‘ಅಯೋಗ್ಯ’ನ ಮುದ್ದು ಪುಟ್ಟಲಕ್ಷ್ಮೀ : ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ ನೀನಾಸಂ ಸತೀಶ್- ರಚಿತಾ ರಾಮ್

ಅಯೋಗ್ಯ 2 ಚಿತ್ರದ ಪೋಸ್ಟರ್​
ಅಯೋಗ್ಯ 2 ಚಿತ್ರದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ನೀನಾಸಂ ಸತೀಶ್ ಹುಟ್ಟುಹಬ್ಬಕ್ಕೆ ಆಯೋಗ್ಯ 2 ಚಿತ್ರದಿಂದ ವಿಶೇಷ ಉಡುಗೊರೆ
  • ರಚಿತಾ ರಾಮ್ ಜತೆ ಹೆಜ್ಜೆ ಹಾಕಿರುವ ಮುದ್ದು ಮುದ್ದು ಪುಟ್ಟಲಕ್ಷ್ಮೀ ಹಾಡು ರಿಲೀಸ್
  • ಆಗಸ್ಟ್​ 14ಕ್ಕೆ ರಾಜ್ಯಾದ್ಯಂತ ಸಿನಿಮಾ ರಿಲೀಸ್
ಬೆಂಗಳೂರು: ನೀನಾಸಂ ಸತೀಶ್, ರಚಿತಾ ರಾಮ್ ಅಭಿನಯದ ‘ಅಯೋಗ್ಯ 2’ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಿದ್ಧವಾಗಿದೆ. 2018ರಲ್ಲಿ ತೆರೆಕಂಡಿದ್ದ ‘ಅಯೋಗ್ಯ’ ಚಿತ್ರದ ಸೀಕ್ವೆಲ್ ಇದಾಗಿದ್ದು, ಎಸ್.ಮಹೇಶ್‌ಕುಮಾರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಚಿತ್ರದ ಆಡಿಯೋ ರೈಟ್ಸ್ 2ಕೋಟಿಗೆ ಮಾರಾಟವಾಗಿದ್ದು, ಈ ಹಿನ್ನೆಲೆಯಲ್ಲಿ ಹಾಡುಗಳ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಇನ್ನು ನಟ ನೀನಾಸಂ ಸತೀಶ್ ಶನಿವಾರಕ್ಕೆ (ಜೂ. 20) 40ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಚಿತ್ರತಂಡವು ರಿಲೀಸ್ ಡೇಟ್ ಅನೌನ್ಸ್ ಜತೆಗೆ ಚಿತ್ರದ ‘ಮುದ್ದು ಮುದ್ದು ಪುಟ್ಟಲಕ್ಷ್ಮೀ’ ಹಾಡು ಬಿಡುಗಡೆ ಮಾಡಿತು. ಇನ್ನು ಇದೇ ಆಗಸ್ಟ್ 14ಕ್ಕೆ ‘ಅಯೋಗ್ಯ 2’ ತೆರೆ ಮೇಲೆ ಬರಲಿದೆ. ಇನ್ನು ‘ಮುದ್ದು ಮುದ್ದು ಪುಟ್ಟಲಕ್ಷ್ಮೀ’ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಗಾಯಕರಾದ ಸಿದ್ ಶ್ರೀರಾಮ್, ಪೃಥ್ವಿ ಭಟ್ ಧ್ವನಿಯಾಗಿದ್ದಾರೆ. ಈ ರೊಮ್ಯಾಂಟಿಕ್ ಹಾಡಿನಲ್ಲಿ ರಚಿತಾ ಮತ್ತು ಸತೀಶ್ ಹೆಜ್ಜೆ ಹಾಕಿದ್ದಾರೆ. ಇನ್ನು ಹುಟ್ಟುಹಬ್ಬದ ಖುಷಿಯಲ್ಲಿಯೇ ನಟ ನೀನಾಸಂ ಸತೀಶ್ ಗಂಭೀರ ಮಾತಿಗಿಳಿದರು. ‘ಇಂಡಸ್ಟ್ರಿ ಎತ್ತುವ ಕೆಲಸವಾಗಬೇಕು. ಇದರಿಂದ ಲಕ್ಷಾಂತರ ಜನರು ಜೀವನ ಸಾಗಿಸುತ್ತಿದ್ದಾರೆ. ಎಷ್ಟೋ ವರ್ಷಗಳಿಂದ ಕಟ್ಟಿರುವ ಇಂಡಸ್ಟ್ರಿ ಇದು, ಮುಗಿದೇ ಹೋಯಿತು ಎನ್ನುವಾಗ ನನಗೂ ಬೇಸರವಾಗುತ್ತದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಒಳ್ಳೆಯ ಸಿನಿಮಾಗಳು ಬರಲಿವೆ. ಸೋಲು-ಗೆಲುವು ಸಾಮಾನ್ಯ. ಸದ್ಯದ ಪರಿಸ್ಥಿತಿಗೆ ಪ್ರತಿ ನಟರು ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡಲೇಬೇಕಿದೆ. ಕನ್ನಡ ಸಿನಿಮಾಗಳನ್ನು ಗೆಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಮಾಹಿತಿ ಹಂಚಿಕೊಂಡರು. ಸತೀಶ್, ರಚಿತಾ ಜತೆಗೆ ರವಿಶಂಕರ್, ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಮಂಜು ಪಾವಗಡ ಕಲಾಬಳಗದಲ್ಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net