

ಶ್ರೀರಾಮನ ಭವ್ಯ ಮಂದಿರದ ನಿರ್ವಣದಿಂದ ಇಡೀ ಅಯೋಧ್ಯೆಯ ಚಿತ್ರಣವೇ ಬದಲಾಗಿದೆ. ಮುಂಬರುವ ದಿನಗಳಲ್ಲಂತೂ ಈ ನಗರ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ಸ್ಥಾನ ಪಡೆಯಲಿದೆ. ಧಾರ್ವಿುಕ, ಆಧ್ಯಾತ್ಮಿಕ, ಪ್ರವಾಸಿ, ಸಾಮಾಜಿಕ ಸಾಮರಸ್ಯದ ಕೇಂದ್ರವಾಗಿ ಅಯೋಧ್ಯೆ ಜಾಗತಿಕವಾಗಿ ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿದ್ದು, ಮಹತ್ವದ ಯೋಜನೆಗಳು ಅಭಿವೃದ್ಧಿಯ ದಿಕ್ಕನ್ನೇ ಬದಲಿಸಲಿವೆ. ಸದ್ಯ, 30 ಸಾವಿರ ಕೋಟಿ ರೂಪಾಯಿ ಮೊತ್ತದ 178 ಯೋಜನೆಗಳು ಪ್ರಗತಿಯಲ್ಲಿವೆ. ಹಿರಿಯ ಅಧಿಕಾರಿಗಳ ಪ್ರಕಾರ ಮುಂದಿನ 23 ವರ್ಷಗಳಲ್ಲಿ ಅಯೋಧ್ಯೆ ದೇಶದ ಆಧ್ಯಾತ್ಮಿಕ ರಾಜಧಾನಿಯಾಗಿ ಮಾರ್ಪಡಲಿದೆ.
ರಾಮಾಯಣ ಥೀಮ್ಲ್ಲಿ ವೇದನಗರಿ ನಿರ್ವಣ: ರಾಮಾಯಣ ಸ್ವರೂಪದ ಮಾದರಿಯಲ್ಲಿ ಅಂದರೆ ವೇದಕಾಲದ ಕಟ್ಟಡ ವಿನ್ಯಾಸ ಮತ್ತು ಆಧುನಿಕತೆಯ ಮಿಳಿತದ ನವಅಯೋಧ್ಯೆ ನಿರ್ವಿುಸಲು ನಿರ್ಧರಿಸಿರುವ ಉತ್ತರಪ್ರದೇಶ ಸರ್ಕಾರ ಅಯೋಧ್ಯಾ-ಲಖನೌ ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆ 1,400 ಎಕರೆ ಜಮೀನನ್ನು ಗುರುತಿಸಿದೆ. 2047ರವರೆಗೆ ಇದು ಪೂರ್ಣಗೊಳ್ಳಲಿದ್ದು, ಹೊಸ ಹೋಟೆಲ್ಗಳು, ಅತಿಥಿಗೃಹಗಳು, ವಾಣಿಜ್ಯ ಸಂಕೀರ್ಣಗಳು, ಮಠಗಳು, ಅಪಾರ್ಟ್ವೆುಂಟ್ಗಳು ತಲೆಎತ್ತಲಿವೆ. ದೇಶದ ಬೇರೆ ಬೇರೆ ರಾಜ್ಯಗಳ ಗೆಸ್ಟ್ಹೌಸ್ಗಳು ಮಾತ್ರವಲ್ಲ, ವಿದೇಶದಿಂದ ಬಂದವರಿಗೆ ಪ್ರತ್ಯೇಕ ಗೆಸ್ಟ್ಹೌಸ್ಗಳು ಇರಲಿವೆ. ನ್ಯೂ ಅಯೋಧ್ಯಾ ಟೌನ್ಶಿಪ್ನಲ್ಲಿ ಅತಿಥಿ ಗೃಹ ನಿರ್ವಿುಸಲು ನೇಪಾಳ, ಶ್ರೀಲಂಕಾ ಮತ್ತು ದಕ್ಷಿಣ ಕೊರಿಯಾ ತಲಾ ಐದು ಎಕರೆ ಜಮೀನನ್ನು ಕೇಳಿವೆ.
ಹೇಗಿರಲಿದೆ ಹೊಸ ನಗರ?
* ಈಗಿರುವ ಹಳೆಯ ಅಯೋಧ್ಯೆಯಿಂದ 7 ಕಿಲೋಮೀಟರ್ ದೂರದಲ್ಲಿ ನಿರ್ವಣ.
* ಅಯೋಧ್ಯಾ ಡೆವಲಪ್ವೆುಂಟ್ ಅಥಾರಿಟಿ 2047ರ ಹೊತ್ತಿಗೆ ವೇದನಗರ ಎಂದು ಹೆಸರಿಸ ಲಾಗಿರುವ ಗ್ರೀನ್ ಫೀಲ್ಡ್ ಟೌನ್ಶಿಪ್ ನಿರ್ಮಾಣ
* ಗ್ರೀನ್ ಫಿಲ್ಡ್ ಸಿಟಿಯನ್ನು 1,400 ಎಕರೆ ಜಮೀನಿನಲ್ಲಿ ಎರಡು ಹಂತದಲ್ಲಿ ನಿರ್ವಿುಸಲಾಗುತ್ತದೆ. ಮೊದಲ ಹಂತದಲ್ಲಿ ಸರಯೂ ನದಿತೀರದ ಗ್ರಾಮಗಳ 539 ಎಕರೆ ಪ್ರದೇಶದಲ್ಲಿ ನಗರ ತಲೆಎತ್ತಲಿದೆ.
* ವಿದ್ಯುತ್ ಬೇಡಿಕೆಯ ಶೇಕಡ 70 ಭಾಗವನ್ನು ಸೌರವಿದ್ಯುತ್ ಮೂಲಕ ಪೂರೈಸಲಾಗುತ್ತದೆ.
* ವೇದನಗರಿ ನಿರ್ವಣಕ್ಕೆ ಈಗಾಗಲೇ 1 ಸಾವಿರ ಕೋಟಿ ರೂ. ಮೊತ್ತವನ್ನು ಉ.ಪ್ರ. ಸರ್ಕಾರ ಬಿಡುಗಡೆ ಮಾಡಿದೆ.
* 70 ಕಿ.ಮೀ. ಉದ್ದದ ವರ್ತಲ ರಸ್ತೆ ನಿರ್ವಣಕ್ಕೆ 3,935 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈ ವರ್ತಲ ರಸ್ತೆ ಮೂರು ಜಿಲ್ಲೆಗಳನ್ನು (ಅಯೋಧ್ಯಾ, ಬಸ್ತಿ, ಗೊಂಡಾ) ಹಾದುಹೋಗಲಿದೆ. 2030ರ ವೇಳೆಗೆ ರಿಂಗ್ ರೋಡ್ ಕಾಮಗಾರಿ ಪೂರ್ಣಗೊಳ್ಳಲಿದೆ.
ಆರ್ಥಿಕತೆಗೂ ರಾಮಬಲ
ಮುಂಬೈ: ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳು ತ್ತಿರುವ ಹಿನ್ನೆಲೆಯಲ್ಲಿ ಜನವರಿಯಲ್ಲಿ ದೇಶದ ಆರ್ಥಿಕತೆಗೆ 50 ಸಾವಿರ ಕೋಟಿ ರೂ.ಗಳ ಬಲ ಸಿಗಲಿದೆ ಎಂದು ಕಾನ್ಪಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ತಿಳಿಸಿದೆ. ರಾಮಮಂದಿರದ ಮಾದರಿ, ಕೀಚೈನ್, ರಾಮನ ಚಿತ್ರವಿರುವ ಟೀಶರ್ಟ್, ರಾಮಧ್ವಜಗಳಿಗೆ ದೇಶದ ಎಲ್ಲ ಕಡೆ ಬೇಡಿಕೆ ಹೆಚ್ಚಿದೆ. ಅಲ್ಲದೆ, ಉದ್ಘಾಟನೆ ಸಮಾರಂಭದಲ್ಲಿ 7 ಸಾವಿರ ಗಣ್ಯರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ, ವಿವಿಧ ಆಯಾಮಗಳಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಿವೆ.
ರಾಮಚರಿತ ಮಾನಸ ಉಚಿತ
ಗೋರಖಪುರ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಾಮಚರಿತ ಮಾನಸ ಪುಸ್ತಕಕ್ಕೆ ಬೇಡಿಕೆ ಹೆಚ್ಚಿದೆ. ಗೀತಾ ಪ್ರೆಸ್ 2022ರಿಂದ ಪ್ರಕಟಿಸಿದ್ದ ರಾಮಚರಿತ ಮಾನಸದ 1 ಲಕ್ಷ ಪ್ರತಿಗಳು ಖಾಲಿಯಾಗಿವೆ. ಈ ಹಿನ್ನೆಲೆಯಲ್ಲಿ, ಗೀತಾ ಪ್ರೆಸ್ ತನ್ನ ವೆಬ್ಸೈಟ್ನಿಂದ ರಾಮಚರಿತ ಮಾನಸವನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ. ಮಂಗಳವಾರದಿಂದ, 15 ದಿನ ಲಭ್ಯವಿರಲಿದೆ.
ಹೇಮಾಮಾಲಿನಿ ನೃತ್ಯರೂಪಕ
ಅಯೋಧ್ಯೆ: ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಲಿರುವ ಖ್ಯಾತ ನಟಿ ಮತ್ತು ಸಂಸದೆ ಹೇಮಾಮಾಲಿನಿ ರಾಮಕಥಾ ಆಧರಿಸಿದ ನೃತ್ಯರೂಪಕವನ್ನೂ ಪ್ರಸ್ತುತಪಡಿಸಲಿದ್ದಾರೆ.
ಯೋಗಿಯಿಂದ ಸ್ವಚ್ಛತಾಕಾರ್ಯ
ಶ್ರೀರಾಮ ಮಂದಿರ ಉದ್ಘಾಟನೆಯ ಸಿದ್ಧತೆಗಳನ್ನು ಪರಿಶೀಲಿಸಲು ಭಾನುವಾರ ಅಯೋಧ್ಯೆಗೆ ಭೇಟಿ ನೀಡಿದ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ, ಲತಾ ಮಂಗೇಶ್ಕರ್ ವೃತ್ತದಲ್ಲಿ ರಸ್ತೆಯನ್ನು ಸ್ವಚ್ಛಗೊಳಿಸುವ ಮೂಲಕ ‘ಸ್ವಚ್ಛ ತೀರ್ಥಕ್ಷೇತ್ರ ಮಹಾಭಿಯಾನ’ವನ್ನು ಉದ್ಘಾಟಿಸಿದರು. ಇದೇ ವೇಳೆ 50 ಇಲೆಕ್ಟ್ರಿಕ್ ಬಸ್ಗಳು, 25 ಇ-ಆಟೋಗಳ ಚಾಲನೆಗೆ ಹಸಿರು ನಿಶಾನೆ ನೀಡಿದರು.
ಉದ್ಘಾಟನೆಗೆ ಸಜ್ಜು
ಅಮಿನ್ಗಂಜ್ ಮತ್ತು ಕಲೆಕ್ಟೊರೇಟ್ ಬಳಿ ಬಹುಮಹಡಿ ರ್ಪಾಂಗ್, ಕೌಸಲ್ಯಾ ಸದನ, ರಾಷ್ಟ್ರೀಯ ಹೆದ್ದಾರಿ-27ರಿಂದ ರಾಮಪಥದವರೆಗೆ ರೈಲ್ವೆ ಸಂಪರ್ಕ, 394 ಕೋಟಿ ರೂ. ವೆಚ್ಚದಲ್ಲಿ ನಿರ್ವಣವಾಗುತ್ತಿರುವ ಅಯೋಧ್ಯಾ-ಅಕ್ಬರಪುರ ನಾಲ್ಕು ಲೆನ್ ರಸ್ತೆ. ಪಂಚಕೋಸಿ ಪರಿಕ್ರಮಾ ಮಾರ್ಗದಲ್ಲಿ ಮತ್ತು ದರ್ಶನನಗರದಲ್ಲಿ ರೈಲ್ವೆ ಮೇಲ್ಸೇತುವೆ ಯೋಜನೆಗಳು ಇದೇ ತಿಂಗಳು (2024 ಜನವರಿ) ಪೂರ್ಣಗೊಳ್ಳಲಿವೆ.
ಅಮೆರಿಕದಲ್ಲೂ ಹೋರ್ಡಿಂಗ್ಸ್
ನ್ಯೂಯಾರ್ಕ್: ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆಯ ಸಂಭ್ರಮ ವಿಶ್ವದ ಬಹುತೇಕ ದೇಶಗಳಲ್ಲಿ ನೆಲೆಸಿದೆ. ಅದರಲ್ಲೂ, ಅನಿವಾಸಿ ಭಾರತೀಯರು ಭಾರಿ ಸಂಖ್ಯೆಯಲ್ಲಿ ನೆಲೆಸಿರುವ ಅಮೆರಿಕದ 10 ರಾಜ್ಯಗಳಲ್ಲಿ ಶ್ರೀರಾಮನ ಮತ್ತು ಮಂದಿರ ಮಾದರಿಯ 40ಕ್ಕೂ ಅಧಿಕ ಬೃಹತ್ ಹೋರ್ಡಿಂಗ್ಸ್ ರಾರಾಜಿ ಸುತ್ತಿದ್ದು. ಮಂದಿರ ಉದ್ಘಾಟನೆ ಸಮಾರಂಭಕ್ಕೆ ಶುಭ ಕೋರಲಾಗಿದೆ.
ಮೋದಿ ಅಯೋಧ್ಯೆ ಭೇಟಿಗೆ 32 ವರ್ಷ!
ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 11 ದಿನಗಳ ವಿಶೇಷ ಅನುಷ್ಠಾನ ಕೈಗೊಂಡಿದ್ದಾರೆ. 32 ವರ್ಷಗಳ ಹಿಂದೆ, ಅಂದರೆ 1992 ಜನವರಿ 14 ಮಂದಿರ ನಿರ್ವಣದ ಹಾದಿಯಲ್ಲಿ ಮಹತ್ವದ ದಿನವಾಗಿತ್ತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಲಾದ ಏಕತಾ ಯಾತ್ರೆಯ ಅಂಗವಾಗಿ ಬಿಜೆಪಿ ಹಿರಿಯ ನಾಯಕ ಡಾ.ಮುರಳಿ ಮನೋಹರ ಜೋಶಿ ಅವರೊಡನೆ ನರೇಂದ್ರ ಮೋದಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತಲುಪಿದ್ದರು. ಟೆಂಟ್ನಲ್ಲಿದ್ದ ಬಾಲರಾಮನ ದರ್ಶನ ಪಡೆದಿದ್ದ ಅವರು, ಮಂದಿರ ನಿರ್ಮಾಣ ಶೀಘ್ರ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು. ಮೋದಿ ಆಗ ಗುಜರಾತ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ರಾಣೆ ಮಾತಿಗೆ ಪ್ರತಿಪಕ್ಷಗಳು ಗರಂ
ಮುಂಬೈ: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳದಿರುವ ಶಂಕರಾಚಾರ್ಯರ ನಿರ್ಧಾರ ತಪು್ಪ, ಅವರು ಈ ವಿಷಯದಲ್ಲಿ ರಾಜಕೀಯವನ್ನು ನೋಡದೆ ಅಯೋಧ್ಯೆಗೆ ಬಂದು ಆಶೀರ್ವದಿಸಬೇಕು ಎಂದು ಆಗ್ರಹಿಸಿದ ಕೇಂದ್ರ ಸಚಿವ ನಾರಾಯಣ್ ರಾಣೆ, ಶಂಕರಾಚಾರ್ಯರ ನಿಲುವನ್ನು ವಿರೋಧಿಸುವ ಭರದಲ್ಲಿ, ‘ಅವರು ಹಿಂದುಧರ್ಮಕ್ಕೆ ನೀಡಿರುವ ಕೊಡುಗೆ ಏನು?’ ಎಂದು ಪ್ರಶ್ನಿಸಿರುವುದು ವಿವಾದವಾಗಿ ಮಾರ್ಪಟ್ಟಿದೆ. ಶಂಕರಾಚಾರ್ಯರನ್ನು ಅವಮಾನಿಸಿರುವ ರಾಣೆಯವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಮತ್ತು ಬಿಜೆಪಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಮಹಾರಾಷ್ಟ್ರದ ವಿರೋಧ ಪಕ್ಷಗಳು ಆಗ್ರಹಿಸಿವೆ. ಮುಂಬೈನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ರಾಣೆ ರಾಜೀನಾಮೆಗೆ ಆಗ್ರಹಿಸಿದರು. ಶಿವಸೇನೆ ನಾಯಕ (ಉದ್ಧವ್ ಬಣ) ಸಂಜಯ್ ರಾವುತ್, ಶಂಕರಾಚಾರ್ಯರ ಕೊಡುಗೆಯನ್ನು ಪ್ರಶ್ನಿಸು ವುದರ ಮೂಲಕ ರಾಣೆ ಹಿಂದುತ್ವವನ್ನು ಅವಮಾನಿಸಿದ್ದಾರೆ ಎಂದರು.
‘ನಾಲ್ವರಲ್ಲಿ ಇಬ್ಬರು ಶಂಕರಾಚಾರ್ಯರು ಮಂದಿರ ಉದ್ಘಾಟನೆಯನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ. ಆದರೆ, ನಾಲ್ವರ ಪೈಕಿ ಯಾರೊಬ್ಬ ಶಂಕರಾಚಾರ್ಯರೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಜ.22ರ ನಂತರ ಅವರ ಅನುಕೂಲದ ಪ್ರಕಾರ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.