More

    ಅಯೋಧ್ಯೆ ಹೆಸರಿನಲ್ಲಿ ನಕಲಿ ಪ್ರಸಾದ: ಆನ್‌ಲೈನ್‌ನಲ್ಲಿ ಮಾರಾಟ- ಅಮೆಜಾನ್‌ಗೆ ನೋಟಿಸ್!

    ನವದೆಹಲಿ : ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಇದರ ಬೆನ್ನಲ್ಲೇ ಆನ್ ಲೈನ್ ನಲ್ಲಿ ನಕಲಿ ಪ್ರಸಾದ ಮಾರಾಟವಾಗುತ್ತಿದೆ. ‘ಅಯೋಧ್ಯಾ ಪ್ರಸಾದ’ ಹೆಸರಿನಲ್ಲಿ ಸಿಹಿತಿಂಡಿಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ವಾಣಿಜ್ಯ ದೈತ್ಯ ಅಮೆಜಾನ್‌ಗೆ ಕೇಂದ್ರವು ನೋಟಿಸ್ ಜಾರಿ ಮಾಡಿದೆ.

    ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ಭಾಗ್ಯನಗರದಲ್ಲಿ ಧಾರ್ಮಿಕ ಕಾರ್ಯಕ್ರಮ, ರಕ್ತದಾನ ಶಿಬಿರ

    ರಾಮಪ್ರಸಾದ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಅಮೆಜಾನ್ ಆನ್‌ಲೈನ್ ಗ್ರಾಹಕರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದೆ.

    ಶ್ರೀರಾಮ ಮಂದಿರ ಅಯೋಧ್ಯಾ ಪ್ರಸಾದ, ರಘುಪತಿ ತುಪ್ಪದ ಲಡ್ಡು, ಖೋಯಾ ಖೋಬಿ ಲಡ್ಡು, ಅಯೋಧ್ಯಾ ರಾಮಮಂದಿರ ಪ್ರಸಾದ, ಅಯೋಧ್ಯಾ ಪ್ರಸಾದ, ದೇವಿ ಹಸುವಿನ ಹಾಲು ಇತ್ಯಾದಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಅದು ಹೇಳಿದೆ.
    ದೂರಿಗೆ ಪ್ರತಿಕ್ರಿಯಿಸಿದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಅಮೆಜಾನ್‌ಗೆ ನೋಟಿಸ್ ಜಾರಿ ಮಾಡಿದೆ.

    ಈ ಬಗ್ಗೆ ವಾರದೊಳಗೆ ವಿವರಣೆ ನೀಡುವಂತೆ ಗಡುವು ನೀಡಲಾಗಿದೆ. ಇಲ್ಲವಾದಲ್ಲಿ ಕಂಪನಿ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
    ಈ ಆರೋಪಕ್ಕೆ ಅಮೆಜಾನ್ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಗ್ರಾಹಕರನ್ನು ದಾರಿ ತಪ್ಪಿಸುವ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.
    ಜೊತೆಗೆ ರಾಮಮಂದಿರ ಪ್ರಸಾದ್ ಹೆಸರಿನಲ್ಲಿರುವ ಉತ್ಪನ್ನಗಳ ಮಾರಾಟದ ಆಯ್ಕೆಯನ್ನು ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.

    ವೈರಲ್ ಆದ ಬಾಲರಾಮನ ವಿಗ್ರಹದ ಫೋಟೋಗಳು: ತನಿಖೆಗೆ ಆಗ್ರಹಿಸಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts