

ಬೆಂಗಳೂರು:
ರಾಜ್ಯದ ತಾಲೂಕು ಮತ್ತು ಜಿಲ್ಲಾ ಮಟ್ಟದ ಆಯುಷ್ ಆಸ್ಪತ್ರೆಗಳಲ್ಲಿ 20,48,313 ಓಪಿಡಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ದಿನೇಶ್ ಗುಂಡೂರಾವ್ ಮೇಲ್ಮನೆಯಲ್ಲಿ ತಿಳಿಸಿದ್ದಾರೆ.
ಜೆಜೆಪಿಯ ಹೆಚ್.ಪೂಜಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ಐಪಿಡಿಯಲ್ಲಿ 58 ಲಕ್ಷ ರೋಗಿಗಳು ಚಿಕಿತ್ಸೆಗೆ ದಾಖಲಾಗಿದ್ದಾರೆ. ಆಯುಷ್ ಇಲಾಖೆಯಲ್ಲಿ ವರ್ಗಾವಣೆಗೆ ಕೌನ್ಸಿಲಿಂಗ್ ಮಾಡಿ ಮಾಡ್ತಿದ್ದೇವೆ ಎಂದರು.
ಪದವಿ ಪಡೆದ ಆಯುಷ್ ವೈದ್ಯರು ಮತ್ತು ಸ್ನಾತಕೋತ್ತರ ಪದವಿ ಪಡೆದ ವೈದ್ಯರಲ್ಲಿ, ತಜ್ಞ ವೈದ್ಯರ ವಿಚಾರದಲ್ಲಿ ಕೆಲ ಮಿಸ್ ಮ್ಯಾಚ್ ಆಗಿದೆ ಅದನ್ನ ಪರಿಶೀಲನೆ ನಡೆಸುತ್ತೇನೆ. ಇಷ್ಟು ವರ್ಷ ಯಾರು ಮಾಡದ ಕೆಲಸ ನಾನು ಮಾಡ್ತಿದ್ದೀನಿ. ಸೀನಿಯಾರಿಟಿ ಲಿಸ್ಟ್ ಇಲ್ಲ, ಗ್ರೇಡ್ ಲಿಸ್ಟ್ ಇಲ್ಲ, ದುಡ್ಡು ತಗೊಂಡು ವರ್ಗಾವಣೆ ಮಾಡ್ತಿದ್ರು. ಈಗ ಅದನ್ನೆಲ್ಲ ತೆಗೆದು ಪಾರದರ್ಶಕವಾಗಿ ಮಾಡ್ತಿದ್ದೇನೆ
ಎಂದು ಏರು ದನಿಯಲ್ಲಿ ಉತ್ತರಿಸಿದರು.
ಆರೋಗ್ಯ ಸಚಿವರು ಬಿಪಿ ಹೆಚ್ಚು ಮಾಡಿಕೊಂಡರೆ, ರಾಜ್ಯದ ಆರೋಗ್ಯದ ಗತಿ ಏನು ಎಂದ ಪರಿಷತ್ ಸದಸ್ಯ ಸಿ ಟಿ ರವಿ ಕುಟುಕಿದರು.