

ಶಿವಮೊಗ್ಗ: ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರ ಜತೆಗೆ ಸದಾ ಇರುತ್ತೇನೆ. ಅವರ ಕಷ್ಟ ಸುಖಗಳನ್ನು ಆಲಿಸುವುದು ನಮ್ಮ ಕರ್ತವ್ಯವವಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಪಿಎಸ್(ಹಳೇ ಪಿಂಚಣಿ ಯೋಜನೆ) ಮತ್ತು ಎನ್‌ಪಿಎಸ್ (ಹೊಸ ಪಿಂಚಣಿ ಯೋಜನೆ) ಸಮಸ್ಯೆ ಬಗ್ಗೆ ಸರ್ಕಾರ ಗಮನ ಹರಿಸಿದೆ. ಪಿಂಚಣಿ ವಿಚಾರ ಜೀವನಕ್ಕೆ ಸಂಬಂಧಿಸಿದ್ದು. ಹಾಗಾಗಿ 2006ರ ಮೊದಲಿದ್ದ ಒಪಿಎಸ್ ಅನ್ನೇ ಮರು ಜಾರಿಗೊಳಿಸಬೇಕಿದೆ. ಸರ್ಕಾರ ಕೂಡಲೇ ಈ ಬಗ್ಗೆಯೂ ಗಮನ ಹರಿಸಬೇಕು ಎಂದು ಆಯನೂರು ಮಂಜುನಾಥ ಮನವಿ ಮಾಡಿದರು.