

ನಂಜನಗೂಡು: ತಾಲೂಕಿನ ದೇವಿರಮ್ಮನಹಳ್ಳಿಯಲ್ಲಿ ನಂಜನಗೂಡಿನ ಶ್ರೀ ಧನ್ವಂತರಿ ಆರೋಗ್ಯ ಆಶ್ರಮದಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಶಿಬಿರವನ್ನು ಶನಿವಾರ ಆಯೋಜಿಸಲಾಗಿತ್ತು.
ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘ ಹಾಗೂ ಅನುರಾಗ ಮಕ್ಕಳ ಮನೆ ಸಹಯೋಗದಲ್ಲಿ ಗ್ರಾಮದ ಮಾರಮ್ಮನ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಗ್ರಾಮದ ಸುಮಾರು 200ಕ್ಕೂ ಹೆಚ್ಚು ಜನರು ಭಾಗವಹಿಸಿ ಬಿಪಿ, ಶುಗರ್, ಮಂಡಿ ನೋವು ಸೇರಿದಂತೆ ವಿವಿಧ ಕಾಯಿಲೆಗಳಿಗೆ ತಪಾಸಣೆ ಮಾಡಿಸಿಕೊಂಡರು.
ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ಗೌರವಾಧ್ಯಕ್ಷ ದೇವೀರಮ್ಮನಹಳ್ಳಿ ನಂದೀಶ್ ಮಾತನಾಡಿ, ಇಂಗ್ಲಿಷ್ ಚಿಕಿತ್ಸೆಯಿಂದ ಕ್ಷಣಮಾತ್ರದಲ್ಲಿ ರೋಗಗಳು ಗುಣವಾಗಬಹುದು. ಆದರೆ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಪಡೆದಾಗ ಕಾಯಿಲೆಗಳು ವಾಸಿಯಾಗುವುದು ಸ್ವಲ್ಪ ತಡವಾದರೂ ಯಾವುದೇ ಬಾಧೆಗಳು ಮುಂದಿನ ದಿನಗಳಲ್ಲಿ ಕಾಣಿಸುವುದಿಲ್ಲ. ಇಂತಹ ಶಿಬಿರಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಶಿಬಿರಗಳನ್ನು ತಾಲೂಕಿನಾದ್ಯಂತ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ರೈತ ಸಂಘದ ಗೌರವಾಧ್ಯಕ್ಷ ನಂದೀಶ್, ಹಾಡ್ಯ ರವಿ, ಕಸುವಿನಹಳ್ಳಿ ಮಂಜೇಶ್‌ಕುಮಾರ್, ಮಕ್ಕಳ ಮನೆ ಸೋಮಶೇಖರ್‌ಮೂರ್ತಿ, ಶಿವಕುಮಾರ್, ಮಹೇಶ, ಗ್ರಾಮದ ಚಿಕ್ಕ ಯಜಮಾನ ಕುಮಾರ್, ಶಿವಮೂರ್ತಿ, ಲೋಕೇಶ್, ವಸಂತ, ಸಿದ್ದರಾಜು, ಪಟೇಲ್ ಮಹದೇವಪ್ಪ, ಸ್ವಾಮಿ, ಸಂತೋಷ, ಮಹೇಶ್, ಶಿವಬುದ್ಧಿ, ಮುದ್ದಹಳ್ಳಿ ಕುಮಾರ್, ವಸಂತ್‌ಕುಮಾರ್, ರಾಜಶೇಖರ್, ನಟೇಶ್, ಸ್ವಾಮಿ, ಬಿವಿ ಪಂಡಿತರ ಆರೋಗ್ಯ ಆಶ್ರಮದ ವೈದ್ಯಾಧಿಕಾರಿಗಳಾದ ಡಾ.ಸುಶ್ಮಿತಾ ರಮೇಶ್, ಡಾ.ಅನುರಾಧಾ, ಡಾ.ನಮ್ರತಾ, ಡಾ. ಆರ್.ಕೃಷ್ಣ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.