ರಿಷಬ್ 'ಹನುಮಾನ್​' ನಲ್ಲಿ ನಟಿಸ್ತಾರೆ ಎಂದ್ಕೊಂಡಿದ್ದೆ, ಆದರೆ?.. ಹೀಗೆಂದಿದ್ದೇಕೆ ಪ್ರಶಾಂತ್ ವರ್ಮಾ?

hanuman
Published on

ಹೈದರಾಬಾದ್: ನಿರ್ದೇಶಕ ಪ್ರಶಾಂತ್ ವರ್ಮಾ 'ಹನುಮಾನ್​' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಯಶಸ್ಸಿನ ಅಂಗವಾಗಿ, ಅವರು ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ ಮತ್ತು ಚಿತ್ರದ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

'ಚಿತ್ರದಲ್ಲಿ ವಿಭೀಷಣನ ಪಾತ್ರ ಬಹಳ ಮಹತ್ವದ್ದಾಗಿದೆ. ಈ ಪಾತ್ರಕ್ಕೆ ರಿಷಬ್ ಶೆಟ್ಟಿ ಅವರನ್ನು ಆಯ್ಕೆ ಮಾಡಲು ನಾನು ಮೊದಲು ಬಯಸಿದ್ದೆ. ಆ ಸಮಯದಲ್ಲಿ ಅವರು 'ಕಾಂತಾರ'ದಲ್ಲಿ ಬ್ಯುಸಿಯಾಗಿದ್ದರು. ಅವರು ಮುಂದೊಂದು ದಿನ ಖಂಡಿತವಾಗಿಯೂ ನನ್ನ ಸಿನಿಮಾದಲ್ಲಿ ನಟಿಸುತ್ತಾರೆ' ಎಂದು ಹೇಳಿದರು.

ಭವಿಷ್ಯದಲ್ಲಿ ಬಾಲಿವುಡ್‌ನ ಖ್ಯಾತ ನಿರ್ದೇಶಕ ನಿತೀಶ್ ತಿವಾರಿ ರಾಮಾಯಣವನ್ನು ನಿರ್ದೇಶಿಸಲಿದ್ದರೆ, ನಾನು ಆ ಯೋಜನೆಯನ್ನು ಮಾಡುತ್ತೇನೆ. ನಮ್ಮ ಸಿನಿಮಾಗಳಿಂದ ಭಾರತೀಯ ಚಿತ್ರರಂಗದ ಕೀರ್ತಿ ಹೆಚ್ಚಿಸುವ ಆಸೆ ಇದೆ. ಇಲ್ಲಿನ ಚಿತ್ರಗಳ ಬಿಡುಗಡೆ ಬಗ್ಗೆ ಹಾಲಿವುಡ್ ಮಾತನಾಡಲಿದೆ ಎಂದರು.

ತೇಜ ಸಜ್ಜ ನಾಯಕನಾಗಿ ನಟಿಸಿರುವ ಚಿತ್ರ 'ಹನುಮಾನ್​'. ಇದು ಪ್ರಶಾಂತ್ ವರ್ಮಾ ಅವರ ಸಿನಿಮಾವಾಗಿದ್ದು, ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಅಮೃತಾ ಅಯ್ಯರ್, ವಿನಯ್ ರಾಯ್ ಮತ್ತು ವರಲಕ್ಷ್ಮಿ ಶರತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ 'ಜೈ ಹನುಮಾನ್' ತೆರೆಗೆ ಬರಲಿದೆ. ಇದರ ಪ್ರಿ-ಪ್ರೊಡಕ್ಷನ್ ಕೆಲಸಗಳು ಇತ್ತೀಚೆಗಷ್ಟೇ ಆರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net