More

  ಅರಣ್ಯವಿಲ್ಲದಿದ್ದರೆ ಬಿಸಿಲು ಹೆಚ್ಚಳ

  ಕಲಬುರಗಿ: ಜಿಲ್ಲೆಯಲ್ಲಿ ಬೇಸಿಗೆ ವೇಳೆ ತಾಪಮಾನ ಸುಮಾರು ೪೫ ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತಿದ್ದು, ಶೀಘ್ರದಲ್ಲಿ ೫೦ ಡಿಗ್ರಿ ಸೆಲ್ಸಿಯಸ್‌ಗೆ ಏರುವ ಸಾಧ್ಯತೆ ಇದೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸುವ ಅಗತ್ಯವಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.

  ಕಲ್ಯಾಣ ಕರ್ನಾಟಕ ಪ್ರದೇಶ ಅರಣ್ಯ ಇಲಾಖೆ ನೌಕರರ ಸಂಘದಿಂದ ನಗರದ ಬಂಜಾರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ೨೦೨೪ರ ದಿನಚರಿ ಮತ್ತು ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಭಾಗದ ಹಲವು ಜಿಲ್ಲೆಗಳಲ್ಲಿ ಶೇ.೫ಕ್ಕಿಂತ ಕಡಿಮೆ ಅರಣ್ಯವಿದೆ. ಬಳ್ಳಾರಿ, ವಿಜಯನಗರ ಜಿ¯್ಲೆಗಳಲ್ಲಿ ಶೇ.೫ಕ್ಕಿಂತ ಹೆಚ್ಚು ಅರಣ್ಯವಿದ್ದು, ಉಳಿದೆಡೆ ತೀರಾ ಕಡಿಮೆ ಎಂದು ಕಳವಳ ವ್ಯಕ್ತಪಡಿಸಿದರು.

  ಸಮಾಜದಲ್ಲಿ ಹವಾಮಾನ ಬದಲಾವಣೆ ಸವಾಲು ಎದುರಾಗುತ್ತಿದ್ದು, ಮನುಷ್ಯನಿಂದ ಪರಿಸರದ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಮ್ಮ ಜೀವನ ಶೈಲಿಯಿಂದ ಮಾಲಿನ್ಯವಾಗುತ್ತಿದೆ. ನಾವು ತಿನ್ನುವ ಅನ್ನವೂ ವಿಷವಾಗುವ ದಿನಗಳು ದೂರವಿಲ್ಲ. ಕರೊನಾ ವೇಳೆ ಆಮ್ಲಜನಕದ ಬೇಡಿಕೆ ಪ್ರಕೃತಿಯ ಮಹತ್ವ ತಿಳಿಸಿದ್ದರೂ ಬುದ್ಧಿ ಬಂದಿಲ್ಲ ಎಂದರು.

  ಕಕ ಪ್ರದೇಶ ಅರಣ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎ.ಬಿ. ಪಾಟೀಲ್ ಮಾತನಾಡಿ, ಸಚಿವ ಈಶ್ವರ ಖಂಡ್ರೆ ನಮ್ಮ ಭಾಗಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು.

  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣಕುಮಾರ ಮೋದಿ, ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಸುನೀಲ್ ಪವಾರ್, ಉಪ ಅರಣ್ಯ ಸಂರಕ್ಷಾಣಾಧಿಕಾರಿ ಸುಮೀತ್ ಎಸ್.ಪಾಟೀಲ್, ಯಾದಗಿರಿ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಕಾಜೋಲ್ ಅಜಿತ್ ಪಾಟೀಲ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಎನ್.ಕೆ. ಭಗಾಯತ್, ಸುರೇಶ ಬಾಬು, ಆರ್.ಆರ್. ಯಾದವ್, ಖಾಲೀದ್ ಪಟೇಲ್ ಇತರರಿದ್ದರು.

  ಸಾಧಕರಿಗೆ ಸನ್ಮಾನ, ಪುರಸ್ಕಾರ: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ೨೦೨೩ರಲ್ಲಿ ನಿವೃತ್ತರಾದ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಅತ್ಯಧಿಕ ೬೪ಎ ಪ್ರಕರಣ ಇತ್ಯರ್ಥಪಡಿಸಿದ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ, ಅರಣ್ಯ ಒತ್ತುವರಿ ತೆರವಿನಲ್ಲಿ ವಿಶೇಷ ಸಾಧನೆ ಮಾಡಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

  ಕಲ್ಯಾಣ ಕರ್ನಾಟಕದವರಿಗೆ ನೇಮಕ, ಮುಂಬಡ್ತಿಯಲ್ಲಿ ಅನ್ಯಾಯವಾಗುತ್ತಿದೆ. ಅರಣ್ಯ ಆಧರಿಸಿ ಕೈಬಿಟ್ಟು ಜನಸಂಖ್ಯೆ, ಭೌಗೋಳಿಕ ಪ್ರದೇಶ ಆಧಾರವಾಗಿಟ್ಟುಕೊಂಡು ಅರಣ್ಯ ಇಲಾಖೆ ಹುದ್ದೆ ಮಂಜೂರು ಮಾಡಲು ನೌಕರರು ಒತ್ತಾಯಿಸಿದ್ದು, ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು.
  | ಈಶ್ವರ ಖಂಡ್ರೆ ಅರಣ್ಯ ಸಚಿವ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts