More

    ಇಸ್ರೇಲ್​- ಪ್ಯಾಲೆಸ್ತೀನ್‌ ಯುದ್ಧ ವಿಶ್ವಶಾಂತಿಗೆ ಧಕ್ಕೆ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್ ಕಳವಳ

    ನ್ಯೂಯಾರ್ಕ್: ಇಸ್ರೇಲ್ – ಹಮಾಸ್​ ನಡುವಿನ ಘರ್ಷಣೆ ಅಂತ್ಯವಾಗಬೇಕಾದರೆ ಸ್ವತಂತ್ರ ಪ್ಯಾಲೆಸ್ತೀನ್‌ ಏರ್ಪಡಬೇಕು. ಇಲ್ಲವಾದರೆ ವಿಶ್ವಶಾಂತಿಗೆ ಧಕ್ಕೆ ಬರಲಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.

    ಇದನ್ನೂ ಓದಿ: ‘I.N.D.I.A’ ಕೂಟದಿಂದ ಹೊರಬಂದ ಮಮತಾ: ‘ಕೈ’ಗೆ ಬಿಗ್ ಶಾಕ್​ ​​​-ಲೋಕಸಭಾ ಚುನಾವಣೆಯಲ್ಲಿ ಏಕಾಂಗಿ ಹೋರಾಟ!

    ಮಂಗಳವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಧೋರಣೆ ಬದಲಾಗದಿದ್ದಲ್ಲಿ ವಿಶ್ವಶಾಂತಿಗೆ ಸವಾಲಾಗಿರುವ ಉಭಯ ದೇಶಗಳ ನಡುವಿನ ಸಂಘರ್ಷ ಬಹುಕಾಲ ಮುಂದುವರಿಯುವ ಅಪಾಯವಿದೆ. ಇದರೊಂದಿಗೆ ಹಲವೆಡೆ ಭಯೋತ್ಪಾದಕ ಸಂಘಟನೆಗಳು ಹುಟ್ಟಿಕೊಳ್ಳಬಹುದು ಎಂದು ಎಚ್ಚರಿಸಿದರು.

    “ಸ್ವತಂತ್ರ ದೇಶವನ್ನು ರಚಿಸುವ ಪ್ಯಾಲೆಸ್ತೀನ್ ಜನರ ಹಕ್ಕನ್ನು ಪ್ರತಿಯೊಬ್ಬರೂ ಗುರುತಿಸಬೇಕು. ಎರಡು ರಾಜ್ಯ ಪರಿಹಾರವನ್ನು ಯಾರು ತಿರಸ್ಕರಿಸುತ್ತಾರೋ ಅವರು ತಮ್ಮ ನಿಲುವು ಬದಲಿಸಿಕೊಳ್ಳಬೇಕು. ಯಾವುದೇ ಸ್ವಾತಂತ್ರ್ಯ, ಹಕ್ಕುಗಳು ಅಥವಾ ಗೌರವವಿಲ್ಲದೆ ಹಲವಾರು ಪ್ಯಾಲೆಸ್ತೀನ್ ಜನರು ಒಂದೇ ಪ್ರದೇಶದಲ್ಲಿ ಉಳಿಯುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ ಎಂದು ಗುಟೆರಸ್ ಹೇಳಿದರು.

    ಹಮಾಸ್-ಇಸ್ರೇಲ್ ಘರ್ಷಣೆ ಪ್ರಾದೇಶಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತವೆ ಎಂಬ ಭವಿಷ್ಯವಾಣಿಗಳು ನಿಜವಾಗುತ್ತಿವೆ. ಲೆಬನಾನ್, ಯೆಮೆನ್, ಸಿರಿಯಾ, ಇರಾಕ್ ಮತ್ತು ಪಾಕಿಸ್ತಾನದಲ್ಲಿ ಇತ್ತೀಚಿನ ದಾಳಿಗಳನ್ನು ಇದಕ್ಕೆ ಉದಾಹರಣೆ ನೀಡಬಹುದು. ಹೀಗಾಗಿ ತಕ್ಷಣವೇ ಕದನ ವಿರಾಮವನ್ನು ಪಾಲಿಸಬೇಕು ಎಂದು ಒತ್ತಾಯಿಸಿದರು.

    ಇರಾನ್‌ನಲ್ಲಿದೆ ವಿವಾದದ ಮೂಲ: ಗುಟೆರೆಸ್ ಅವರ ಕದನ ವಿರಾಮದ ಕರೆಯನ್ನು ಯುಎನ್‌ ನ ಇಸ್ರೇಲ್‌ ರಾಯಭಾರಿ ಗಿಲಾಡ್ ಎರ್ಡಾನ್ ತಿರಸ್ಕರಿಸಿದರು. 2023ರ ಅಕ್ಟೋಬರ್ 7 ರಂದು ಅತ್ಯಂತ ಕ್ರೂರವಾಗಿ ದಾಳಿ ಮಾಡಿದ ಹಮಾಸ್ ವಿರುದ್ಧ ಹೋರಾಟವನ್ನು ಮುಂದುವರಿಸಲು ಇಸ್ರೇಲ್​ ನಿರ್ಧರಿಸಿದೆ. ಒಂದು ವೇಳೆ ಯುದ್ಧದಿಂದ ಹಿಂದೆ ಸರಿದರೆ ಹಮಾಸ್ ಉಗ್ರರು ಇನ್ನಷ್ಟು ಕೆರಳಿ ಇಸ್ರೇಲ್ ವಿರುದ್ಧ ತಿರುಗಿ ಬೀಳುತ್ತಾರೆ. ಈ ವಿವಾದದ ಮೂಲವು ಇರಾನ್‌ನಲ್ಲಿದೆ, ಹಮಾಸ್, ಜಿಜ್​ಬುಲ್ಲಾ, ಹೌತಿಗಳಿಗೆ ಇರಾನ್​ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂದು ಅವರು ಆರೋಪಿಸಿದರು.

    ಇಸ್ರೇಲ್ ದಾಳಿಯಲ್ಲಿ ಇದುವರೆಗೆ 25,000 ಪ್ಯಾಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವ ಬಹಿರಂಗಪಡಿಸಿದ್ದಾರೆ. 85ರಷ್ಟು ಜನ ವಲಸೆ ಹೋಗಿದ್ದು, ಉಳಿದವರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

    ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ: ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನಾಭರಣ ಕುರಿತು ಕೋರ್ಟ್​ ಹೇಳಿದ್ದೇನು? ಯಾರ ಪಾಲಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts