More

    ಉದ್ಯೋಗಿಗಳ ಕಾರ್ಯಕ್ಷಮತೆ ಮೇಲೆ ಅತಿಯಾದ ನಿಗಾ: ಅಮೆಜಾನ್‌ಗೆ ಭಾರಿ ದಂಡ!

    ಪ್ಯಾರಿಸ್: ಇ-ಕಾಮರ್ಸ್ ನ ದೈತ್ಯ ಸಂಸ್ಥೆ ಅಮೆಜಾನ್‌ಗೆ ಫ್ರಾನ್ಸ್‌ನ ಡೇಟಾ ಸಂರಕ್ಷಣಾ ಸಂಸ್ಥೆ ಸಿಎನ್‌ಐಎಲ್ ಭಾರಿ ದಂಡ ವಿಧಿಸಿದೆ. ಉದ್ಯೋಗಿಗಳ ಕಾರ್ಯಕ್ಷಮತೆ ಮೇಲೆ ಅತಿಯಾದ ನಿಗಾ ವಹಿಸಿದ್ದಕ್ಕೆ 32 ಮಿಲಿಯನ್ ಯುರೋಗಳನ್ನು (ಸುಮಾರು 280 ಕೋಟಿ ರೂ.) ಪಾವತಿಸಲು ಆದೇಶಿಸಲಾಯಿತು.

    ಇದನ್ನೂ ಓದಿ: ರಿಷಬ್ ‘ಹನುಮಾನ್​’ ನಲ್ಲಿ ನಟಿಸ್ತಾರೆ ಎಂದ್ಕೊಂಡಿದ್ದೆ, ಆದರೆ?.. ಹೀಗೆಂದಿದ್ದೇಕೆ ಪ್ರಶಾಂತ್ ವರ್ಮಾ?

    ಯುರೋಪಿಯನ್ ಯೂನಿಯನ್ (ಇಯು)ನ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್ (ಜಿಡಿಪಿಆರ್) ಪ್ರಕಾರ ವೈಯಕ್ತಿಕ ಡೇಟಾದ ಸಂಗ್ರಹಣೆ ಮತ್ತು ಬಳಕೆಗೆ ಉದ್ಯೋಗಿಗಳ ಸಮ್ಮತಿ ಅಗತ್ಯವಿದೆ. ಆದರೆ ಅಮೆಜಾನ್ ನಿಯಮಗಳಿಗೆ ವಿರುದ್ಧವಾಗಿ ಡೇಟಾವನ್ನು ಸಂಗ್ರಹಿಸುತ್ತಿದೆ ಎಂದು ಸಿಎನ್​ಐಎಲ್​ ಆರೋಪಿಸಿದೆ. ನೌಕರರಿಂದ ಬಂದ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.

    ಗ್ರಾಹಕರು ಆರ್ಡರ್ ಮಾಡಿದ ಉತ್ಪನ್ನಗಳ ವಿವರಗಳನ್ನು ದಾಖಲಿಸುವ ಸ್ಕ್ಯಾನಿಂಗ್ ಯಂತ್ರಗಳ ಮೂಲಕ ಕಣ್ಗಾವಲು ಮಾಡಲಾಗುತ್ತದೆ. ಹತ್ತು ನಿಮಿಷಗಳಿಗಿಂತ ಹೆಚ್ಚು ಕಾಲ ಅವುಗಳನ್ನು ನಿರ್ವಹಿಸುವಂತೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿ ಅವುಗಳ ಆಧಾರದ ಮೇಲೆ ಉದ್ಯೋಗಿಯ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲಾಗುತ್ತದೆ. ಇದಲ್ಲದೇ ನೌಕರರು ಕೆಲಸದ ಸ್ಥಳದಲ್ಲಿ ಎಷ್ಟು ದಿನ ಇರುತ್ತಾರೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ರೀತಿಯ ಕಣ್ಗಾವಲಿನಿಂದಾಗಿ ಸಿಬ್ಬಂದಿ ತೀವ್ರ ಒತ್ತಡಕ್ಕೆ ಒಳಗಾಗಿರುವುದು ಬಯಲಾಗಿದೆ.

    ಆದಾಗ್ಯೂ, ಅಮೆಜಾನ್ ಈ ಬಗ್ಗೆ ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡಿದೆ. ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು, ವಿತರಣೆಯ ಮೊದಲು ಸಿಬ್ಬಂದಿ ಉತ್ಪನ್ನವನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದಾರೆಯೇ? ಇಲ್ಲವೇ? ಎಂಬುದನ್ನು ತಿಳಿದುಕೊಳ್ಳಲು ಇಂತಹ ವ್ಯವಸ್ಥೆ ಅಗತ್ಯ ಎಂದು ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದರು.
    ಉದ್ಯೋಗಿಗಳ ಕಣ್ಗಾವಲು ಈ ಡೇಟಾವನ್ನು ಬಳಸುವ ಆರೋಪಗಳನ್ನು ನಿರಾಕರಿಸಲಾಗಿದೆ. ದಂಡದ ವಿರುದ್ಧ ಸಿಎಸ್​ಐಎಲ್​ ಮೇಲ್ಮನವಿ ಸಲ್ಲಿಸಲಿದೆ. ಅಮೆಜಾನ್ ಫ್ರಾನ್ಸ್‌ನಲ್ಲಿ 8 ದೊಡ್ಡ ವಿತರಣಾ ಕೇಂದ್ರಗಳನ್ನು ಹೊಂದಿದೆ. ಇವುಗಳಲ್ಲಿ ಸುಮಾರು 20 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ.

    ಉಕ್ರೇನ್‌ನ 65 ಯುದ್ಧ ಕೈದಿಗಳಿದ್ದ ರಷ್ಯಾ ವಿಮಾನ ಪತನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts