ಹೊಸ NTR ಆಗಮನ: ಪೋಸ್ಟರ್ ಬಿಡುಗಡೆ..ಜೂ. ಎನ್​ಟಿಆರ್ ಏನಂದ್ರು ಗೊತ್ತಾ?

NTR
Published on

ಹೈದರಾಬಾದ್​: ಆಂಧ್ರ ಮಾಜಿ ಮುಖ್ಯಮಂತ್ರಿ ಖ್ಯಾತ ನಟ ದಿ.ಎನ್​ಟಿಆರ್​ ಅವರ ಪುತ್ರರು, ಮೊಮ್ಮಕ್ಕಳು ತೆಲುಗು ಚಿತ್ರರಂಗದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದನ್ನು ನೋಡಿದ್ದೇವೆ. ಅದೇ ರೀತಿ ಈಗ ಅವರ ಮುಮ್ಮಗ ಅಂದರೆ, ದಿ.ಜಾನಕಿರಾಮ್ ಅವರ ಪುತ್ರ ನಂದಮೂರಿ ತಾರಕ ರಾಮರಾವ್(NTR ) ನಟನಾಗಿ ಗ್ರಾಂಡ್ ಎಂಟ್ರಿ ನೀಡಲಿದ್ದಾರೆ. ಇದೀಗ ಎಲ್ಲೆಡೆ ಇದು ಚರ್ಚೆಗೆ ಗ್ರಾಸ ಒದಗಿಸಿದೆ.

ನಿರ್ದೇಶಕ ವೈವಿಎಸ್ ಚೌಧರಿ ಬರೆದು ನಿರ್ದೇಶಿಸಿರುವ ಈ ಚಿತ್ರದ ಫಸ್ಟ್ ಲುಕ್ ಅ.30(ಬುಧವಾರ) ಬಿಡುಗಡೆಯಾಗಿದೆ. ಈ ಬಗ್ಗೆ ಜೂನಿಯರ್ ಎನ್ ಟಿಆರ್ ಪ್ರತಿಕ್ರಿಯಿಸಿದ್ದಾರೆ.

ನಂದಮೂರಿ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಕುಟುಂಬದ ನಾಲ್ಕನೇ ತಲೆಮಾರಿನ ನಟರು ತಯಾರಾಗುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ನಂದಮೂರಿ ತಾರಕ ರಾಮರಾವ್, ದಿಗ್ಗಜ ನಟ ಎನ್‌ಟಿಆರ್ ಅವರ ಮುಮ್ಮೊಗ, ಹರಿಕೃಷ್ಣ ಅವರ ಮೊಮ್ಮಗ ಮತ್ತು ದಿವಂಗತ ಜಾನಕಿರಾಮ್ ಅವರ ಪುತ್ರ ನಟನಾಗಿ ಟಾಲಿವುಡ್​ಗೆ ಲಗ್ಗೆ ಹಾಕಲು ಬರುತ್ತಿದ್ದು, ಚಿತ್ರರಸಿಕರು ಕೊಂಡಾಡುತ್ತಿದ್ದಾರೆ.

ಡೈನಾಮಿಕ್ ಡೈರೆಕ್ಟರ್ ವೈವಿಎಸ್ ಚೌಧರಿ ಬರೆದು ನಿರ್ದೇಶಿಸಿರುವ ಚಿತ್ರದಲ್ಲಿ ಎನ್​ಟಿಆರ್​ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ. ದೀಪಾವಳಿ ಉಡುಗೊರೆಯಾಗಿ ಒಂದು ದಿನ ಮುಂಚಿತವಾಗಿ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಎನ್‌ಟಿಆರ್‌ ಮೊದಲ ದರ್ಶನ್‌ ಎಂಬ ಹೆಸರಿನಲ್ಲಿ ಈ ವಿಡಿಯೋ ಬಿಡುಗಡೆಯಾಗಿದೆ. ಎನ್​ಟಿಆರ್​ ಶಕ್ತಿಯುತ ನೋಟ ಮತ್ತು ಬಾಸ್ ಧ್ವನಿಯೊಂದಿಗೆ ಕಾಣಿಸಿಕೊಂಡಿದ್ದಾನೆ.

ಇನ್ನು 19 ವರ್ಷ ಅಮೆರಿಕದಲ್ಲಿ ನಟನೆಯಲ್ಲಿ ಮಾಸ್ಟರ್ಸ್ ಮಾಡಿ, ಸಕಲ ಕಲೆಗಳನ್ನು ಕರಗತ ಮಾಡಿಕೊಂಡಿದ್ದು, ಕುಟುಂಬದ ಸದಸ್ಯರ ಒತ್ತಾಸೆಯಿಂದ ಮುತ್ತಾತ ಎನ್.​ಟಿ.ರಾಮರಾವ್​ ಹೆಸರನ್ನು ಹೊತ್ತು ಬೆಳ್ಳಿತೆರೆಗೆ ಪರಿಚಯವಾಗಲಿದ್ದಾನೆ.

ಮತ್ತು ಜೂನಿಯರ್ ಎನ್ಟಿಯಾರ್ ತಮ್ಮ 'ಎಕ್ಸ್' ಖಾತೆಯ ಮೂಲಕ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. "ರಾಮ್.. ನಿನ್ನ ಮೊದಲ ಹೆಜ್ಜೆಗೆ ಆಲ್ ದಿ ಬೆಸ್ಟ್. ಸಿನಿಮಾ ಜಗತ್ತು ನಿನ್ನನ್ನು ನೆನೆಯಲು ಲೆಕ್ಕವಿಲ್ಲದಷ್ಟು ಕ್ಷಣಗಳನ್ನು ನೀಡುತ್ತದೆ. ಮುತ್ತಜ್ಜ ಎನ್.ಟಿ.ಆರ್., ತಾತ ಹರಿಕೃಷ್ಣ, ತಂದೆ ಜಾನಕಿರಾಮ್ ಅವರ ಪ್ರೀತಿ ಮತ್ತು ಆಶೀರ್ವಾದದಿಂದ ನೀನು ನಟನೆಯಲ್ಲಿ ಸಾಧನೆ ಮಾಡುತ್ತೀಯ ಎಂದು ನನಗೆ ತುಂಬಾ ವಿಶ್ವಾಸವಿದೆ. ಎತ್ತರಕ್ಕೆ ತಲುಪಿ'' ಎಂದು ತಮ್ಮದೇ ಶೈಲಿಯಲ್ಲಿ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net