Ram mandir: ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮ..ಗಿನ್ನೆಸ್ ದಾಖಲೆ ನಿರ್ಮಿಸಲು ಸಜ್ಜು!

ayodya (1)
Published on

ಅಯೋಧ್ಯೆ: ಶ್ರೀರಾಮಚಂದ್ರ ಲಂಕೆಯಲ್ಲಿ ರಾವಣಾಸುರನ ಸಂಹಾರ ಮಾಡಿದ ನಂತರ ಸೀತಾದೇವಿ, ಲಕ್ಷ್ಮಣ, ಆಂಜನೇಯನ ಸಮೇತ ಅಯೋಧ್ಯೆಗೆ ಹಿಂತಿರುಗಿದ್ದು, ಇದೇ ದೀಪಾವಳಿ ಸಂದರ್ಭಕ್ಕೆ ಎಂಬುದು ತಿಳಿದ ಸಂಗತಿಯೇ. ಈಗ ನೂತನ ರಾಮಮಂದಿರ(Ram mandir) ನಿರ್ಮಾಣವಾಗಿ ರಾಮಲಲ್ಲಾ ಮೂರ್ತಿ ವಿರಾಜಮಾನರಾಗಿದ್ದು, ದೀಪೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರಿ ಲಕ್ಷಾಂತರ ದೀಪಗಳನ್ನು ಸರಯೂ ನದಿ ತಟದಲ್ಲಿ ಹಚ್ಚಲಿದ್ದು ಗಿನ್ನೀಸ್​ ದಾಖಲೆ ಸೇರುತ್ತಿರುವುದು ವಿಶೇಷವಾಗಿದೆ.

ಅಯೋಧ್ಯೆಯ ರಾಮ್ಕಿ ಪೈಡಿ, ಚೌಧರಿ ಚರಣ್ ಸಿಂಗ್ ಘಾಟ್ ಮತ್ತು ಭಜನಾ ಸಂಧ್ಯಾ ಸ್ಥಳದಲ್ಲಿ 28 ಲಕ್ಷ ದೀಪಗಳನ್ನು ಅಳವಡಿಸಲಾಗಿದೆ. ಈ ಪೈಕಿ 25 ಲಕ್ಷ ದೀಪಗಳನ್ನು ಬೆಳಗಿಸಿ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ.

ಗಿನ್ನೆಸ್ ವಿಶ್ವ ದಾಖಲೆಗಳ ಸಲಹೆಗಾರ ನಿಶ್ಚಲ್ ಬರೋಟ್ ಅವರ ಮೇಲ್ವಿಚಾರಣೆಯಲ್ಲಿ ದೀಪಗಳ ಎಣಿಕೆಯನ್ನು ಮಾಡಲಾಗಿದೆ. ಗುರುತಿನ ಚೀಟಿ ಇಲ್ಲದೆ ದೀಪೋತ್ಸವದ ಸಮಯದಲ್ಲಿ ರಾಮ್ಕಿ ಪೈಡಿಯನ್ನು ಪ್ರವೇಶಿಸಲು ಯಾರಿಗೂ ಅವಕಾಶವಿರುವುದಿಲ್ಲ. ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ದೀಪೋತ್ಸವದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಹಿಸಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತಿತರರೂ ಹಾಜರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net