More

    ಅಯೋಧ್ಯೆಯಲ್ಲಿ ರಾಮೋತ್ಸವ: ಜ.22ರ ವಿಶೇಷ ದಿನಕ್ಕೆ ಸರ್ಕಾರಿ ರಜೆ ಘೋಷಿಸಿದ ರಾಜ್ಯಗಳಿವು…

    ಮುಂಬೈ: ಅಯೋಧ್ಯೆ ರಾಮಮಂದಿರದಲ್ಲಿ ಐತಿಹಾಸಿಕ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿರುವ ಹಿನ್ನೆಲೆಯಲ್ಲಿ ಜನವರಿ 22ರ ಸೋಮವಾರವನ್ನು ಸರ್ಕಾರಿ ರಜಾ ದಿನವನ್ನಾಗಿ ಮಹಾರಾಷ್ಟ್ರ ಸರ್ಕಾರ ಘೋಷಣೆ ಮಾಡಿದೆ. ಉಳಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ.

    ರಾಜ್ಯದ ಸಚಿವ ಮತ್ತು ಬಿಜೆಪಿ ನಾಯಕ ಮಂಗಲ್​ ಪ್ರಭಾತ್​ ಲೋಧಾ ಅವರ ಮನವಿ ಮೇರೆಗೆ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಆರಂಭದಲ್ಲಿ ರಾಜ್ಯದ ಸಾಮಾನ್ಯ ಆಡಳಿತ, ಯಾವುದೇ ಪ್ರಾಧಾನ್ಯತೆ ಇಲ್ಲದ ಕಾರಣ ಅಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕ ರಜೆ ಘೋಷಿಸಲು ಸಾಧ್ಯವಿಲ್ಲ ಎಂದು ತಿಳಿಸಿ, ರಜೆ ಘೋಷಿಸಲು ವಿರೋಧ ವ್ಯಕ್ತಪಡಿಸಿತ್ತು. ಆದಾಗ್ಯೂ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಕಚೇರಿಗೆ ಈ ಮನವಿಯನ್ನು ಸಲ್ಲಿಸಲಾಗಿತ್ತು.

    ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭವನ್ನು ಹೆಗ್ಗುರುತಾಗಿ ಮೂಡಿಸಲು ಭಾರತದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ‘ಅರ್ಧ ದಿನ’ ಘೋಷಿಸಿದ ಒಂದು ದಿನದ ಬೆನ್ನಲ್ಲೇ ಮಹಾರಾಷ್ಟ್ರವು ಕೂಡ ಸರ್ಕಾರಿ ರಜೆ ಘೋಷಣೆ ಮಾಡಿದೆ.

    ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಗೋವಾ ಸರ್ಕಾರಗಳು ಈಗಾಗಲೇ ಸರ್ಕಾರಿ ರಜೆಗಳನ್ನು ಘೋಷಿಸಿದ್ದು, ಆ ಸಾಲಿಗೆ ಮಹಾರಾಷ್ಟ್ರ ಸಹ ಸೇರಿಕೊಂಡಿದೆ. ಅಲ್ಲದೆ, ಬಿಜೆಪಿ ನೇತೃತ್ವದ ರಾಜ್ಯಗಳು ಜ.22ಕ್ಕೆ ಮದ್ಯ, ಮಾಂಸ ಮತ್ತು ಮೀನುಗಳ ಮಾರಾಟವನ್ನು ನಿಷೇಧಿಸಿವೆ. ತ್ರಿಪುರಾದಲ್ಲಿ ರಾಜ್ಯದಾದ್ಯಂತ ಎಲ್ಲ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಜನವರಿ 22ರಂದು ಮಧ್ಯಾಹ್ನ 2:30 ರವರೆಗೆ ಮುಚ್ಚಲ್ಪಡುತ್ತವೆ.

    ಪ್ರಧಾನಿ ನರೇಂದ್ರ ಮೋದಿ, ಇತರ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಮತ್ತು ಹೆಸರಾಂತ ವ್ಯಕ್ತಿಗಳ ಉಪಸ್ಥಿತಿಯಲ್ಲಿ ರಾಮಮಂದಿರವನ್ನು ಜ.22ರಂದು ಉದ್ಘಾಟಿಸಲಾಗುವುದು. ಸಮಾರಂಭಕ್ಕೆ ದೇಶಾದ್ಯಂತದ ಸಾವಿರಾರು ವೀಕ್ಷಕರನ್ನು ಆಹ್ವಾನಿಸಲಾಗಿದೆ ಮತ್ತು ಆಹ್ವಾನಿತರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದ ಕಾರ್ಮಿಕರ ಕುಟುಂಬಗಳೂ ಸೇರಿವೆ. ಜನವರಿ 16 ರಿಂದಲೇ ಪ್ರಾರಂಭವಾದ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ. ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭದ ಪೂರ್ವಭಾವಿಯಾಗಿ ಆಚರಣೆಗಳ ಭಾಗವಾಗಿ ಗರ್ಭಗುಡಿಯೊಳಗೆ ರಾಮ ಲಲ್ಲಾ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸೋಮವಾರ ಪ್ರಾಣ ಪತಿಷ್ಠಾ ನೆರವೇರಿಸಲಾಗುತ್ತದೆ. (ಏಜೆನ್ಸೀಸ್​)

    ರಾಮನ ವಿಗ್ರಹದ ಫೋಟೋ ಹಂಚಿಕೊಂಡ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಂತಸ ವ್ಯಕ್ತಪಡಿಸಿದ್ದು ಹೀಗೆ…

    ‘ಈಕೆ’ ಅಂದವಾದ ಮಾಯೆ: ನೋಡಿ ಕಣ್ತುಂಬಿಕೊಳ್ಳಿ, ಹುಡುಕಿದ್ರೆ ಸಿಗಲ್ಲ! ವಿವರ ಇಲ್ಲಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts