ಲ. ಆದರೂ ಕೊವಿಡ್-19 ಟೆಸ್ಟ್ಗೆ ಒಳಗಾಗಿದ್ದೆ. ಫಲಿತಾಂಶ ಪಾಸಿಟಿವ್ ಬಂದಿದೆ. ಸದ್ಯ ಆಸ್ಪತ್ರಗೆ ದಾಖಲಾಗಲಿಲ್ಲ. ಮನೆಯಲ್ಲಿಯೇ ಐಸೋಲೇಟ್ ಆಗಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರೂ ಕೊವಿಡ್-19 ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಮೊದಲು ಕೊವಿಡ್-19 ಸೋಂಕು ತಗುಲಿದ್ದು ಗೃಹ ಸಚಿವ ಅಮಿತ್ ಷಾಗೆ. ಅವರೀಗ ಚೇತರಿಸಿಕೊಂಡಿದ್ದಾರೆ. ಸದ್ಯ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಅರ್ಜುನ್ ಮೇಘ್ವಾಲ್, ಕೈಲಾಶ್ ಚೌಧರಿ ಅವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.
ಶ್ರೀಪಾದ್ ನಾಯ್ಕ್ ಅವರು ಏಪ್ರಿಲ್ ನಲ್ಲಿ ಕರೊನಾ ವಿರುದ್ಧ ಹೋರಾಟದಲ್ಲಿ ಆಯುರ್ವೇದ ಪರಿಣಾಮಕಾರಿ ಎಂದು ಪ್ರತಿಪಾದಿಸಿದ್ದರು. (ಏಜೆನ್ಸೀಸ್)