

ಬನ್ನೂರು: ಆಯೋಧ್ಯೆಯ ಶ್ರೀರಾಮ ಮಂದಿರದ ಮಂತ್ರಾಕ್ಷತೆಯನ್ನು ಪಟ್ಟಣದ ದೊಡ್ಡಅಂಗಡಿ ಬೀದಿಯ ಪ್ರತಿ ಮನೆ ಮನೆಗೂ ಮಹಿಳಾ ಸಂಘಟನೆ ಕಾರ್ಯಕರ್ತರು ವಿತರಿಸಿದರು.
ಮಂತ್ರಾಕ್ಷತೆಯನ್ನು ಪಟ್ಟಣದಲ್ಲಿ ಎಲ್ಲ ವಾರ್ಡ್‌ನ ಸದಸ್ಯರಿಗೆ ನೀಡುವ ಮೂಲಕ ಪ್ರತಿ ಮನೆ ಮನೆಗೂ ಮಂತ್ರಾಕ್ಷತೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಗುರುವಾರ ದೊಡ್ಡ ಅಂಗಡಿಬೀದಿ ಮತ್ತು ತೇರಿನ ಬೀದಿಯನ್ನು ಮಹಿಳಾ ವಾರ್ಡ್ ಕಾರ್ಯಕರ್ತರು ಸೇರಿ ವಾರ್ಡ್ ಸದಸ್ಯರ ಸಹಕಾರದೊಂದಿಗೆ ಮನೆ ಮನೆಗೂ ವಿತರಿಸಿದರು.
ಬನ್ನೂರು ಟೌನ್ ಬಿಜೆಪಿ ಅಧ್ಯಕ್ಷ ಪಿ.ಪ್ರಭಾಕರ್ ಮಾತನಾಡಿ, ಜ.22ರಂದು ಲೋಕಾರ್ಪಣೆಗೊಳ್ಳಲಿರುವ ಆಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿಷ್ಠಾಪನೆ ಪ್ರತಿ ಭಾರತೀಯನ ಗೌರವದ ಪ್ರತೀಕ ಎಂದರು. ಪುರಸಭಾ ಸದಸ್ಯೆ ಶೋಭಾ ಸತೀಶ್, ಅರ್ಚಕ ಸತೀಶ್, ಬಿ.ಆರ್.ರಾಜೇಂದ್ರಪ್ರಭು, ನಾಗರಾಜು, ಗಣೇಶ್, ಭಾರ್ಗವಿ, ಪದ್ಮಾ, ವೀಣಾ, ರೂಪಾ, ಶೀಲಾ, ಸಂಧ್ಯಾ, ಗಿರೀಜಾ, ಶಿಲ್ಪಾ, ಅನುರಾಧಾ, ಶ್ರೀದೇವಿ, ಅನಸೂಯಾ ಇತರರು ಇದ್ದರು.