ಬೆಟ್ಟದಿಂದ ಉರುಳಿತು 16 ಜನರಿದ್ದ ಗೂಡ್ಸ್​ ಆಟೋ; ಮದ್ವೆ ಮುಗಿಸಿ ಬರುತ್ತಿದ್ದ ಏಳು ಮಂದಿ ಸಾವು

Untitled-1
ಪೊಲೀಸರಿಂದ ಸ್ಥಳ ಪರಿಶೀಲನೆ
Published on

ರಾಜಮಂಡ್ರಿ: ಮದುವೆ ಸಮಾರಂಭ ಮುಗಿಸಿ ಮರಳುತ್ತಿದ್ದ, ಹದಿನಾರು ಮಂದಿ ಪ್ರಯಾಣಿಕರಿದ್ದ ಗೂಡ್ಸ್ ಆಟೋ ಬೆಟ್ಟದ ಮೇಲಿಂದ ಉರುಳಿದೆ. ಪರಿಣಾಮ ಅದರಲ್ಲಿದ್ದವರ ಪೈಕಿ ಏಳು ಜನರು ಸಾವಿಗೀಡಾಗಿದ್ದಾರೆ. ಇಂಥದ್ದೊಂದು ಅಪಘಾತ ಶುಕ್ರವಾರ ತಡರಾತ್ರಿ 2.30ರ ಸುಮಾರಿಗೆ ಸಂಭವಿಸಿದೆ.

ಆಂಧ್ರಪ್ರದೇಶದ ಈಸ್ಟ್​ ಗೋದಾವರಿ ಜಿಲ್ಲೆಯ ತನಿಕೊಂಡ ಗ್ರಾಮದ ದೇವಸ್ಥಾನವೊಂದರ ಬಳಿಯ ಬೆಟ್ಟದ ತಪ್ಪಲಿನಿಂದ ಈ ಗೂಡ್ಸ್ ಆಟೋ ಉರುಳಿದೆ. ವಾಹನದಲ್ಲಿ 16 ಮಂದಿ ಇದ್ದು, 7 ಜನರು ಮೃತಪಟ್ಟಿದ್ದಾರೆ ಎಂದು ರಾಜಮಂಡ್ರಿ ಎಸ್​ಪಿ ಶೇಮುಷಿ ಬಾಜ್​ಪೇಯ್​ ತಿಳಿಸಿದ್ದಾರೆ.

ಆಟೋ ಚಾಲಕ ಪಚಿಕುರಿ ನರಸಿಂಹ ದೋರಾ ಎಂಬಾತನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆತನೂ ಮೃತಪಟ್ಟಿದ್ದಾನೆ. ಬೆಟ್ಟದ ಮೇಲಿನ ದೇವಸ್ಥಾನಕ್ಕೆ ತೆರಳುವ ಮೆಟ್ಟಿಲುಗಳ ಮೇಲೆ ರಿಕ್ಷಾ ಉರುಳಿದ್ದು, ಅದು ವಿಜಯವಾಡದ ಇಂದ್ರಕೀಳಾದ್ರಿಯಷ್ಟು ಎತ್ತರದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net