ಸುರಕ್ಷತೆಯಿಂದ ವಾಹನ ಚಾಲನೆ ಮಾಡಲು ಜಾಗೃತಿ

18blrp7
ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಪೊಲೀಸ್ ಹಾಗೂ ರೋಟರಿ ಸಂಸ್ಥೆಯಿಂದ ರಸ್ತೆ ಸುರಕ್ಷತೆ ಬಗ್ಗೆ ವಾಹನ ಚಾಲಕರಿಗೆ ಜಾಗೃತಿ ಮೂಡಿಸಲಾಯಿತು.
Published on

ಬೇಲೂರು: ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ಹಾಗೂ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಡ್ರೈವ್ ಸೇಫ್-ಸೇವ್ ಲೈಫ್’ ಎಂಬ ಘೋಷ ವಾಕ್ಯದಡಿ ಆಟೋ ಚಾಲಕರು ಸೇರಿದಂತೆ ಇತರ ವಾಹನಗಳ ಚಾಲಕರಿಗೆ ಸುರಕ್ಷತೆಯಿಂದ ವಾಹನ ಚಾಲನೆ ಮಾಡುವಂತೆ ಇತ್ತೀಚೆಗೆ ಜಾಗೃತಿ ಮೂಡಿಸಲಾಯಿತು.

ಅಲ್ಲದೆ ಆಟೋಗಳಿಗೆ ಪೊಲೀಸ್ ಠಾಣೆಯಿಂದ ಕೊಡುವ ನಂಬರ್‌ಗಳ ಸ್ಟಿಕ್ಕರ್ ಜತೆಗೆ ರಿಫ್ಲೆಕ್ಟರ್‌ಗಳನ್ನು ಅಂಟಿಸಿ ಜಾಗರೂಕತೆಯಿಂದ ವಾಹನ ಚಲಾಯಿಸಿ ಅಮೂಲ್ಯ ಜೀವವನ್ನು ಉಳಿಸುವಂತೆ ಕರೆ ನೀಡಲಾಯಿತು. ಅರೇಹಳ್ಳಿ ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಎಸ್.ಪ್ರಸನ್ನ, ಎಂ.ವೈ.ಪ್ರವೀಣ್, ಬಿ.ಎಂ.ಶರತ್, ಪೃಥ್ವಿ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net