

ಕೋಲಾರ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ನಗರದಲ್ಲಿ ವಾಕಥಾನ್ ಜಾಥಾವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಜಾಥಾಗೆ ಶಾಸಕ ಕೊತ್ತೂರು ಜಿ.ಮಂಜುನಾಥ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವಿಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಚಾಲನೆ ನೀಡಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂ&ಸಂಸ್ಥೆಗಳ ಮುಖಂಡರು ಜಾಥಾದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಪ್ರವಾಸಿ ಮಂದಿರದ ಬಳಿ ಪ್ರಾರಂಭವಾದ ಜಾಥವು ಡೂಂ ಲೈಟ್, ಕ್ಲಾಕ್ ಟವರ್ ಸೇರಿ ವಿವಿಧ ರಸ್ತೆಗಳಲ್ಲಿ ಸಾಗಿ ಬಸ್ ನಿಲ್ದಾಣದ ಸಮೀಪ ಕೊನೆಗೊಂಡಿತು.
ನಗರಸಭೆ ಅಧ್ಯೆ ಲಕ್ಷಿ$್ಮದೇವಮ್ಮ, ಉಪಾಧ್ಯೆ ಸಂಗೀತಾ, ಅಪರ ಜಿಲ್ಲಾಧಿಕಾರಿ ಮಂಗಳಾ, ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್, ತಹಶೀಲ್ದಾರ್ ಡಾ.ಎಂ.ನಯನಾ, ಪೌರಾಯುಕ್ತ ನವೀನ್ ಚಂದ್ರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಾ, ಸಮಾಜ ಜಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್ ಇದ್ದರು.
* ಗಣತಿದಾರರಿಗೆ ಸಮರ್ಪಕ ಮಾಹಿತಿ ನೀಡಿ
ಸಮೀಕ್ಷೆಯು ಜಿಲ್ಲೆಯಲ್ಲಿ ಸೆ.22ರಿಂದ ಅ.7ರತನಕ ನಡೆಯಲಿದ್ದು, ಸರ್ಕಾರದ ನಿರ್ದೇಶನದ ಅನುಸಾರವಾಗಿ ಜಿಲ್ಲಾಡಳಿತದಿಂದ ಸಿದ್ಧತೆ ಕೈಗೊಳ್ಳಲಾಗಿದೆ. ಬೆಸ್ಕಾಂ 4.17 ಲಕ್ಷ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿದ್ದಾರೆ, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಗಣತಿದಾರರಿಗೆ ಸಲ್ಲಿಸಬೇಕಾದ ದಾಖಲೆಗಳು ಯಾವವು. ಹೇಗೆ ಮಾಹಿತಿ ಒದಗಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಸಾರ್ವಜನಿಕರು ಸಮೀೆಯಲ್ಲಿ ಪಾಲ್ಗೊಂಡು ಯಶಸ್ಸಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.
ಸಮೀೆಯಲ್ಲಿ ಜಿಲ್ಲೆಯ ಪ್ರತಿ ಕುಟುಂಬವರು ಪಾಲ್ಗೊಳ್ಳಬೇಕು, ಯಾವುದೇ ಒಂದು ಕುಟುಂಬವು ಸಹ ತಪ್ಪಿ ಹೋಗದಂತೆ ಕ್ರಮವಹಿಸಲಾಗಿದೆ. ವಿವಿಧ ಸಂಸಂಸ್ಥೆಗಳ ಮುಖಂಡರು, ಎನ್ಎಸ್ಎಸ್, ಎಸ್ಸಿಸಿ ಸೇರಿದಂತೆ ಶಾಲಾ&ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ತಿಳಿಸಿದರು.
ಪ್ರತಿ ಮನೆಗಳಿಗೆ ಸಮೀಕ್ಷೆದಾರರು ತೆರಳಲಿದ್ದು, 60 ಪ್ರಶ್ನೆಗಳುಳ್ಳ ನಮೂನೆಯಲ್ಲಿ ವೈಯುಕ್ತಿಕ ಮತ್ತು ಕುಟುಂಬದ ವಿಚಾರಗಳನ್ನು ಕಲೆಹಾಕಲಿದ್ದಾರೆ. ಆಧಾರ್ ಕಾರ್ಡ್ಗೆ ನೋಂದಾಯಿಸಿರುವ ಪೋನ್ ನಂಬರ್ಗೆ ಒಟಿಪಿ ಬರಲಿದೆ. ನಂತರ ಮಾಹಿತಿ ಕಲೆಹಾಕಲಿದ್ದಾರೆ. ಈ ಸಮೀಕ್ಷೆ ಸರ್ವರ ಸಮೀಕ್ಷೆಯಾಗಿದೆ ಎಂದರು.