ಡೆಂಘೆ ನಿಯಂತ್ರಣಕ್ಕೆ ಜಾಗೃತಿಯೇ ಮದ್ದು…!

dengue 1
Published on

ಸದೇಶ್ ಕಾರ್ಮಾಡ್ ಮೈಸೂರು
ಡೆಂಘೆ ಜ್ವರಕ್ಕೆ ನಿರ್ದಿಷ್ಟವಾದ ಔಷಧ ಇಲ್ಲ. ಹೀಗಾಗಿ ಮುಂಜಾಗ್ರತೆ ವಹಿಸುವುದೇ ಇದಕ್ಕಿರುವ ಮದ್ದು. ಇದಕ್ಕೆ ಪೂರಕವಾಗಿ ನಗರ ಪಾಲಿಕೆಯು ನಗರದಲ್ಲಿ ಜನಜಾಗೃತಿ ಮೂಡಿಸುವ ಕಾರ್ಯವನ್ನು ವ್ಯಾಪಕವಾಗಿ ಮಾಡುತ್ತಿದ್ದು, ಮತ್ತೊಂದೆಡೆ ಜ್ವರ ಹರಡಲು ಕಾರಣವಾ ಗುತ್ತಿರುವ ಸೊಳ್ಳೆಗಳನ್ನು ನಾಶಪಡಿಸುವ ಕಾರ್ಯ ಕೈಗೊಂಡಿದೆ.

ನಗರದ 65 ವಾರ್ಡ್‌ಗಳಲ್ಲೂ ಸೊಳ್ಳೆಗಳನ್ನು ನಿರ್ಮೂಲನೆ ಮಾಡಲು ಫಾಗಿಂಗ್ ಮಾಡಲಾಗುತ್ತಿದೆ. ಇದರ ಜತೆಗೆ ನೀರು ನಿಲ್ಲುವ ಸ್ಥಳಗಳು, ಉದ್ಯಾನಗಳು ಸೇರಿದಂತೆ ವಿವಿಧೆಡೆ ಕೆಮಿಕಲ್ ಸ್ಪ್ರೇ ಮಾಡಲಾಗುತ್ತಿದೆ. ನಗರದ ಚರಂಡಿಗಳನ್ನು ಶುಚಿಗೊಳಿಸಿ ನೀರು ನಿಲ್ಲದಂತೆ ಕ್ರಮ ವಹಿಸಲಾಗುತ್ತಿದೆ.

‘ಈಡಿಸ್ ಈಜಿಪ್ಟೈ’ ಎಂಬ ಸೊಳ್ಳೆಯು ಜ್ವರವನ್ನು ಹರಡುತ್ತಿದೆ. ಈ ಸೊಳ್ಳೆಯು ತಿಳಿ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತಿ ಮಾಡುತ್ತದೆ. ಹೀಗಾಗಿ ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಮಡುಗಟ್ಟಿ ನಿಲ್ಲದಂತೆ ನೋಡಿಕೊಂಡರೆ ಜ್ವರದಿಂದ ಪಾರಾಗಬಹು ದು. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಮನೆ ಮನೆಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಕುಡಿದು ಎಸೆದಿರುವ ಎಳನೀರು ಬೊಂಡಗಳಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳು ಉತ್ಪತಿಯಾಗುವ ಸಾಧ್ಯತೆ ಹೆಚ್ಚು ಇರುವ ಹಿನ್ನೆಲೆಯಲ್ಲಿ ನಗರದ ಎಲ್ಲ ಕಡೆಗಳಲ್ಲೂ ಎಳನೀರು ಬೊಂಡಗಳ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ಮನೆ ಮುಂದೆ ಉರುವಲಿ ಗೋಸ್ಕರ ಎಳನೀರು ಬೊಂಡಗಳನ್ನು ಕೆಲವರು ಸಂಗ್ರಹಿರುತ್ತಾರೆ. ಅಂತಹ ಮನೆಯ ಮಾಲೀಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ. ಅದೇ ರೀತಿ ಟೀ, ಕಾಫಿ ಕುಡಿಯಲು ಬಳಸುವ ಪೇಪರ್ ಕಪ್‌ಗಳನ್ನು ಎಲ್ಲೆಂದರಲ್ಲಿ ಎಸೆದರೆ ಆ ಕಪ್‌ನಲ್ಲಿ ಮಳೆ ನೀರು ನಿಂತು ಸೊಳ್ಳೆಗಳು ಉತ್ಪತಿಯಾಗುವ ಸಾಧ್ಯತೆ ಇದೆ. ಹೀಗಾಗಿ ನಗರದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.

ಶಾಲಾ, ಕಾಲೇಜುಗಳಿಗೆ ಪಾಲಿಕೆ ಅಧಿಕಾರಿಗಳು ತೆರಳಿ ಡೆಂೆ ಜ್ವರದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಡೆಂೆ ಜ್ವರ ಹೇಗೆ ಹರಡುತ್ತದೆ? ನಿಯಂತ್ರಣ ಹೇಗೆ ಮಾಡಬಹುದು? ನಾವು ವಹಿಸಬೇಕಾಗಿರುವ ಪಾತ್ರದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಡ್ರೈ ಡೇ ಆಚರಣೆ: ಡೆಂಘೆ ಜ್ವರ ಹರಡುವ ‘ಈಡಿಸ್ ಈಜಿಪ್ಟೈ’ ಸೊಳ್ಳೆ ತಿಳಿ ನೀರಿನಲ್ಲಿ ಮೊಟ್ಟೆ ಮಾತ್ರ ಮೊಟ್ಟೆ ಇಡುತ್ತದೆ. ಒಂದು ಬಾರಿ ಮೊಟ್ಟೆ ಇಟ್ಟರೆ ಮೊಟ್ಟೆ ಲಾರ್ವವಾಗಿ ನಂತರ ಸೊಳ್ಳೆಯಾಗಲು ಬೆಳವಣಿಗೆ ಹೊಂದಲು 10 ರಿಂದ 15 ದಿನಗಳು ಅವಶ್ಯಕ. ಹೀಗಾಗಿ ಕನಿಷ್ಠ ವಾರಕ್ಕೆ ಒಮ್ಮೆ ನೀರು ಬದಲಾಯಿಸಿದರೆ ಲಾರ್ವಗಳು ನಾಶವಾಗುತ್ತವೆ. ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗೋ ಪಾಲಕರು ಇದ್ದು, ಗೋವುಗಳಿಗೆ ನೀರು ಕುಡಿಸಲು ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ತೊಟ್ಟಿಯನ್ನು ವಾರಕ್ಕೆ ಒಂದು ಬಾರಿ (ಪ್ರತಿ ಶುಕ್ರವಾರ) ಸಂಪೂರ್ಣ ಶುಚಿಗೊಳಿಸಿ ಹೊಸದಾಗಿ ನೀರು ತುಂಬಿಸುವಂತೆ ಪಾಲಿಕೆ ಅಧಿಕಾರಿಗಳು ಗೋಪಾಲಕರಲ್ಲಿ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಶುಕ್ರವಾರವನ್ನು ಡ್ರೈ ಡೇ ಎಂದು ಘೋಷಿಸಲಾಗಿದೆ. ಆ ದಿನ ನೀರಿನ ತೊಟ್ಟಿ ಶುಚಿಗೊಳಿಸಬೇಕು. ಅದೇ ರೀತಿ ಮನೆ ಮುಂದೆ ಪಶು, ಪ್ರಾಣಿಗಳಿಗೆ ನೀರು ಇಡುವ ಜನರು ಕನಿಷ್ಠ ವಾರಕ್ಕೊಮ್ಮೆಯಾದರೂ ನೀರನ್ನು ಬದಲಾಯಿಸಿದರೆ ಡೆಂೆ ಜ್ವರದಿಂದ ದೂರ ಉಳಿಯಬಹುದು.

ಡೆಂಘೆ ಹೇಗೆ ಹರಡುತ್ತದೆ?: ‘ಈಡಿಸ್ ಈಜಿಪ್ಟೈ’ ಸೊಳ್ಳೆ ಮೂಲಕ ಡೆಂೆ ಜ್ವರ ಹರಡುತ್ತದೆ. ಈ ಸೊಳ್ಳೆಯು ತಿಳಿ ನೀರಿನಲ್ಲಿ ಮಾತ್ರ ಮೊಟ್ಟೆ ಇಟ್ಟು ಸಂತಾನೋತ್ಪತಿ ಮಾಡುತ್ತದೆ. ಈ ಸೊಳ್ಳೆಯ ಹಗಲಿನಲ್ಲಿ ಮಾತ್ರ ಕಚ್ಚುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಗೂ ವಯೋವೃದ್ಧರು ಜ್ವರಕ್ಕೆ ಗುರಿಯಾಗುತ್ತಿದ್ದಾರೆ. ಜ್ವರ ಕಾಣಿಸಿಕೊಂಡ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಮೂರು ಹಂತಗಳಲ್ಲಿ ಕಾಡುವ ಈ ಡೆಂೆಯಲ್ಲಿ ಸಾಮಾನ್ಯ ಜ್ವರ, ಡೆಂೆ ಹೆಮೊರೈಜಿನ್ (ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು) ಮತ್ತು ಡೆಂೆ ಶಾಕ್ ಸಿಂಡ್ರೋಮ್ (ದೇಹದಲ್ಲಿ ರಕ್ತಸ್ರಾವ ಉಂಟಾಗುತ್ತದೆ).

ರೋಗ ಲಕ್ಷಣಗಳೇನು?: ಡೆಂಘೆ ಜ್ವರ ಕಾಣಿಸಿಕೊಂಡ ವ್ಯಕ್ತಿಗಳಲ್ಲಿ ದಿಢೀರಾಗಿ ಜ್ವರ, ತಲೆನೋವು ಕಾಣಿಸಿಕೊಳ್ಳುತ್ತದೆ. ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆ ನೋವು, ತೋಳು, ಮೈ ಕೈ ನೋವು, ಅತಿಸಾರ ಕಾಣಿಸಿಕೊಳ್ಳುತ್ತದೆ. ಗಂಭೀರ ಹಂತ ತಲುಪಿದಾಗ ಕರುಳಿನಲ್ಲಿ ರಕ್ತಸ್ರಾವ ಉಂಟಾಗುತ್ತದೆ.

ನಗರದಲ್ಲಿ ಡೆಂಘೆ ಜ್ವರ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನರಲ್ಲಿ ನಿರಂತರವಾಗಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ನೀರು ನಿಲ್ಲುವ ಜಾಗಗಳಲ್ಲಿ ಕೆಮಿಕಲ್ ಸ್ಪ್ರೇ ಮಾಡಲಾಗುತ್ತಿದೆ. ಇದರ ಜತೆಗೆ ಸೊಳ್ಳೆಗಳ ನಿರ್ಮೂಲನೆಗೆ ಎಲ್ಲ ವಾರ್ಡ್‌ಗಳಲ್ಲೂ ಫಾಗಿಂಗ್ ಮಾಡಲಾಗುತ್ತಿದೆ. ಡೆಂೆ ಜ್ವರಕ್ಕೆ ನಿರ್ದಿಷ್ಟವಾದ ಔಷಧವಿಲ್ಲ. ಹೀಗಾಗಿ ಜನರು ಮುಂಜಾಗ್ರತೆ ವಹಿಸಿ ಜ್ವರ ಬಾರದಂತೆ ತಡೆಯಬಹುದು. ಜನರು ಮನಸ್ಸು ಮಾಡಿದರೆ ಡೆಂೆ ಜ್ವರ ಹರಡುವುದನ್ನು ಸಂಪೂರ್ಣ ತಡೆಯಬಹುದು.
ಡಾ.ವೆಂಕಟೇಶ್,
ಪಾಲಿಕೆ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net