More

    ರಾಮ ಮಂದಿರ ಪ್ರಸಾದವೆಂದು ಸ್ವೀಟ್​ ಮಾರಾಟ: ಅಮೇಜಾನ್​ಗೆ ಶಾಕ್​ ಕೊಟ್ಟ ಕೇಂದ್ರ ಸರ್ಕಾರ

    Amazon, Ram Mandir Prasad, Ram temple, Ram Mandir, Ayodhya, Prana Pratishtha, Sri Ram, ರಾಮ ಮಂದಿರ, ಅಯೋಧ್ಯೆ, ಪ್ರಾಣ ಪ್ರತಿಷ್ಠಾ, ಅಮೇಜಾನ್​, ರಾಮ ಮಂದಿರ ಪ್ರಸಾದ, ಶ್ರೀರಾಮ,ಶ್ರೀರಾಮ ಮಂದಿರ ಅಯೋಧ್ಯೆ ಪ್ರಸಾದ ಎಂದು ಹೇಳಿ ಸಿಹಿ ತಿನಿಸು ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್​ ದೈತ್ಯ ಅಮೇಜಾನ್​ ಕಂಪನಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟೀಸ್​ ನೀಡಿದೆ.

    ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ನೀಡಿದ ದೂರಿನ ಅನ್ವಯ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ನಿಯಂತ್ರಕ ಮಂಡಳಿ ಸಿಸಿಪಿಎ ಅಮೇಜಾನ್​ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಜ.22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನೀಡುವ ಪ್ರಸಾದ ಎಂಬ ಸೋಗಿನಲ್ಲಿ ಅಮೇಜಾನ್​ ಸ್ವೀಟ್​ ಮಾರಾಟ ಮಾಡುವ ಮೂಲಕ ಗ್ರಾಹಕರಿಗೆ ಮೋಸ ಮಾಡುತ್ತಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ದೂರು ನೀಡಿದೆ.

    ಈ ಹಿನ್ನೆಲೆ ಅಮೇಜಾನ್​ಗೆ ನೋಟಿಸ್​ ನೀಡಿರುವ ಸಿಸಿಪಿಎ. 7 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ ಮತ್ತು ಉತ್ತರ ನೀಡಲು ವಿಫಲವಾದಲ್ಲಿ ಗ್ರಾಹಕ ಸಂರಕ್ಷಣಾ ಕಾಯಿದೆ, 2019ರ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಇದೇ ಸಂದರ್ಭದಲ್ಲಿ ಕಂಪನಿಯು ಸಹ ಪ್ರತಿಕ್ರಿಯೆ ನೀಡಿದ್ದು, ಈ ವಿಷಯದ ಬಗ್ಗೆ “ಸೂಕ್ತ ಕ್ರಮ” ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದೆ.

    ಅಮೆಜಾನ್‌ನಲ್ಲಿ ವಿವಿಧ ಸಿಹಿತಿಂಡಿಗಳು/ಆಹಾರ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿವೆ ಎಂಬುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ಸಿಹಿ ತಿನಿಸುಗಳಿಗೆ “ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ” ಎಂದು ಲೇಬಲ್​ ಹಾಕಿ ಆನ್‌ಲೈನ್‌ನಲ್ಲಿ ಆಹಾರ ಉತ್ಪನ್ನಗಳ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಗ್ರಾಹಕರನ್ನು ಮೂರ್ಖರನ್ನಾಗಿಸುವಂತಹ ಕೃತ್ಯವಾಗಿದೆ ಎಂದು CCPA ಖಂಡಿಸಿದೆ.

    ರಾಮ ಮಂದಿರ ಪ್ರಸಾದದ ಸೋಗಿನಲ್ಲಿ ಅಮೆಜಾನ್‌ನಲ್ಲಿ ಮಾರಾಟಕ್ಕೆ ಪಟ್ಟಿ ಮಾಡಲಾದ ಉತ್ಪನ್ನ ವಿವರಗಳು ಹೀಗಿವೆ. ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್ – ರಘುಪತಿ ತುಪ್ಪದ ಲಾಡೂ, ಅಯೋಧ್ಯಾ ರಾಮಮಂದಿರ ಅಯೋಧ್ಯಾ ಪ್ರಸಾದ, ಖೋಯಾ ಖೋಬಿ ಲಾಡೂ, ರಾಮಮಂದಿರ ಅಯೋಧ್ಯಾ ಪ್ರಸಾದ್ – ದೇಸಿ ಹಸುವಿನ ಹಾಲಿನ ಪೇಡಾ ಮತ್ತು ಇತ್ಯಾದಿ.

    ಗ್ರಾಹಕ ಸಂರಕ್ಷಣಾ ಕಾಯಿದೆಯು ಉತ್ಪನ್ನ ಅಥವಾ ಸೇವೆಯನ್ನು ತಪ್ಪಾಗಿ ವಿವರಿಸುವ ಹಾಗೂ ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತನ್ನು ನಿಷೇಧಿಸುತ್ತದೆ. ಅಮೇಜಾನ್​ ಸೂಕ್ತ ಉತ್ತರ ನೀಡದಿದ್ದಲ್ಲಿ ಕ್ರಮ ತೆಗೆದುಕೊಳ್ಳುವುದು ಗ್ಯಾರಂಟಿ ಎಂದು CCPA ಹೇಳಿದೆ. (ಏಜೆನ್ಸೀಸ್​)

    ನಿಗಮ, ಮಂಡಳಿ ನೇಮಕ ಗೊಂದಲಕ್ಕೆ ಇಂದು ತೆರೆ

    ಅಯೋಧ್ಯೆಯಲ್ಲಿ ರಾಮೋತ್ಸವ: ಜ.22ರ ವಿಶೇಷ ದಿನಕ್ಕೆ ಸರ್ಕಾರಿ ರಜೆ ಘೋಷಿಸಿದ ರಾಜ್ಯಗಳಿವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts