ಮೇ.5 ರಂದು ಆಯುರ್ವೇದ ಸಲಹಾ ಶಿಬಿರ

WhatsApp-Image-2020-08-16-at-22.58.00
Published on

ಮಂಗಳೂರು: ಸೇವಾಭಾರತಿ ಮಂಗಳೂರು ಇದರ ಸೇವಾ ಪ್ರಕಲ್ಪವಾದ ಅನಂತಸೌಖ್ಯ ಮತ್ತು ವೇದಂ ಆಯುರ್ವೇದ ಆಸ್ಪತ್ರೆ ಹಾಗೂ ಫಾರ್ಮಸಿ ಇವರ ಸಹಯೋಗದೊಂದಿಗೆ ಹಿರಿಯ ನಾಗರಿಕರಿಗಾಗಿ ಮೇ.5ರ ಭಾನುವಾರ ಉಚಿತ ಆಯುರ್ವೇದ ಸಲಹಾ ಶಿಬಿರವು ಮಂಗಳೂರು ವಿ.ಟಿ.ರಸ್ತೆಯಲ್ಲಿರುವ ಚೇತನಾ ಬಾಲವಿಕಾಸಕೇಂದ್ರದ ವಠಾರದಲ್ಲಿ ನಡೆಯಲಿದೆ. ಈ ಶಿಬಿರವು ಆಯುರ್ವೇದ ತಜ್ಞರಾದ ಡಾ.ಸಚಿನ್ ನಡ್ಕ ಮತ್ತು ಡಾ.ಅನುಷಾ ಜಿ. ಇವರ ನೇತೃತ್ವದಲ್ಲಿ ಬೆಳಗ್ಗೆ 9.30 ರಿಂದ ಅಪರಾಹ್ನ 12.30ರ ವರೆಗೆ ನಡೆಯಲಿದೆ. ಶಿಬಿರದಲ್ಲಿ ಆಯ್ದ ಆಯುರ್ವೇದ ಔಷಧಿಯನ್ನು ಉಚಿತವಾಗಿ ವಿತರಿಸಲಾಗುವುದು ಹಾಗೂ ರಕ್ತದೊತ್ತಡದ ಪರೀಕ್ಷೆಯೂ ನಡೆಸಲಾಗುವುದು. ಆಸಕ್ತ ಹಿರಿಯ ನಾಗರಿಕರು ಚೇತನಾ ಬಾಲವಿಕಾಸ ಕೇಂದ್ರದ ಕಚೇರಿಯಲ್ಲಿ ಅಥವಾ 9036493397ಗೆ ಎಸ್.ಎಂ.ಎಸ್/ ವಾಟ್ಸಾಪ್ ಮೂಲಕ ನೋಂದಣಿ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net