ನದಿ ಪ್ರಪಾತಕ್ಕೆ ಉರುಳಿದ ರಿಕ್ಷಾ; ಮಹಿಳೆ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ

Accident
Published on

ದಕ್ಷಿಣಕನ್ನಡ: ಆಟೋರಿಕ್ಷಾವೊಂದು ನದಿ ಪ್ರಪಾತಕ್ಕೆ ಉರುಳಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ಈ ಅಪಘಾತ ಸಂಭವಿಸಿದೆ. ಚಾಲನಕ ನಿಯಂತ್ರಣ ತಪ್ಪಿದ ಆಟೋರಿಕ್ಷಾ ನದಿಯ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ಪರಿಣಾಮವಾಗಿ ಕಕ್ಕಿಂಜೆ ಕತ್ತರಿಗುಡ್ಡೆಯ ಸಫೀಯ (57) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಆಟೋದಲ್ಲಿದ್ದ ಉಳಿದ ಪ್ರಯಾಣಿಕರಾದ ಮಹಮ್ಮದ್ ಆಶ್ರಫ್, ಮರಿಯಮ್ಮ ಅವರಿಗೆ ಗಾಯಗಳಾಗಿವೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net