ವಿಚಾರ ಸಂಕಿರಣಗಳಿಂದ ಅರಿವು

sahyadri
ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ತತ್ವ ಪದ: ತಾತ್ವಿಕ ನಿಲುವುಗಳು ವಿಚಾರ ಸಂಕಿರಣವನ್ನು ಕರಿಯಪ್ಪ ಉದ್ಘಾಟಿಸಿದರು. ಪ್ರೊ. ಜಿ.ಪ್ರಶಾಂತ ನಾಯಕ, ಪ್ರೊ. ಎನ್.ರಾಜೇಶ್ವರಿ, ಪ್ರೊ. ಎಸ್.ಎಂ.ಮುತ್ತಯ್ಯ ಇತರರಿದ್ದರು.
Published on

ಶಿವಮೊಗ್ಗ: ಸಂತ ಕವಿ ಕನಕದಾಸರ ಚಿಂತನೆ ಹಾಗೂ ಕೀರ್ತನೆಗಳನ್ನು ನಾಡಿನಾದ್ಯಂತ ಪ್ರಸಾರ ಮಾಡುತ್ತ ಜನರಲ್ಲಿ ಜ್ಞಾನ ಮತ್ತು ಅರಿವು ಮೂಡಿಸಲು ವಿಚಾರ ಸಂಕಿರಣಗಳು ಸಹಕಾರಿ ಎಂದು ಸಂತ ಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿ ಕರಿಯಪ್ಪ ಹೇಳಿದರು.

ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗವು ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ತತ್ವ ಪದ: ತಾತ್ವಿಕ ನಿಲುವುಗಳು ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಸಂಚಾಲಕ ಪ್ರೊ. ಹಾ.ಮ.ನಾಗಾರ್ಜುನ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ವಿಚಾರಧಾರೆಗಳನ್ನು ಕೊಡುವ ನಿಟ್ಟಿನಲ್ಲಿ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಅವರು ಸಹ್ಯಾದ್ರಿ ಕಾಲೇಜನ್ನು ಪರಿಗಣಿಸಿ, ಕಾಲೇಜಿನ ಪರಂಪರೆ ಗ್ರಹಿಸಿ ಅವಕಾಶ ಕಲ್ಪಿಸಿರುವುದು ಸಂಸ್ಥೆ ಘನತೆ ಹೆಚ್ಚಿಸಿದೆ ಎಂದರು.

ಪ್ರಾಚಾರ್ಯೆ ಪ್ರೊ. ಎನ್.ರಾಜೇಶ್ವರಿ, ಕುವೆಂಪು ವಿವಿ ಪ್ರಾಧ್ಯಾಪಕ ಪ್ರೊ. ಜಿ.ಪ್ರಶಾಂತ ನಾಯಕ, ಕನ್ನಡ ಪ್ರಾಧ್ಯಾಪಕ ಪ್ರೊ. ಎಸ್.ಎಂ.ಮುತ್ತಯ್ಯ ಮತ್ತಿತರರಿದ್ದರು. ಕಲಾಶ್ರೀ ರಾಮ ಸುಬ್ರಾಯ್ ಶೇಟ್ ಮತ್ತು ತಂಡದವರು ಗಮಕ ಗಾಯನ ಮತ್ತು ವ್ಯಾಖ್ಯಾನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net