ವಿಜಯಪುರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ಜಿಲ್ಲಾ ಟಕದಿಂದ ನೀಡುವ 2024ನೇ ಸಾಲಿನ ಸಂದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸ್ಥಾನಿಕ ಸಂಪಾದಕರು, ಜಿಲ್ಲೆ, ತಾಲೂಕು ವರದಿಗಾರರು, ಕ್ಯಾಮರಾಮನ್ ಹಾಗೂ ಪತ್ರಿಕಾ ವಿತರಕರು ಸೇರಿ ಒಟ್ಟು 31 ಜನರಿಗೆ ಈ ಬಾರಿ ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಸಂದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಹಾಗೂ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ತಿಳಿಸಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಜು. 28ರಂದು ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಸಂದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಸಂಸದ ರಮೇಶ ಜಿಗಜಿಣಗಿ ಹಾಗೂ ಜಿಲ್ಲೆಯ ಶಾಸಕರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿ ಪುರಸತರ ಪಟ್ಟಿ : ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ್, ವಿಜಯ ಕರ್ನಾಟಕದ ಸ್ಥಾನಿಕ ಸಂಪಾದಕ ಈರಣ್ಣ ಎಂಬಿ ಗೌಡರ, ಕನ್ನಡದೀಪ ಪತ್ರಿಕೆಯ ಸಂಪಾದಕ ಕಲ್ಯಾಣರಾವ್ ಕುಲಕರ್ಣಿ, ಗುಮ್ಮಟ ನಗರಿ ವ್ಯವಸ್ಥಾಪಕ ಸಂಪಾದಕ ಇರ್ಫಾನ್ ಶೇಖ್, ಉದಯ ವಾರ್ತೆಯ ಸಂಪಾದಕಿ ಲಕ್ಷಿ$್ಮ ವಾಲೀಕಾರ, ರಿಪಬ್ಲಿಕ್ ಟಿವಿ ಕ್ಯಾಮರಾಮನ್ ಸುನೀಲ ಗೋಡೆನವರ, ಪಬ್ಲಿಕ್ ಟಿವಿ ಕ್ಯಾಮರಾಮನ್ ಸುನೀಲ ಕಾಂಬಳೆ, ಇನ್ ನ್ಯೂಸ್ ವರದಿಗಾರ ವಿಜಯ ಸಾರವಾಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಡಚಣದ ಕನ್ನಡಮ್ಮ ವರದಿಗಾರ ತುಕಾರಾಮ ಕೋಳಿ, ಕನ್ನಡಪ್ರಭ ವರದಿಗಾರ ಶಂಕರ ಹಾವಿನಾಳ, ಬಸವನಬಾಗೇವಾಡಿಯ ಉದಯವಾಣಿ ವರದಿಗಾರ ಪ್ರಕಾಶ ಬೆಣ್ಣೂರ, ಕನ್ನಡಪ್ರಭ ವರದಿಗಾರ ಬಸವರಾಜ ನಂದಿಹಾಳ, ಇಂಡಿಯ ಸಂಯುಕ್ತ ಕರ್ನಾಟಕ ವರದಿಗಾರ ಸಿದ್ದಯ್ಯ ಹಿರೇಮಠ, ಗುಮ್ಮಟನಗರಿ ವರದಿಗಾರ ಸದ್ದಾಂಹುಸೇನ್ ಜಮಾದಾರ, ಸಿಂದಗಿಯ ಕನ್ನಡಪ್ರಭ ವರದಿಗಾರ ಸಿದ್ಧಲಿಂಗ ಕಿಣಗಿ, ವಿಜಯ ಕರ್ನಾಟಕದ ವರದಿಗಾರ ಸುದರ್ಶನ ಜಂಗಣ್ಣಿ, ದೇವರಹಿಪ್ಪರಗಿಯ ಭೂಮಿವಾಣಿ ವರದಿಗಾರ ಈರನಗೌಡ ಪಾಟೀಲ, ಉದಯಕಾಲ ವರದಿಗಾರ ರಫೀಕ್ಅಹ್ಮದ್ ಮೋಮಿನ್, ಮುದ್ದೇಬಿಹಾಳದ ವಿಜಯವಾಣಿ ವರದಿಗಾರ ಜಿ.ಎನ್. ಬೀರಗೊಂಡ ಮತ್ತು ಡೈಲಿ ಸಾಲಾರ್ ವರದಿಗಾರ ಲಾಡ್ಲೇಮಶಾಕ್ ಅಬ್ದುಲ್ಗಣಿ ಶೇಖ್ ಅವರನ್ನು ಆಯ್ಕೆ ಮಾಡಲಾಗಿದೆ.
ಜತೆಗೆ ತಿಕೋಟಾದ ವಿಜಯ ಕರ್ನಾಟಕ ವರದಿಗಾರ ಸಾತಲಿಂಗಯ್ಯ ಸಾಲಿಮಠ, ಕ್ರಾಂತಿ ಧ್ವನಿ ವರದಿಗಾರ ನಿಂಗಪ್ಪ ಸಂಗಾಪುರ, ತಾಳಿಕೋಟೆಯ ಕನ್ನಡಮ್ಮ ವರದಿಗಾರ ಸುನೀಲ ತಳವಾರ, ಮೈಬೂಬ್ ಸುಬಾನಿ, ನಿಡಗುಂದಿಯ ವಿಜಯ ಕರ್ನಾಟಕ ವರದಿಗಾರ ಮಹೇಶ ಆಡಾಳಿ, ಆಲಮಟ್ಟಿಯ ವಿಜಯವಾಣಿ ವರದಿಗಾರ ಮಲ್ಲಿಕಾರ್ಜುನಯ್ಯ ತೊರಗಲ್ಲಮಠ, ಕೊಲ್ಹಾರದ ಉದಯವಾಣಿ ವರದಿಗಾರ ಅರುಣ ಔರಸಂಗ, ಆಲಮೇಲದ ಹೊಸ ದಿಗಂತ ವರದಿಗಾರ ಅಮರ ನಾರಾಯಣಕರ, ಉದಯವಾಣಿಯ ವರದಿಗಾರ ಅವಧೂತ ಭಂಡಗಾರ ಹಾಗೂ ಪತ್ರಿಕಾ ವಿತರಕರಾದ ವಿಜಯಪುರದ ದಯಾನಂದ ಶಿರಶ್ಯಾಡ ಮತ್ತು ಬಸವನಬಾಗೇವಾಡಿ ತಾಲೂಕಿನ ಮನಗೂಳಿಯ ಶಿವಾಜಿ ಮೋರೆ ಅವರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ.
ಪ್ರತಿಭಾ ಪುರಸ್ಕಾರ : ವಾರ್ಷಿಕ ಪ್ರಶಸ್ತಿ ಜತೆಗೆ ಕಳೆದ ಬಾರಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 80 ಕ್ಕೂ ಅಧಿಕ ಅಂಕ ಪಡೆದ 15 ಜನ ಪತ್ರಕರ್ತರ ಮಕ್ಕಳಿಗೆ ಇದೇ ವೇಳೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.