14 ವರ್ಷಗಳ ವನವಾಸ, ರಾವಣನೊಂದಿಗೆ ಯುದ್ಧದ ಮೊದಲು ಶ್ರೀರಾಮನು ಪೂಜಿಸಿದ ಸಸ್ಯವಿದು…ಇದು ಶಿವನಿಗೂ ಪ್ರಿಯ

rama
Published on

ಅಯೋಧ್ಯೆ: ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕೇವಲ ಎರಡು ದಿನಗಳು ಮಾತ್ರ ಉಳಿದಿವೆ. ದೇಶಾದ್ಯಂತ ರಾಮಮಂದಿರ ಉದ್ಘಾಟನಾ ದಿನವನ್ನು ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಜನವರಿ 22 ಸೋಮವಾರದ ದಿನವು ಶಿವನ ನೆಚ್ಚಿನ ದಿನಗಳಲ್ಲಿ ಒಂದಾಗಿದೆ.

ಅಂದಹಾಗೆ ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಶಿವನ ಆಶೀರ್ವಾದವನ್ನು ಪಡೆಯಲು ಶಿವನ ನೆಚ್ಚಿನ ಸಸ್ಯವಾದ ಶಮಿಯನ್ನು ಪೂಜಿಸುತ್ತಾನೆ ಎಂದು ನಂಬಲಾಗಿದೆ. ರಾವಣನ ವಿರುದ್ಧ ಯುದ್ಧವನ್ನು ಪ್ರಾರಂಭಿಸುವ ಮೊದಲು ಸಹ ಶ್ರೀರಾಮನು ಯಾವುದೇ ತೊಂದರೆ ಬಾರದಂತೆ ಶಮಿ ಸಸ್ಯವನ್ನು ಪೂಜಿಸಿದನು. ಇದಾದ ನಂತರ ಯುದ್ಧ ನಡೆಯಿತು. ಇದನ್ನು ಪೌರಾಣಿಕ ಕಥೆಗಳಲ್ಲಿಯೂ ವಿವರಿಸಲಾಗಿದೆ. ಪೂಜೆ ಮತ್ತು ಹವನದ ಸಮಯದಲ್ಲಿ ಶಮಿ ಎಲೆಗಳನ್ನು ಬಳಸುವುದರಿಂದ ಪರಿಸರವನ್ನು ಶುದ್ಧೀಕರಣವಾಗುತ್ತದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ ಶಮಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಆಗುವ ಲಾಭಗಳನ್ನು ತಿಳಿಯೋಣ.

ಶಮಿ ಶಿವನಿಗೆ ತುಂಬಾ ಪ್ರಿಯ
ಶಿವನಿಗೆ ಶಮಿ ಗಿಡ ಎಂದರೆ ತುಂಬಾ ಇಷ್ಟ. ಈ ಸಸ್ಯವನ್ನು ಪೂಜಿಸುವುದರಿಂದ ಶಿವನು ಪ್ರಸನ್ನನಾಗುತ್ತಾನೆ. ಶಿವಲಿಂಗದ ಮೇಲೆ ಶಮಿ ಎಲೆಗಳನ್ನು ಅರ್ಪಿಸುವುದರಿಂದ ಜೀವನದ ಎಲ್ಲಾ ತೊಂದರೆಗಳು ಮತ್ತು ದುಃಖಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಇವು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತವೆ. 

ಶನಿದೇವನ ಕ್ರೋಧದಿಂದ ಮುಕ್ತಿ ಸಿಗುತ್ತದೆ  
ಶಮಿ ಗಿಡವನ್ನು ಪೂಜಿಸಿ ಅದರ ಎಲೆಗಳನ್ನು ಶಿವನಿಗೆ ಅರ್ಪಿಸಿದರೆ ಶನಿ ದೋಷದಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಶನಿಯ ನಕಾರಾತ್ಮಕ ಪ್ರಭಾವ ಕಡಿಮೆಯಾಗುತ್ತದೆ ಮತ್ತು ಹಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಶಮಿ ಗಿಡವನ್ನು ಪೂಜಿಸುವುದರಿಂದ ಹೆಚ್ಚಿನ ಪರಿಹಾರ ದೊರೆಯುತ್ತದೆ. ಮನೆಯಲ್ಲಿ ಶಮಿ ಗಿಡವನ್ನು ನೆಡುವುದರಿಂದ ಜೀವನದ ಎಲ್ಲಾ ಅಶುಭ ಪರಿಣಾಮಗಳಿಂದ ಪರಿಹಾರ ದೊರೆಯುತ್ತದೆ. ಇದು ತುಂಬಾ ಪ್ರಯೋಜನಕಾರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net