

ಅಯೋಧ್ಯೆ(ಉತ್ತರಪ್ರದೇಶ): ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಂದು ಬಾಲರಾಮ ದೇವರ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಅನೇಕ ದೇಶಗಳ ರಾಯಭಾರಿಗಳು, ಮುಖ್ಯಮಂತ್ರಿಗಳು, ಸಂಸದರು, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ 55 ದೇಶಗಳ 100 ಮುಖ್ಯಸ್ಥರನ್ನು ಆಹ್ವಾನಿಸಲಾಗಿದೆ.
ವಿಶ್ವದ ಅನೇಕ ದೇಶಗಳ ರಾಯಭಾರಿಗಳು, 55 ದೇಶಗಳ ಸುಮಾರು 100 ಮುಖ್ಯಸ್ಥರು ಬಾಲರಾಮದೇವರ ಪ್ರಾಣಪ್ರತಿಷ್ಠೆಗೆ ಸಾಕ್ಷಿಯಾಗಲಿದ್ದಾರೆ. ಪ್ರಭು ಶ್ರೀ ರಾಮ ವಂಶಜರು ಎಂದು ಹೇಳಿಕೊಳ್ಳುವ ಕೊರಿಯಾದ ರಾಣಿಯನ್ನೂ ಆಹ್ವಾನಿಸಲಾಗಿದೆ.
ಆಹ್ವಾನಿತ ದೇಶಗಳಲ್ಲಿ ಅರ್ಜೆಂಟೀನಾ, ಅಸ್ಟ್ರೇಲಿಯಾ, ಬೆಲಾರನ್, ಬೋಟ್ಸವಾನಾ,ಕೆನಡಾ, ಕೊಲಂಬಿಯಾ, ಡೆನ್ಮಾರ್ಕ್, ಡೊಮಿನಿಕಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ(ಡಿಆರ್ಸಿ), ಈಜಿಪ್ಟ್, ಇಥಿಯೋಪಿಯಾ, ಫಿಜಿ, ಫಿನ್ ಲ್ಯಾಂಡ್, ಫ್ರಾನ್ಸ್, ಜರ್ಮನಿ, ಘಾನಾ, ಗಯಾನಾ, ಹಾಂಗ್ ಕಾಂಗ್, ಹಂಗೇರಿ, ಇಂಡೋನೇಷಿಯಾ, ಐರ್ಲೆಂಡ್, ಇಟಲಿ, ಜಮೈಕಾ, ಜಪಾನ್, ಕೀನ್ಯಾ, ಕೊರಿಯಾ, ಮಲೇಷ್ಯಾ, ಮಲಾವಿ, ಮಾರಿಷಸ್, ಮೆಕ್ಸಿಕೋ, ಮ್ಯಾನ್ಮಾರ್, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ನೈಜೀರಿಯಾ, ನಾರ್ವೆ, ಸಿಯೆರಾ ಲಿಯೋನ್, ಸಿಂಗಾಪುರ್, ದಕ್ಷಿಣ ಆಫ್ರಿಕಾ, ಸ್ಪೇನ್, ಶ್ರೀಲಂಕಾ, ನುರಿನಾಮ್, ಸ್ವೀಡನ್, ತೈವಾನ್, ತಾಂಜಾನಿಯಾ, ಥೈಲ್ಯಾಂಡ್, ಟ್ರಿನಿಡಾಡ್ ಮತ್ತು ಟೊಬಾಗೊ, ವೆಸ್ಟ್ ಇಂಡೀಸ್, ಉಗಾಂಡಾ, ಯುಕೆ, ಯುಎನ್ಎ, ವಿಯೆಟ್ನಾಂ ಮತ್ತು ಜಾಂಬಿಯಾ ಸೇರಿ ನಾನಾ ದೇಶದ ಮುಖ್ಯಸ್ಥರು ರಾಮಮಂದಿರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಂತಾರಾಷ್ಟ್ರೀಯ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ವಿಎಚ್ ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿಜ್ಞಾನಾನಂದ ತಿಳಿಸಿದ್ದಾರೆ.
ಎಲ್ಲಾ ವಿವಿಐಪಿ ವಿದೇಶಿ ಪ್ರತಿನಿಧಿಗಳು ಜ.21 ರಂದು ಸಂಜೆಯ ವೇಳೆಗೆ ಅವರು ಅಯೋಧ್ಯೆಯನ್ನು ತಲುಪುತ್ತಾರೆ. ಮಂಜು ಮತ್ತು ಹವಾಮಾನದ ಕಾರಣ ಪ್ರತಿನಿಧಿಗಳು ಕಾರ್ಯಕ್ರಮಕ್ಕೂ ಮೊದಲು ಭಾರತಕ್ಕೆ ಬರಲು ವಿನಂತಿಸಲಾಗಿದೆ ಎಂದು ಅವರು ಹೇಳಿದರು.
ಹೆಚ್ಚಿನ ವಿದೇಶಿ ಅತಿಥಿಗಳನ್ನು ಆಹ್ವಾನಿಸಲು ಯೋಜಿಸಲಾಗಿತ್ತು. ಆದರೆ ಸ್ಥಳಾಭಾವದಿಂದಾಗಿ ಅತಿಥಿಗಳ ಪಟ್ಟಿಯನ್ನು ಕಡಿತಗೊಳಿಸಬೇಕಾಯಿತು. ಗಣ್ಯರು ಹಾಗೂ ನಮಾಜದ ಎಲ್ಲ ವರ್ಗದ ಜನರನ್ನು ಸೆಳೆಯುವ ಭವ್ಯ ಮಂದಿರ ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜ.22 ರಂದು ಮಧ್ಯಾಹ್ನ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾ ದೇವರ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಡೆಯಲಿರುವುದರಿಂದ ವೈದಿಕ ಆಚರಣೆಗಳು ಒಂದು ವಾರದ ಮೊದಲು ಜ.16 ರಿಂದ ಪ್ರಾರಂಭವಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿಷ್ಠಾಪನೆಗೆ ಮುಖ್ಯಸ್ಥರಾಗಿ ಭಾಗವಹಿಸಲಿದ್ದಾರೆ.