ಫ್ಲೋರ್​ಬಾಲ್​ ಚಾಂಪಿಯನ್​ಶಿಪ್​ನಲ್ಲಿ ರಾಜ್ಯ ತಂಡಕ್ಕೆ ಪ್ರಶಸ್ತಿ; ತಮಿಳುನಾಡಿನಲ್ಲಿ ಆಯೋಜಿಸಿದ್ದ ಪಂದ್ಯಾವಳಿ

Floorball
Published on

ಬೆಂಗಳೂರು: ಅಂತಾರಾಷ್ಟ್ರೀಯ ಫ್ಲೋರ್​ಬಾಲ್​ ಒಕ್ಕೂಟ, ಫ್ಲೋರ್​ಬಾಲ್​ ಅಸೋಷಿಯೇಷನ್​ ಆಫ್​ ತಮಿಳುನಾಡು ಹಾಗೂ ಫಿಟ್​ ಇಂಡಿಯಾ ಸಹಯೋಗದಲ್ಲಿ ಜ.26 ರಿಂದ 28ರ ವರೆಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆಯೋಜಿಸಿದ್ದ 17ನೇ ರಾಷ್ಟ್ರೀಯ ಫ್ಲೋರ್​ಬಾಲ್​ ಚಾಂಪಿಯನ್​ಶಿಪ್​ನಲ್ಲಿ ರಾಜ್ಯದ ತಂಡ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ರಾಜ್ಯದ 14 ವರ್ಷದ ಹಾಗೂ 17 ವರ್ಷದೊಳಗಿನ ಬಾಲಕರ ತಂಡ ಚಿನ್ನದ ಪದಕ, 19 ವರ್ಷದ ಒಳಗಿನ ಬಾಲಕರ ತಂಡ ಕಂಚಿನ ಪದಕ, 19 ವರ್ಷದ ಒಳಗಿನ ಬಾಲಕಿಯರ ತಂಡ ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಅಂಚೆಪಾಳ್ಯದ ಸೇಂಟ್​ ಬೆನಡಿಕ್ಟೈನ್​ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರಿಗೆ ಸೇಂಟ್​ ಬೆನಡಿಕ್ಟೈನ್ ಸಮೂಹ ಸಂಸ್ಥೆಯ ಆಡಳಿತ ಮಂಡಳಿ ಶುಭಾಶಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net